
ಗಣಿಯಿಂದ ತೆಗೆದ ಒಂದು ಚಿಕ್ಕಬಂಡೆಯನ್ನು ಕೈಯಲ್ಲಿ ಹಿಡಿದು, ಗುರುಗಳು ಕೇಳಿದರು. ಶಿಷ್ಯರಲ್ಲಿ ಒಂದು ಪ್ರಶ್ನೆ. “ಇದನ್ನು ಏನೆಂದು ಕರೆಯುತ್ತೀರಿ?”
“ಕಲ್ಲು ಬಂಡೆ” ಎಂದ ಒಬ್ಬ.
“ಇಲ್ಲ, ಅದು ಬಂಗಾರವಡಗಿರುವ ಕಲ್ಲು ಬಂಡೆ” ಎಂದ ಮತ್ತೊಬ್ಬ.
ಮೂರನೇಯವನು ಹೇಳಿದ ”ನಾ ದೂರ ದೃಷ್ಟಿಯಲ್ಲಿ ನೋಡಿ ಹೇಳುವೆ- ಇದು ಒಂದು
ಚಿನ್ನದ ಆಭರಣ,” ಎಂದ.
“ನಿಮ್ಮ ಅಭಿಪ್ರಾಯಗಳು ಹಾಗಿರಲಿ ಒಂದು ಕಡೆ, ಈಗ ಕೇಳಿ” ಎಂದರು ಗುರುಗಳು.
“ಇದು ಗಣಿಯಿಂದ ಹೊರಬಂದ ಕಲ್ಲು ಬಂಡೆ” ಎಂಬುದು ಕಣ್ಣಿನ ದೃಷ್ಟಿ,
ಇದರಲ್ಲಿ ಚಿನ್ನವಿದೆ” ಎಂಬುದು ಬುದ್ಧಿಯ ದೃಷ್ಟಿ, “ಇದರಲ್ಲಿ ಚಿನ್ನದ ಆಭರಣವಿದೆ” ಎಂಬುದು ದೂರ ದೃಷ್ಟಿ, ಕೊನೆಗೆ ಇದು ದೃಷ್ಟಿಯ ಸೃಷ್ಟಿಯಾಗಿ ಉಳಿಯುತ್ತದೆ.
ಅದನ್ನು ಎತ್ತಿಹಿಡಿದು ನೋಡಿ ಮನನ ಮಾಡಿ ತೀಕ್ಷಣದ ಅರಿವಲ್ಲಿ ನೋಡಲು ರಹಸ್ಯ ಸ್ಫೋಟವಾಗುತ್ತದೆ.
“ಮನಸ್ಸಿಗೆ ಕಣ್ಣು, ಕಣ್ಣಿಗೆ ಪ್ರಜ್ಞೆ ಇದ್ದಾಗ ಈ ಅರಿವು” ಎಂದರು ಗುರುಗಳು.
*****

















