Home / ಕವನ / ನೀಳ್ಗವಿತೆ / ಅತ್ತೆ ಗೌರಮ್ಮ, ಸೊಸ ಹೊನ್ನಮ್ಮ

ಅತ್ತೆ ಗೌರಮ್ಮ, ಸೊಸ ಹೊನ್ನಮ್ಮ

(ಪ್ರತಿ ಸಾಲಿನ ಕೊನೆಗೆ “ತಂದನಂದನವೇ” ಎನ್ನಬೇಕು)

ವಂದ ತಾಯಿಗೇ ವಂದಲು ಮಗನೇ ತಂದನಂದನವೇ
ವಂದಲು ಮಗುನೆ ಜನುಸೀದನಲ್ಲೇ
ಅವ್ನಲು ನಗ್ನಾ ಮಾಡಲುಬೇಕ
ತವ್ರಮನಿಗೋಗೇ ಹೇಲ್‌ಕೇಳ್ಕಬಂತೂ ||೧||

ಹೊನ್ನಮ್ಮಾ ಸೊಸಿಯ ನಗ್ಗನ ಮಾಡಿತೂ
ತಾಯಿ ಮಕ್ಕಳೂ ಚಂದಾಗುಳದೀರೂ
ವಂದಲು ವಂದ ದಿವ್ಸೇ ನೋಡೂ
ದಂಡಿನ ಕರ್‍ಯ ಬಂದೀತೂ ಲಾಗಲವಗೇ ||೨||

“ಕೇಳಲೆ ಕೇಳೇ ನನ್ನಲು ತಾಯೇ
ನಾನೂ ನಾದರೇ ದಂಡೀಗೆ ಹೋಗೂತೇ
ನಾಬರೂ ತನ ನಿನ್‌ ಸೊಸ್ಯೆ ಹೊನ್ನಮ್ಮಾ
ಬೆಂಕಿಕಾದ ರೂಳಿ ಕಳ್ಗಲು ಬೇಡಾ ||೩||

ನೀರಿಗಾದರೂ ಕಳ್ಗಲು ಬೇಡಾ”
ಅಂದಿಹೇಳಿನ್ನೇ ತಾಯಿಯ ಕೂಡ ಹೇಳ್ದಾ
ದಂಡೀಗಾದಾರೂ ಹೋಗೀದಲರಸೂ
ಅವ್‌ ದಂಡಗೋಗೀ ಬರ್‍ವಲು ತನಕೇ ||೪||

“ಕೇಳಲೆ ಕೇಳೇಳಿ ನನ್ನತ್ತೇ ಹೊನ್ನಮ್ಮಾ
ನಾನು ನೀರನಾದಾರೂ ತರತೇನಂತೂ
“ಕೇಳಲೆ ಕೇಳಲ್ಲೇ ಸೊಸ್ಯೇ ಹೊನ್ನಮ್ಮಾ
ನಿನ್ನ ಗಂಡಾಲೇಗಿನ್ನೇ ಯೇನ ಹೇಳವ್ನೇ?” ||೫||

“ಹೇಳಿದ ಹೇಳಲಿ ಆಳಿದರಾಗಾಲೀ”
ಅಟ್ಟಂಬು ಮಾತಾಳಿ ಕೇಳೀತ್‌ ಹೊನ್ನಮ್ಮಾ
ಚಿನ್ನದ ಕೊಡುವಾ ಬಲುಕೆ ಚಚ್ಚೀತೂ ||೬||

ಬೆಳ್ಳಿಯ ಕೂಡುವಾ ಯಡುಕ ತಡುದೀತೂ
ನೀರೀಗಾದಾರೇ ಹೋಗೀತೂ ಈಗೇ
ಕೆರ್‍ಯನಾದಾರೂ ಇಳುದಾದೆ ಇನ್ನೂ
ಚಿನ್ನದ ಕೊಡುನಾ ಮೊಗುದಿ ಇಟ್ಟಾದೇ ||೭||

ಬೆಳ್ಳಿಯ ಕೊಡುನಾ ಮೊಗಿತದೆ ನೀರ
ಅರಸೂನಾದಾರೇ ಯೇನ ಮಾಡಾನೇ?
ಕೊದುರಿನಾದಾರೇ ಮರುಕೆ ಕಟ್ಟೀದಾ
ಕೆರಿಯನಾದಾರೇ ಇಳುದಿ ಹೋಗೀದಾ ||೮||

