ಬಾರ ಗೆಳತಿ ಬಾರೆ ಗುಣವತಿ
ಬಾಳೆಹಳ್ಳಿಗೆ ಹೋಗುವಾ
ಗುಟ್ಟಬೆಟ್ಟದ ಗಂಧ ಗಿರಿಗಳ
ಸ್ವಾಮಿ ಪಾದವ ಸೇರುವಾ

ಎಲ್ಲಿ ಕೋಗಿಲೆ ಶಿವನ ಪೂಜೆಗೆ
ಗೀತ ಮಂತ್ರವ ಹಾಡಿವೆ
ಎಲ್ಲಿ ಕಾನನ ಹಸಿರು ಮರಗಳು
ಹೂವು ಹಣ್ಣನು ನೀಡಿವೆ

ಸುತ್ತ ಮುತ್ತಾ ಬೀಸುಗಾಳಿಯು
ಮಹಾಮಂತ್ರವ ಜಪಿಸಿದೆ
ಧೂಳಿ ಮಣ್ಣು ಧೂಪವಾಗಿದೆ
ಕಾಯ ಕರಪುರ ಬೆಳಗಿದೆ

ತೋರು ಸಖಿಯೆ ಚಂದ್ರ ಮುಖಿಯೆ
ದೇವ ಗುರುಗಳ ಪಾದವ
ಕಣ್ಣ ತುಂಬಾ ಕಡಲು ತುಂಬುವ
ದೇವ ಗುರುಗಳ ಕ್ಷೇತ್ರವ
*****