೧ ಒಂದು ಕಡೆ ಸಂತೋಷ-ಸುಖದ ಸಾಮ್ರಾಜ್ಯಮಯ ನಂದನ ಸರ್ಗದ ಸಮಾವೇಶವಿಹುದು ಬೇರೂಂದು ಕಡೆ ಬೇನೆ ಬೇಸರಿಕೆ- ಬಿಸುಸುಯ್ಗ- ಳೇರಿರುವ ನಲವಿರದ ನರಕವಿಹುದು ೨ ಒಂದು ಕಡೆ ಮದುವೆ-ಮಾಸಿರಿ ಬೆಡಗು-ಬಿನ್ನಣಗ- ಳೊ೦ದಿರುವ ಶೃಂಗಾರ ಸೌರಭ್ಯವಿಹುದು ಬೇರೊಂದು ಕಡೆ ವಿರಸ ವಿರಹದುರಿಯೆದ್ದಿರುವ ನೈರಾಶ್ಯ-ಸ೦ತಾಪ ಸಂರೋಧವಿಹುದು ೩...

ನನ್ನ ಮನಸು ನಿನ್ನಲ್ಲಿ ನಿನ್ನ ಮನಸು ನನ್ನಲ್ಲಿ ನಡುವೆ ಯಾವುದೀ ಅಂತರ . . . ಆಗಬಹುದೆ ಹೃದಯ ಹಗುರ? /ಪ// ಹರಿಯುತಿದೆ ತುಂಬಿ ಹೊಳೆ ಜೊತೆಗೆ ಮುಂಗಾರು ಮಳೆ ತಳ ಒಡೆದ ದೋಣಿ ದಡದಲಿ . . . ತಾರೆ ಬೆಳಕು ಸಹ ಇಲ್ಲ ನಭದಲಿ ! ಮೊರೆಯುತಿದೆ ಸಪ್ತ ಸಮುದ...

“ಹಾಕಿದುದು ಅರಮನೆಯ ಅಡಿಗಟ್ಟು ; ಕಟ್ಟಿದುದು ಗುಡಿಸಲು! ಹೀಗೇಕಾಯಿತು ? ವಿಧಾತನ ಕ್ರೂರತನವೊ , ತಂದೆಯ ಬಡತನವೊ ? ವಿಧಿಯನ್ನಲೇ ? ವಿಧಿಯು ಉದಾರಿಯು ; ಸೃಷ್ಟಿಯಲ್ಲಿ ಮೈ ಮರುಳುಗೊಳಿಸುತ್ತ, ಬಗೆಗೆ ಆನಂದ ಬೀರುತ್ತ, ಸೊಬಗಿನ ಆಗರಗಳಾಗಿ ಇರು...

ಆಗಾಗ ಭೂ ಕಂಪಗಳು ಯುದ್ಧಗಳು ಸುನಾಮಿಗಳು ಮುಗಿಯದ ತಾಪ ತ್ರಯಗಳು ಗೋಜು ಗೊಂದಲಗಳು ಶರಧಿಯ ತಿಮಿಂಗಿಲಗಳು ಅಲ್ಲಲ್ಲಿ ಮಿಂಚು ಹುಳುಗಳು ದ್ವೀಪಗಳು ಕಾಪಾಡ ಬಂದ ಹಡಗುಗಳು ಸಿಡಿಸುತ್ತಿರುವ ಮತಾಪುಗಳು ಅನವರತ ಸಾಗುವ ಈ ಪ್ರಯಾಣ ಮುಗಿಯುವುದೇ ಇಲ್ಲ ಆಯಾಸ ...

ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು ನಿಜ ಬಣ್ಣಿಸಿದ್ದರೂ, ಅದು ನಿನ್ನ ಘನತೆಯನು ಅರ್ಧ ಮಾತ್ರವೆ ತೋರುವಂಥ ಸ್ಮಾರಕ ಎಂದು ಸ್ವರ್ಗಕೇ ಗೊತ್ತಿದ್ದೂ ನಂಬುವರು ಯಾರದನು ? ಆ ಕಣ್ಣ ಸೊಬಗ ಹಾಗೇ ಚಿತ್ರಿಸಿದರೂ, ನಿನ್ನ ಘನತೆಯ ಕುರಿತು ಹೊಸ ಹೊಸತು ಬ...

ಶಿವಕುಮಾರ್‌ಗೆ ಮಂಕು ಬಡಿದಿತ್ತು. ಊರಿಗೆ ಹೋಗಿದ್ದ ಮಂಜುಳ ಮರಳಿ ಬಂದ ಮೇಲೆ ಅನೇಕ ವಿಷಯಗಳನ್ನು ಮಾತನಾಡಬೇಕೆಂದು ಬಯಸಿದ್ದಳು. ಬಾಡಿಗೆ ಮನೆಯಲ್ಲಿ ನೆಲೆಸಿದ ಮೇಲೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಒದಗುತ್ತದೆಯೆಂದು ಭಾವಿಸಿದ್ದಳು. ಆದರೆ ಹಳ್ಳಿಗ...

ಕವಿಯ ಮನ ಮಿಡಿಯುವುದು ದಿನ ಹೊಸತನವ ಹುಡುಕುತ ಹೊಸ್ತಿಲಲಿ ಕಲ್ಪನೆಯ ಭಾವನೆಗಳು ಚಿಗುರೊಡೆದು ಹೊರ ಹೊಮ್ಮುತಿವೆ ಕಥೆ – ಕವನಗಳಾಗಿ ತನುವು ಕುಗ್ಗಿ ಬಾಗಿ ಮುದಿಯಾದರೂ ಮನಸ್ಸು ಚಿರ ಯೌವನದ ಚಿಲುಮೆಯಂತೆ ಪುಟಿದೇಳುವುವು ಕನಸಿನ ಸಾಲುಗಳು ಕರೆದೊ...

ಸತ್ತವನ ಮನೆಯಲ್ಲಿ ಸಂಜೆ ಅವರಿವರು ತಂದಿಟ್ಟ ಬಗೆ ಬಗೆಯ ಊಟ ಅವರಿವರು ತಂದಿಟ್ಟ ಹಲವು ಹತ್ತು ಸಮಸ್ಯೆ. ಸಂತಾಪಕೆ ಬಂದವರ ಮಾತು ನಗೆ ಕೇಕೆ ಸರಸ ಸಂಭಾಷಣೆ! ನವ ವಿಧವೆ ಸೊಂಟದಲ್ಲಿ ಬೀಗದ ಕೈಗೊಂಚಲು ಭದ್ರ. ಮಗ ಮಗಳು ಸೊಸೆ ಅಳಿಯ ಎಲ್ಲರದೂ ಒಂದೇ ಚಿಂತೆ...

ಗೆಳೆಯರಾದ ಆರ್. ನಾಗೇಶ್ , ಶ್ರೀ ಮುಕುಂದರಾಜು ಮತ್ತು ಶ್ರೀ ವೆಂಕಟರಾಜು ಅವರು ಇತ್ತೀಚೆಗೆ ನನ್ನ ಮನೆಗೆ ಬಂದರು. ಮುಕುಂದರಾಜು ‘ಮುಳ್ಳಿನ ಕಿರೀಟ’ವನ್ನು ಮುಂದಿಟ್ಟು ‘ನಾನು ನಿಮ್ಮನ್ನ ಏನೂ ಕೇಳಿಲ್ಲ ಸಾರ್. ದಯವಿಟ್ಟು ಇದಕ್ಕೆ ಮುನ್ನುಡಿ ಬರ್‍ಕೊಡ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...