“ಯಾವೂರು ಆಯ್ತೇ ಯಾವ ದೇಸಲಾಯ್ತೇ?”
ಲಂದೀಲಾಗಿನ್ನೇ ಕೇಳಿದ ನೋಡೂ
ತಲ್ಯನಾದಾರೇ ಲೈತ್ತಿತು ಹೆಣ್ಣು
ಆರುಸೂನಾದಾರೇ ನೋಡಿತು ಹೆಣ್ಣೂ ||೯||

ಮುತ್ತೀನ ಕಣ್ಣೀರಾ ಶಡಿತಾಳು ಹೆಣ್ಣಾ
ಲಟ್ಟಂಬೂ ಮಾತಾ ಕೇಳಿದ ಲರಸೂ
ಕಟ್ಟಿನಾದಾರೂ ಹತ್ತಿದ ಲರಸೂ
ಕೊದುರಿನಾದಾರೂ ಹೇರಿದ ನೋಡು ||೧೦||

ಮನಿಗೆ ನಾದಾರೇ ಬಂದಾನಲರಸೂ
“ಕೇಳಲ್ಲೇ ಕೇಳೇ ನನ್ನಲೂ ತಾಯೇ
ನಿನ ಸೊಸ್ಯೇ ಹೊನ್ನಮ್ಮಾ ಯಲ್ಲೀಗೆ ಹೋಗೀತೊ?
ಜೇಜೀಗಾರುತಿಯಾ ತಕ್ಕಂಡಿ ಬಾರೇ” ||೧೧||

ಅಟ್ಟಂಬೂ ಮಾತಾ ಹೇಳಲು ತನಕೇ
ಮುತ್ತಿನ ಕಣ್ಣೀರಾ ಶಡಿತೇ ಹೊನ್ನಮ್ಮಾ
ಚಿನ್ನದ ಕೊಡುನಾ ಬಲುಕೇ ಚಚ್ಚಾದೇ
ಬೆಳ್ಳಿಯ ಕೊಡುನಾ ಯಡುಕೇ ಚೆಚ್ಚಾದೇ ||೧೨||

ದುಕ್ಕ ಬುಡುತಾದೆ ಕಣ್ಣೀರ ತೆಗಿತಾಳೇ
ಚೆಚ್ಚಿದ ಕೊಡುನಾ ವಳುಗೆ ಲಿಟ್ಟೀತೂ
ಕಣ್ಣೀರ ಲಿನ್ನೀ ಬಟ್ಟಲುಕರತೀ
ಜೇಜಿಗಾರುತಿಯಾ ತಕ್ಕಂಡಿ ಬಂತೂ ||೧೩||

ಲಾರುತಿಲಿನ್ನೇ ಕಂಡಿದಾ ಲರಸೂ
ಕೊದುರೀನಾದಾರೂ ಅಳುದೀದಲರಸೂ
“ಕೇಳಲ್ಲೋ ಕೇಳೋ ನನ್ನಲು ಮಗುನೇ
ಊಟಕಾದಾರೂ ಹೋಗಲುಬೇಕೂ” ||೧೪||

ಅಂದೇಳಿ ತಾಯೀ ಹೇಳೀತೂ ಈಗೇ
“ಊಟಾಮಾಡೂಕೇ ನಂಗೆ ಹಸವಿಲ್ಲಾ
ಕೇಳಲ್ಲೇ ನನ್ನು ಗೌರಮ್ಮ ತಾಯೇ
ನಿನ್ನಲು ಸೊಸ್ಯೇ ತೌರಮನಿಗೋಗದೇ ಹೋಗದೇಯೇ
ಬಾಳಲು ದಿನವಾಲಾಗಿತು ತಾಯೇ, ||೧೫||

ತಾಯ್‌ ಮನಿಗೋಗಿ ಕಳಕೊಟ್ಟಿ ಬತ್ತೇ”
ಲಂದಿಲಾಗಿನ್ನೇ ಹೇಳಿದ ಮಗುನೇ
ಲಟ್ಟಂಬು ಮಾತಾ ಕೇಳಿತು ತಾಯೀ
“ಕೇಳಲ್ಲೇ ಕೇಳೇ ನನ್ನಲು ಸೊಸ್ಯೇ ||೧೬||

