ದೊಡ್ಡ ಮರದ ಮೇಲೆ
ಅಲ್ಲಲ್ಲಿ ಜೇನುಗೂಡು
ರೆಂಬೆಗೊಂದರಂತೆ;
ಅಕ್ಕ-ಪಕ್ಕದ ಮನೆಗಳ ರೀತಿ
ಜೇನುಹುಳುಗಳ ಹಾರಾಟ
ಸಿಹಿಹನಿಯ ಹುಡುಕಾಟ
ಜೇನುಗೂಡಿನಿಂದ ತೆರಳಿ,
ಮರಳುವ ಆಟ
ಸಂಚಯಿಸಿ ತಂದ ಮಕರಂದವ
ಚಂದದಲಿ ಶೇಖರಿಸಿ
ಹನಿಹನಿಯ ಜೇನನ್ನು
ಕಣಜವಾಗಿಸುವ ತವಕ
ನಾಳೆಯ ದಿನ ಮನುಜನ
ಬೆಂಕಿಯ ತಾಪದ ಗುರಿ
ಗೂಡಿನ ಕಡೆಗೆ ನೆಟ್ಟಿರುವ ಪರಿ
ಹುಳಗಳಿಗೇನು ಗೊತ್ತು?
ಒಗ್ಗಟ್ಟಿನ ಕಂಕಣವ ಕಟ್ಟಿರುವ
ಕೆಲಸವೇ ಕೈಲಾಸ ಎಂದಿರುವ
ಜೇನುಹುಳಗಳಿಂದ ಮಾನವ
ಅರಿಯಬೇಕಾಗಿದೆ ನೀತಿ ಪಾಠ.
*****


















