ನನ್ನ ಮದ್ದಾನೆಯೆ! ನಿನ್ನ ತೋಳ ಸೊಂಡಿಲಾಡಿಸಪ್ಪಾ-
ಮಗುವೆ! ಆಡು-ಆಡು.

ನನ್ನ ಪಾರಿವಾಳವೆ ನಿನ್ನ ಗೋಣನ್ನಾಡಿಸಪ್ಪಾ-
ಮಗುವೆ! ಆಡು-ಆಡು.

ನನ್ನ ಅರಸಂಚೆಯೆ! ಅಡಿಯಿಡು, ನಡೆ ನಡೆ.
ಮಗುವೆ! ಆಡು-ಆಡು

ನನ್ನ ಅರಗಿಳಿಯೇ! ತುಟಿ ಬಿಚ್ಚು, ನುಡಿ ನುಡಿ.
ಮಗುವೆ! ಆಡು-ಆಡು.

ನನ್ನ ಬೆಳ್ಳಕ್ಕಿಯ ಸಾರು ಸಾರು ಮುಗಿಲಿನ ಕೂಡ
-ಮಗುವೆ! ಆಡು-ಆಡು.

ನನ್ನ ಬೆಳುವವೆ! ಹಾರು ಹಾರು ಹಗಲಿನ ಕೂಡ.
ಮಗುವೆ! ಆಡು-ಆಡು.

ನನ್ನ ನವಿಲೆ ಕುಣಿ ಕುಣಿ! ನನ್ನ ನವಿಲೆ ಮಣಿ ಮಣಿ!
ನನ್ನ ಚದುರ ಚಂದ್ರಮಾ! ಆಡು-ಆಡು.
*****