ತೌರ ಮನಗೋಗಿ ಬರಬಹುದು ಯೋಗೇ
ಮುಡಿಕಟಿಕೊಳ್ಳೆ ದಂಡಿ ಮುಡಕೊಳ್ಳೇ
ಮುಡೀಕಟ್ಟೀತೂ, ದಂಡೀ ಮುಡಿದೀತೂ
ತಾನುಡೂ ಪಟ್ಟೀ ನೆರದಿ ಉಟ್ಟೀತೂ ||೧೭||

ತಾನಿಡೂ ಚಿನ್ನೂ ಮೈದುಂಬೀತೂ
ಕೊದುರೀನಾದಾರೂ ಹೇರಿಸಿಕಂಡಾ
ಬದ್ಯಾದಾರೀಯಾ ಹಿಡುದೋದಾಲರಸೂ
ಲಾರಂಬಡುವೀಗೇ ಹೋಗಿದಲರಸೂ ||೧೮||

“ಕೇಳಲಿ ಕೇಳೀ ನಮ್ಮಲು ಸ್ವಾಮೀ,
ತಾಯ್‌ ಮನಿಗೋಗೂ ದಾರೀ ಇದುವಲ್ಲಾ”
“ನೀಮಳ್ಯಾಲೆಂಗಿಸುವೇ ಮರುಳಾಲೆಂಗಿಸುವೇ
ನೀನೂ ಬಾರದ ಬಾಳಾ ದಿನವಾಯ್ತೂ
ಇದವೇಯ ದಾಠಿ” ಲಂದೀ ಹೇಳೀದಾಲರಸೂ ||೧೯||

ಆರಂಬಡುವೀಗೇ ಕರುಕಂಡ್‌ ಹೋಗೀದಾ
ಹೆಣ್ಣಿನಾರೊಂಡಾ ಹೊಡದೀದಾಲರಸೂ
ಮನಿಗೆ ಆದಾರೇ ಬಂದಾನೇ ಲರಸೂ
ಇಲ್ಲಿ ಆದಾರೇ ಯೇನಲಾಗದೇ? ||೨೦||

ಮನಿಯಲು ವಳಗೇ ಯೇನೇನು ಇಲ್ಲಾ
ತಾಯಮ್ಮಗೆ ಸಂಸೇ ಬಂದೀತೂ ಯೇಗೆ
“ಕೇಳಲೊ ಕೇಳಲ್ಲೋ ನನ್ನಲು ಮಗುವೇ
ಯಾವಲು ಗತಿಯಾ ಮಾಡಿ ಬಂದೀದೇ?” ||೨೧||

ಪಟುವಾ ತಕ್ಕಂತೂ ಬಾಗಲದಗ ಕೂಂತ್ತೂ
“ಸೊಸ್ಯ ಗೌರಮ್ನೋಯಲ್‌ ಹಾಕಿ ಬಂದ್ಯೋ?
ಬಾಗ್ಲದಲ್‌ ನೀನೂ ಹೊಕ್ಕಿದಾರೇ
ನಿನ್ನಲು ಕಡದೀ ತುಂಡಾ ಮಾಡೂತೇ” ||೨೨||

ಅಂದೇಳೀ ತಾಯೀ ಕೂತದೇಲಾಗೇ
ಯೇಗೇ ನಿನ್ಯೇಗೇ ಯೇನೂ ಲಾಗೀತೂ
ಅದುರಾ ತಾಯೀಗೇ ಸಪನ ಬಿದ್ದೀತೂ
“ನಿನ್ನಲೂ ಮಗುಳೂ ಹೊನ್ನಮ್ಮ ನೋಡೂ ||೨೩||

ಆರಂಬಡುವೀಲೀ ಮೋಸ ಮಾಡವ್ರೇ’ಳಿ
ಅಂದೇಳಿ ಸಪನಾ ಬಿದ್ದೀತೂ ಲೇಗೇ
ಹೇಯ್ಕಂತಿ ಜಪುಕಂತೀ ಯೆದ್ದಿಳು ನೋಡೂ
“ಕೇಳಲೆ ಕೇಳಲ್ಲೋ ನನ್ನ ಮಗುದೀರಾ ||೨೪||

