ತುಂಬಿದ ಹೊಳೆ
ಸುಡುವ ಬೆಂಕಿ

ಮಿಂಚುವ ಕಣ್ಣು
ಕತ್ತಿಯ ನಾಲಗೆ

ಕುದಿಯುವ ರಕ್ತ
ಮಣಿಯದ ತೋಳು

ಚಿರತೆಯ ನಡೆ
ಹದ್ದಿನ ನೋಟ

ಒನಪು-ವಯ್ಯಾರ
ಆರ್‍ಭಟ-ಆವೇಶ

ಅಗಾಧ ಹಸಿವು
ಅಚಲ ವಿಶ್ವಾಸ

ಪುಟ್ಟ ಹೃದಯ
ದೊಡ್ಡ ಆಶೆ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)