ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರಿಯು ಸಿಕ್ಕಲು, ಸಿಂಹವು ಅದನ್ನು ತಂದು ಹೆಂಡತಿಗೆ ಕೊಟ್ಟಿತು....

ಬಾರ ಗೆಳತಿ ಬಾರೆ ಗುಣವತಿ ಬಾಳೆಹಳ್ಳಿಗೆ ಹೋಗುವಾ ಗುಟ್ಟಬೆಟ್ಟದ ಗಂಧ ಗಿರಿಗಳ ಸ್ವಾಮಿ ಪಾದವ ಸೇರುವಾ ಎಲ್ಲಿ ಕೋಗಿಲೆ ಶಿವನ ಪೂಜೆಗೆ ಗೀತ ಮಂತ್ರವ ಹಾಡಿವೆ ಎಲ್ಲಿ ಕಾನನ ಹಸಿರು ಮರಗಳು ಹೂವು ಹಣ್ಣನು ನೀಡಿವೆ ಸುತ್ತ ಮುತ್ತಾ ಬೀಸುಗಾಳಿಯು ಮಹಾಮಂತ್ರ...

ಅಧ್ಯಾಯ ಏಳು ಸೀಮಿತ ಮಾರುಕಟ್ಟೆ, ವಿತರಣಾ ಸಮಸ್ಯೆ ಮತ್ತು ಲಾಭದ ಕೊರತೆಯಿಂದ ನರಳುತ್ತಿದ್ದರೂ ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಶೀಲತೆಗೆ ಅಷ್ಟಾಗಿ ಕೊರತೆಯಿರಲಿಲ್ಲ. ಕನ್ನಡ ಚಿತ್ರವೊಂದರ ಮೇಲೆ ನಡೆಸಲಾದ ಯಶಸ್ವೀ ಪ್ರಯೋಗವೊಂದು ಮುಂದೆ ...

ಇ೦ದು ಸಂಜೆಯ ನಿಟ್ಟು ನಿಟ್ಟಿಗೆ ಬೆಳೆದು ನಿಂತಿದೆ ಸಂಪದ ಹಕ್ಕಿ ಹಾರಿದ ಹಾಗೆ ಹರಿಯಿತು ಮನದಿ ಊರಿದ ಆ ಪದ ಚೆಂಗುಲಾಬಿಯ ಬನವು ಅರಳಿದೆ ನೋಡು ಬಾನಿನ ದಂಡೆಗೆ ಪ್ರಾಣ ಶುಕವೇ ಕ್ಷುಬ್ಧವಾಯಿತು ಬಂತು ಕಣ್ಣಿನ ಕಿಂಡಿಗೆ ಸ್ವರ್ಗಲೋಕದ ಸ್ವರ್ಣ ದ್ವಾರವು ...

ನನ್ನ ಮದ್ದಾನೆಯೆ! ನಿನ್ನ ತೋಳ ಸೊಂಡಿಲಾಡಿಸಪ್ಪಾ- ಮಗುವೆ! ಆಡು-ಆಡು. ನನ್ನ ಪಾರಿವಾಳವೆ ನಿನ್ನ ಗೋಣನ್ನಾಡಿಸಪ್ಪಾ- ಮಗುವೆ! ಆಡು-ಆಡು. ನನ್ನ ಅರಸಂಚೆಯೆ! ಅಡಿಯಿಡು, ನಡೆ ನಡೆ. ಮಗುವೆ! ಆಡು-ಆಡು ನನ್ನ ಅರಗಿಳಿಯೇ! ತುಟಿ ಬಿಚ್ಚು, ನುಡಿ ನುಡಿ. ಮಗ...

ಗಣಿಯಿಂದ ತೆಗೆದ ಒಂದು ಚಿಕ್ಕಬಂಡೆಯನ್ನು ಕೈಯಲ್ಲಿ ಹಿಡಿದು, ಗುರುಗಳು ಕೇಳಿದರು. ಶಿಷ್ಯರಲ್ಲಿ ಒಂದು ಪ್ರಶ್ನೆ. “ಇದನ್ನು ಏನೆಂದು ಕರೆಯುತ್ತೀರಿ?” “ಕಲ್ಲು ಬಂಡೆ” ಎಂದ ಒಬ್ಬ. “ಇಲ್ಲ, ಅದು ಬಂಗಾರವಡಗಿರುವ ಕಲ್ಲು ಬಂಡೆ&#82...