ನಿನ್ನಲೂ ತಂಗೀ ಹೊನ್ನಮ್ಮ ನೋಡೂ
ಆರಂಬಡುವೀಲೀ ಮೋಸಾ ಮಾಡವ್ರೇ”
ಅಂದ್‌ ಹೇಳಿ ಜಪ್ಕಂತೀ ಬಿದ್ದದೆ ತಾಯೀ
“ವಂದ ಸಂಗೋಗೀ ಬರಬವ್ದು ಮಗುವೇ” ||೨೫||

ಅಂದಿಲಾಗಿನ್ನೇ ಹೇಳಿತೂ ನೋಡೂ
ಲಟ್ಟಂಬು ಮಾತಾ ಕೇಳೀ ರಣದೀರಾ
ತಂಗೀಯಾ ಮನಿಗೇ ವೋಡಿ ಬಂದವ್ರೂ
“ಕೇಳಲ್ಲೇ ಕೇಳಲ್ಲೇ ನನ್‌ ಗೌರಮ್ಮಲತ್ತೇ ||೨೬||

ಹೊನ್ನಮ್ಮ ತಂಗೀ ಯೆಲ್ಲೀ ಹೋಗೀತೂ?”
“ಕೇಳಲೆ ಕೇಳಲ್ಲೋ ಯೇಲಳಿದೀರಾ
ನಿನ್ನೇನಾದಾರೇ ಯೇನಾ ಮಾಡವ್ನೇ
ನನ್ನ ಕೋಡಿನ್ನೇ ಹೇಳಿದ ನೋಡೂ ||೨೭||

ಮಡುದಿಲಾದಾರೇ ನಿಮ್ಮಲು ಮನಿಗೇ
ಕಳಿಕೊಟ್ಟ ಬತ್ರನಂದಿ ಕರ್‍ಕಂಡ್‌ ಹೋಗವ್ನೇ
ಜಪಕಂತ ಜರ ಕಂತೀ ಬಿದ್ದೀದೆ ನಾನೂ”
ಅಟ್ಟಂಬೂ ಮಾತಾ ಕೇಳೀ ರಣುದೀರೂ ||೨೮||

ಹೊಯ್ಕಂತಾ ಜಪುಕಂತೀ ಲಡುವೀ ಬಿದ್ದಾರೇ
ಆರಂಬಡುವೀಯಾ ತಿರುಗೀರಣದೀರೂ
ರುಂಡಾನಾದರೂ ಸಿಕ್ಕೀತು ಯೇಗೇ
ರುಂಡಾನಾದರೂ ಸಬನಾದಾರೂ ||೨೯||

ಅಂಗೈಮೆನೇ ಸುಟ್ಟೀ ಬೂದೀ ಮಾಡವ್ನೇ
ಮನಿಗೆಲಾದಾರೂ ಹೋದಾರಣದೀರೂ
ತಾಯಿಗಾದಾರೇ ಬುದ್ದೀ ಹೇಳವ್ರೇ
“ನಮ್ಮವರ ನೆಡುಗೇ ಹೊನ್ನಮ್ಮ ತಂಗೀ ||೩೦||

ಯೆಲ್ಲ ಅಂದೇಳೀ ತೆಳುಕೊಣ್ಣಿ ತಾಯೇ
ಅಂಗೈಮೆನೇ ಸುಟ್ಟೀ ಬೂದೀ ಮಾಡವ್ನೇ
ಮದಿಸಿಗೇನಾದರೇ ಬಂದಾರೂ ತಾಯೇ
ನಮ್ಮ ನೋಡಿನ್ನೇ ಸಂತರಸೂ ನೀನೂ” ||೩೧||

ಲರಸುನಾದಾರೇ ಯೇನಾ ಮಾಡವ್ನೇ?
ಊಟಾಯೆಲ್ಲವ್ಗೆ ಲುಪುಚಾರಿಲ್ಲವೋ
ಊಟಾನೂ ಯಲ್ಲಾ ಲುಪುಚಾರಯಲ್ಲಾ
ಬೆಳ್ಗಾಗ್ಯೆದ್ದೀದಾ ಯೇನಾ ಮಾಡೀದಾ? ||೩೨||

ಕೆರ್‍ಯನೀರೀಗೇ ಮೊಕ ತೊಳೂಕೋದಾರೇ
ಐಜ್ಜನಣದೀರೂ ತಂಗೀಯಾ ಸುಟ್ಟೀ
ಅಂಗೈಯ ಕೆರ್‌ಯಲ್ಲೀ ತೊಳದಿ ಹೋಗೀರೂ
ಅರಸುನಾದಾರೇ ಮೊಕ ತೊಳುಕೋದಾ ||೩೩||

