ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ- ನಂಜನಗುಡಿಯ ರಾಜಮಾರ್ಗದಲಿ ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು ಮೈಸೂರಿನುದ್ಯಾನ ಮಧುವನವು ೧ ರಂಗುರಂಗಿನ ಹೂಗಳಾಭರಣ ಒಪ್ಪಿರಲು ಕಂಗಳನು ಮೋಹಿಸುವ ಹಸುರುಡುಗೆಯ ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್ಲಿ ಕಾಂಬುವುದು ಸೊಗವಡೆದ ಮಧುವನವು ೨ ಕುಲವನಿತೆ ಸೂಸುತಿಹ ಎಳ...

ತಿನ್ನಲಿಕೆ ಬಾಯಿ ಕೊಟ್ಟಂದು ದೇವ ತಾ ಸು ಮ್ಮನಿರಲಿಲ್ಲ ಕೊಟ್ಟಿಹನು ಕಣ್ಣು, ಕಿವಿ, ಮೂಗು ಅನ್ನದಿರವನು ಅರಸಿಯುಣ್ಣಲಿಕೆಲ್ಲವಯವವು ಚೆನ್ನತನದೊಳೆಮ್ಮ ಕೈಕಾಲು ಬಳಲಿದೊಡಾ ಅನ್ನವನು ಸಾನುರಾಗದಿ ಸಾವಯವವೆನಲಕ್ಕು – ವಿಜ್ಞಾನೇಶ್ವರಾ *****...

ಇದುವೆ.. ಇದುವೆ.. ನಮ್ಮ ಕನ್ನಡ ನಾಡು ಸರ್ವರ ಸುಖವ ಬಯಸಿದ ನಾಡು ಸಾಮಾಜಿಕ ನ್ಯಾಯ; ಕಾಯಕ, ಭಕ್ತಿಯ ಬಸವನ ಬೀಡು ದಿಕ್ಕು, ದಿಕ್ಕಲಿ ಜ್ಯೋತಿಯ ಹೊತ್ತಿಸಿ ಧರ್ಮ, ಸಂಸ್ಕೃತಿ ಬೆಳಗಿದ ನಾಡು. ಅಂಧಾನುಕರಣೆ, ಆಚರಣೆಗಳ ಬುಡವನು ಅಲುಗಿಸಿ, ಕ್ರಾಂತಿಯ ಮೊ...

ವಲ್ಲಭಾಚಾರ್ಯರು ೧೮೬೨ರಲ್ಲ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದ...

ನವಿರಾದ ಭಾವದಲೆಗಳ ಸೀಳುತ್ತಾ ಮುನ್ನುಗ್ಗುತ್ತಿತ್ತು ನವ್ಯದ ಹಡಗು ಆಹಾ! ಏನು ಬಿಂಕ, ಬೆಡಗು, ಬಿನ್ನಾಣ ಕೋಡುಗಲ್ಲಿನ ಮೇಲೆ ಕಡಲ ಹಕ್ಕಿಗಳಂತೆ ಕೂತು ನೋಡಿದೆವು. ಕಾರಿರುಳು- ‘ಕರಿಯ ನಭದ ಕಣ್ಗಳಂತೆ ಅಭಯದೊಂದು ರೂಹಿನಂತೆ ತೇಲಿಬಿಟ್ಟ ದೀಪದಂತೆ’ ನೂರ...

ದಿನಾಂಕ ೨೫-೧೨-೧೯೯೪ ರಂದು ನಿಧನರಾದ ಜೈಲ್ ಸಿಂಗ್ ಅವರು ನಮ್ಮ ದೇಶ ಕಂಡ ಅಪರೂಪದ ಅಧ್ಯಕ್ಷರಲ್ಲಿ ಒಬ್ಬರು. ಆದರೆ ಸಕ್ರಿಯ ರಾಜಕೀಯ ದಿಂದ ಮೇಲೇರುತ್ತ ಇಂದಿರಾ ಗಾಂಧಿಯವರ ಕೃಪೆಯಿಂದ ರಾಷ್ಟ್ರಾಧ್ಯಕ್ಷರಾದರೆಂಬ ಕಾರಣಕ್ಕೆ ಅವರ ವ್ಯಕ್ತಿತ್ವದ ಕೆಲವು ...

ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ ಹೊಸದಾಗಿ ಒಬ್ಬ ತರುಣ ಡಾಕ್ಟರನ ನೇಮ...

ಭೂಮಿ ಮತ್ತು ನೀರು | ನಮ್ಮ ಹಕ್ಕು ಹಕ್ಕಿಗೆ ನಮ್ಮ ಗೌರವ | ಎಲ್ಲ ಕಾಲಕ್ಕೂ //ಪ// ಭೂಮಿ ಯಾರಪ್ಪನದು ಅಲ್ಲ ನಮ್ಮ ನಿಮ್ಮ ಸ್ವತ್ತು ನೀರಿಗೆ ದೊಣೆನಾಯಕನಪ್ಪಣೆಯೆ? ತೋಳ ಹಳ್ಳಕೆ ಬಿತ್ತು! ಗತಿಸಿದ ಕಾಲ ನಿಮ್ಮದು ಏನೊ ನಮ್ಮದು ವರ್ತಮಾನ ಹಗಲುಗನಸು ಬೇ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...