ಅಪ್ಪಂಗೊಂದು, ಅಮ್ಮಗೊಂದು, ಪರಿಸರಕೊಂದು ಇಪ್ಪ ಪರಿಸರದ ಸಂಬಂಧಗಳನೆಲ್ಲ ಕೊಂದು ಕಳೆ ದಿರ್‍ಪ ಸಿರಿತನವ ನೆನೆದು ಮರುಗಲಿಕೆಂದು ತಪ್ಪದಾಚರಿಪರಲಾ ವಿಶ್ವ ದಿನಗಳನೆಷ್ಟೊಂದು ಒಪ್ಪದೊಳಿಪ್ಪಲ್ಲೇ ಮೇಯದೊಡೆಲ್ಲ ಶ್ರಾದ್ಧವು ವ್ಯರ್‍ಥ – ವಿಜ್ಞಾನೇಶ...

(ಪ್ರತಿ ಸಾಲಿನ ಕೊನೆಗೆ “ತಂದನಂದನವೇ” ಎನ್ನಬೇಕು) ವಂದ ತಾಯಿಗೇ ವಂದಲು ಮಗನೇ ತಂದನಂದನವೇ ವಂದಲು ಮಗುನೆ ಜನುಸೀದನಲ್ಲೇ ಅವ್ನಲು ನಗ್ನಾ ಮಾಡಲುಬೇಕ ತವ್ರಮನಿಗೋಗೇ ಹೇಲ್‌ಕೇಳ್ಕಬಂತೂ ||೧|| ಹೊನ್ನಮ್ಮಾ ಸೊಸಿಯ ನಗ್ಗನ ಮಾಡಿತೂ ತಾಯಿ ಮ...

ಹುಸೇನ್ ಸಂಭ್ರಮದಲ್ಲಿ ಊರಿಗೆ ಬಂದ. ಮುಖ್ಯಮಂತ್ರಿಗಳ ಸಂದರ್ಶನಕ್ಕೆ ಸಮಯ ಕೊಡಿಸಿದ ಹೆಮ್ಮೆ ಆತನದು. ಗೆಸ್ಟ್ ಹೌಸ್ ಹತ್ತಿರ ರಷೀದ್ ಮತ್ತು ಗೆಳೆಯರನ್ನು ತಲುಪಿಸಿದಾಗ ಅವರು ‘ನೀನು ಹೋಗು’ ಎಂದು ಒತ್ತಾಯಿಸಿದರಂತೆ. ‘ಸಾಧ್ಯವಾದ...

ಹಗಲು ಇರಳು ನಿನ್ನದೆನ್ನುತ್ತ ಯಾತಕ್ಕಾಗಿ ಹಪ ಹಪಿಸುವೆ ನಿನ್ನ ಸಂಪತ್ತು ಆಸ್ತಿಗಳಿಗಾಗಿ ದುಡಿದು ದುಡಿದು ಶಪಿಸುವೆ ಕೋಟಿ ಕೋಟಿ ಹಣವ ಗಳಿಸಿ ಧನವಂತ ನಾಗುವ ದೇತಕೆ ಎಲ್ಲರೆದರೂ ನಿನ್ನ ತನವ ಮೆರೆದು ಯಾವುದನ್ನು ಸಾಧಿಸುವದೇತಕೆ! ಬಿದ್ದು ಹೋಗುವ ತನು...

ದೊಡ್ಡ ಮರದ ಮೇಲೆ ಅಲ್ಲಲ್ಲಿ ಜೇನುಗೂಡು ರೆಂಬೆಗೊಂದರಂತೆ; ಅಕ್ಕ-ಪಕ್ಕದ ಮನೆಗಳ ರೀತಿ ಜೇನುಹುಳುಗಳ ಹಾರಾಟ ಸಿಹಿಹನಿಯ ಹುಡುಕಾಟ ಜೇನುಗೂಡಿನಿಂದ ತೆರಳಿ, ಮರಳುವ ಆಟ ಸಂಚಯಿಸಿ ತಂದ ಮಕರಂದವ ಚಂದದಲಿ ಶೇಖರಿಸಿ ಹನಿಹನಿಯ ಜೇನನ್ನು ಕಣಜವಾಗಿಸುವ ತವಕ ನಾ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...