ತಾಂಬರೆಳ್ಳೀಯಾ ಹೂಂಗೂ ಆಗಾದೇ
ಅಡ್ಡ ಮಾಡುಕಂಡೀ ನೀರನ್ನೇ ಮೊಗುದಾ
ಯೇನು ಮಾಡಿದ್ರೂ ಕಯ್ಯಿಗೆ ಶಿಕುತಾದೇ
ಅಡ್ಡ ಹಾಕ್ಬೇಕಂದಿ ನೆಗುದೀದಾ ಮೇನೇ ||೩೪||

ಹೆಣ್ಣಾಗೀಲಿನ್ನೇ ಬಂದೀತು ಕೈಗೇ
ನೆಗುದೀನಾದಾರೇ ಕುಳ್ಳೀಸಿಕಂಡಾ
‘ಹರಹರ’ ನಂದಾ ‘ಸಿರಿಹರಿ’ ನಂದಾ
ಮನಿಗೆ ಹೋದಾರೇ ನನ್ನಲೂ ತಾಯೀ ||೩೫||

ನನ್ನಲು ಕಡದೀ ತುಂಡೂ ಮಾಡುತದೇ
ಕೊದುರೀನಾದಾರೇ ತಕ್ಕಂಡಿ ಹೋದಾ
ಕೊದುರೀಯಾ ಮೇನೇ ನೆಗುದೀ ಕುಳ್ಸೀದಾ
ಹಿಂದಲೂ ಕಡಿಗೇ ಅಡಿಕಂಡಿ ಕೂತಾ ||೩೬||

ಕೊದುರೀನಾದಾರೇ ಹೇರಿಕಂಡಿ ಬಂದಾ
ತಾಯಮ್ಮಾಲಿನ್ನೇ ಯೇನ ಹೇಳ್ಟದೇ?
“ನಗ್ಗನಾಕಂಡೀ ಬಂದೀದೆ ನೀನೂ
ಮುಂದಲೂ ಬಾರೋ” ಅಂದೀ ಹೇಳೀತೂ ||೩೭||

“ನಿನ್ನಲು ಕುತಗೀ ಮೊದಲೇ ನಾ ಕಡೀತೆ
ನೀಮದ್ಯಾಕ ಬಂದದ್ದ ಕಡಿಗೆ ನಾ ಕಡಿತೆ ”
ಅಂದೇಳಿ ತಾಯೀ ಹೇಳಲುಽತದೇ
“ಕೇಳಲೆ ಕೇಳೇ ನನ ಗೌರಮ್ಮಲತ್ತೇ ||೩೮||

ಣಿನ ಹೊನ್ನಮ್ಮ ಸೂಸ್ಯೇ ನಾನೇಯ ಹೌದೂ”
ಯೇನ ಹೇಳಿದರೂ ಕೇಳೂದಿಲ್ಲಾ
ಕಳವನಾದಾರೂ ಲತ್ತಿಗೆ ತಪ್‌ ಹೋಯ್ತು
“ನಾನೇಯ ಲತ್ತೇ ಹೊನ್ನಮ್ಮ ನೋಡೂ ||೩೯||

ವಳ್ಗೇ ಹೋಗೀ ನೀನು ನೋಡಾಲು ಬಂದೇ”
ವಳ್ಗೆ ಹೋಗಲಿನ್ನೇ ನೋಡೀತೂ ಲತ್ತೇ
ಮುಂಚೆ ಯಾವ ತರ ವಳಗೇ ತುಂಬೀತೂ
ಅದೇ ಸಂಪತ್ತೂ ವಳುಗೇಲಾಗದಿರೆ
ಆಗ ಹೋಗಿಲಿನ್ನೇ ನೋಡೀಲು ಬಂತೂ ||೪೦||
*****

ಕಲವು ಪದಗಳ ವಿವರಣೆ:

ಜೇಜೀ = ಕುದುರೆ
ಸಬ = ಶಬ
ಮದಿಗ = ಕೆರೆ

ಹೇಳಿದವರು: ದಿ. ಸೌ|ನಾಗಮ್ಮ ಮಾಸ್ತಿನಾಯ್ಕ, ಹೆಗಡೆ ಊರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...