ಹೂವಿನ ಸಾವು

ಮಂಜಿನ ಮರೆಗೆ ತಿಪ್ಪೆಯ ಒಳಗೆ ಹೂವೊಂದು ಅರಳಿತ್ತು ಮತ್ತನ ಮೈಯಿ ಕೆಂಪನೆ ಬಾಯಿ ಥರ ಥರ ನಡುಗಿತ್ತು ಕಣ್ಣಲಿ ಕಂಬನಿ ನುಣ್ಣನೆ ನಲ್ದನಿ ನಸುಕನು ಹರಿದಿತ್ತು ಯಾರದು ತಂದೆ? ಯಾರದು ತಾಯಿ? ಎಲ್ಲರ ಕೇಳಿತ್ತು...

ಮಾಯಾವಿ ಹೂವು

ಗಟ್ಟಿಮುಟ್ಟಾದ ತೋಳು ತೊಡೆ ತಟ್ಟಿ ಅಖಾಡದಲ್ಲಿ ಸೆಣೆಸಾಡಿದ ಜಟ್ಟಿ ಹೂಮಾಲೆ ಕಂಡೊಡನೆ ತಲೆಬಾಗಿದ ರಣರಂಗದಲ್ಲಿ ನೂರಾರು ರುಂಡ ಚಂಡಾಡಿದ ಭುಜಬಲ ಪರಾಕ್ರಮಿ ಹೂಮಾಲೆ ಕಂಡೊಡನೆ ತಲೆ ಬಾಗಿದ ಹೂವಿನ ಹಿರಿಮೆಯನು ಬಲ್ಲವನೇ ಬಲ್ಲ ಲೋಕದಲಿ...

ಹೂವಿನ ನಿಷ್ಠೆ

ಜನನದಲ್ಲಿ ಮರಣದಲ್ಲಿ ಹೂವು ಜತೆಯಾಗುವುದು ಸಂತೋಷದಲ್ಲಿ ದುಃಖದಲ್ಲಿ ಹೂವು ಭಾಗಿಯಾಗುವುದು ಮಿಕ್ಕವರು ಮರಳಿದರೂ ಮಸಣದಲ್ಲಿ ಹೂವು ಉಳಿದೇ ಉಳಿಯುವುದು ಆಳಿದವನ ಆತ್ಮವನ್ನು ಪರಮಾತ್ಮನೆಡೆ ಕೊಂಡೊಯ್ಯುವುದು. *****

ಒಲುಮೆಯ ಹೂವು

ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...

ಹೂವಿನ ಭಾಷೆ

ಹೂವು ಮಿತಭಾಷಿ ಮರಿ ದುಂಬಿಯ ಜೊತೆ ಸ್ನೇಹ ಮಾಡುವುದು ಗಾಳಿಯೊಡನೆ ಲಲ್ಲೆಯಾಡುವುದು ಚಿಟ್ಟೆಯನೂ ಮಾತಿಗೆ ಎಳೆಯುವುದು ಪ್ರೀತಿಯೆ ಹೂವಿನ ಭಾಷೆ ಅದಿಲ್ಲದಿರಲು ಪೂರೈಸದು ಹೂವಿನೊಂದಿಗೆ ಮಾತಾಡುವ ಆಶೆ. *****

ಹೂದುಂಬಿ

ಹೂವಿನ ದಳಗಳಂತೆ ಕಣ್ಣುಗಳನ್ನು ತೆರೆದು ಸುಗಂಧ ಜಲವ ಬೀಸಿ ಸೆಳೆದಾಗ ಬಂತು ದುಂಬಿ ದೇವ ಮೈದುಂಬಿ ಬಂದಂತೆ ಹೀರಿ ಹನಿ ಮಕರಂದ ಊರಿ ಹೂ ಮೈಯೊಳಗೆ ಹುದುಗಿ ಹಗುರಾಗಿ ಎದೆಯ ಮೇಲೊರಗೆ ಅಂದೆ: ನೀನೀಗ...

ಹೂವಿನ ಧ್ಯಾನ

ಕರುಣಾಮಯಿ ಹೂವು ಜಗತ್ತಿನ ಒಳಿತಿಗಾಗಿ ಧೇನಿಸುವುದು ಹೂವಿನ ಧ್ಯಾನವೆ ಧ್ಯಾನ ಅದು ಪರಿಮಳಿಸಿ ಲೋಕವ ವ್ಯಾಪಿಸುವುದು ಪರಿಮಳಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್‍ಗಮಿಸುವುದು ಹೂವಿಗೆ ಧ್ಯಾನವೇ ಜೀವನ ಮರಣವೂ ಹೂವಿಗೆ ಸಮಾನ. *****

ಬುದ್ಧ ಮತ್ತು ಹೂವು

ಗರ್‍ವವೆಂಬುದು ಹೂವಿನ ಬಳಿ ಸುಳಿಯದು ಎಷ್ಟೊಂದು ಚೆಲುವು ಘನವಾದ ಒಲವು ನಿರಂತರ ಧ್ಯಾನದ ಫಲವು ಮೈತ್ರಿ-ಕರುಣೆ ಎಂದು ಬುದ್ಧ ಬೋಧಿಸಿದ್ದ ಪೂರ್‍ವಜನ್ಮದ ಸ್ಮರಣೆ ಅವನು ಹೂವಾಗಿದ್ದ. *****

ದೇವರ ಹೂವು

ಶಿಕ್ಷೆ ಏನೆಂಬುದು ಹೂವಿಗೆ ತಿಳಿಯದು ತಾನೆ ರಕ್ಷಿಸಿಕೊಳ್ಳಲು ಹೂವು ಅರಿಯದು ಕತ್ತಿಯ ಅಲಗಿನಿಂದ ತಿವಿದರೂ ಹೂವು ತುಂಬು ನಗೆಯನ್ನೆ ಸುರಿಸುವುದು ಅಂತೆಯೆ ದೇವರೇ ಹೂವಿನ ಪಾಲನೆಗೆ ಪಣತೊಟ್ಟಿದ್ದಾನೆ ಚಿಟ್ಟೆಯಾಗಿ ಮರಿದುಂಬಿಯಾಗಿ ಸದಾ ಹೂದೋಟಗಳಲ್ಲಿ ನೆಲೆಸಿದ್ದಾನೆ...

ಹೂವುಗಳು

ಕಿಕ್ಕಿರಿದಿದ್ದವು ಮರದಲ್ಲಿ ಹೂವುಗಳು ಇಡೀ ಮರವು ಒಂದು ಹೂವು ಇಡೀ ಹೂದೋಟವು ಒಂದು ಹೂಗೊಂಚಲು ಇಡೀ ಭೂಮಂಡಲವು ಒಂದು ಹೂ ಬುಟ್ಟಿಯು ಹೂಭಾರಕ್ಕೆ ಪರಿಮಳಕೆ ಪಕ್ಕಾಗಿ ಹೂವಾಡಗಿತ್ತಿಯು ತೂಗಿರಲು- ನೋಡು... ಬ... ಎಂದವನ ಕರೆದೆ...
cheap jordans|wholesale air max|wholesale jordans|wholesale jewelry|wholesale jerseys