ಹಗಲು ಇರಳು ನಿನ್ನದೆನ್ನುತ್ತ
ಯಾತಕ್ಕಾಗಿ ಹಪ ಹಪಿಸುವೆ
ನಿನ್ನ ಸಂಪತ್ತು ಆಸ್ತಿಗಳಿಗಾಗಿ
ದುಡಿದು ದುಡಿದು ಶಪಿಸುವೆ
ಕೋಟಿ ಕೋಟಿ ಹಣವ ಗಳಿಸಿ
ಧನವಂತ ನಾಗುವ ದೇತಕೆ
ಎಲ್ಲರೆದರೂ ನಿನ್ನ ತನವ ಮೆರೆದು
ಯಾವುದನ್ನು ಸಾಧಿಸುವದೇತಕೆ!
ಬಿದ್ದು ಹೋಗುವ ತನುವಿಗೆ ನಿತ್ಯ
ಶೃಂಗರಿಸುವದೇತಕೆ
ಮೆರೆದು ಮೆರೆದು ಮುರುಕಾಗುವ
ಬಾಳಿಗೆ ಮೋಹಿಸುವದೇತಕೆ!
ಸತಿ ಸುತ ಬಂಧು ಮಿತ್ರರನ್ನು
ನಿನ್ನವರೆನ್ನುವುದು ದೇತಕೆ!
ದೇವರ ಹೆಸರು ಕೀರ್ತಿಗಳ ಬಿಟ್ಟು
ಜಾತ್ರೆ ನಿರ್ಮಿಸಿದೇತಕೆ!
ಇಂದೋ ನಾಳೆಯೋ ಭವಿಷ್ಯವಿರದ
ನಿನ್ನ ಜೀವನ ಏತಕೆ
ಮಾಣಿಕ್ಯ ವಿಠಲನ ಧ್ಯಾನಿಸರಾಗದೇ
ಜನುಮ ಸಾರ್ಥಕವಾಗದೇ!
*****
















