
ನಮ್ಮ ಹುಡುಗಿಗೆ ಬೇಕು ವರ ಇಂಜಿನಿಯರಿಂಗ್, ಮೆಡಿಕಲ್ ಓದಿರುವ ಶ್ರೀಮಂತ ಕುವರ. ಇವರು ಬಿಟ್ಟು ಬೇರೆಯ ವರ ನಮ್ಮ ಪಾಲಿಗೆ ಇಲ್ಲದವನು ನರ. ರೂಪ-ಗುಣ ನೋಡುವುದಿಲ್ಲ ಚರಿತ್ರೆ-ಭೂಗೋಳ ಬೇಕೇ ಇಲ್ಲ ಕೆಲಸವಿದ್ದರೇನು, ಇಲ್ಲದಿದ್ದರೇನು? ಇವನಿಗಿದೆಯಲ್ಲ ವಿ...
ಈ ಜಗತ್ತಿನಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂದು ಲೆಕ್ಕ ಹಾಕಿದವರಿಲ್ಲ; ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಲೋಕಭಾಷೆಗಳ ಕುರಿತಾಗಿ ಕೆನೆತ್ ಕಟ್ಝ್ನರ್ ಬರೆದ The Languages of the World ಎಂಬ ಮಾಹಿತಿಪೂರ್ಣ ಪುಸ್ತಕವೊಂದಿದೆ. ಅದರ ಪ್ರಕಾರ ಸು...
ಅವಳೆಂದರೆ ಬಹುಮುಖ ಹುಚ್ಚು ಹುಮ್ಮಸ್ಸಿನ ಪ್ರತೀಕ *****...
ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ|| ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ ದಾರ್‍ಯಾಗ ಸುಳಿಸುತ್ತಿ ಕುಂತೈತೆ ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ ಮೋಸಕ್ಕ ಥಟಥಾಟು ಥೇಟೈತೆ ||೧|| ಗೆಜ್ಜಿ ಕಾಲಿನ ವಜ್ಜಿ ಹ...
೮೦ರ ದಶಕದಲ್ಲಿ “ಮನೆಗೆ ಮೂರು ಮಕ್ಕಳು ಸಾಕು” ೯೦ರ ದಶಕದಲ್ಲಿ “ಆರತಿಗೊಂದು ಕೀರ್ತಿಗೊಂದು” ೨೦೦೦ ದಲ್ಲಿ “ಮನೆಗೊಂದು ಮಗು, ಮನೆ ತುಂಬಾ ನಗು” ಮುಂದೆ “ದಾರಿಗೊಂದು ದೀಪ.. ಬೀದಿಗೊಂದು ಪಾಪ”...
ಕಾಳಚಕ್ರ ಉರುಳುತ್ತಿದೆ. ಹಗಲು ಸರಿದು ಕರಾಳ ರಾತ್ರಿಯಲ್ಲಿ ನಕ್ಷತ್ರಗಳ ಕಣ್ಣುಮುಚ್ಚಾಲೆ. ಆಕಾಶ ನೋಡುತ್ತ ಅಳುತ್ತಿರುವ ನಾಯಿಗಳು ದಟ್ಟ ದರಿದ್ರರ ಕೊಂಪೆ ಗುಡಿಸಲುಗಳು ಸಿಡಿದೇ ಕರೇ ಕ್ಷೀಣ ಧ್ವನಿಯಲ್ಲಿ ಗುಣುಗುಟ್ಟುತ್ತಿವೆ, ಸಾಲದಿರುವ ಸಂಬಳ ಏರುತ...
ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ – ವಿಜ್ಞಾನೇಶ್ವರಾ *****...
ಅಲ್ಲಿ ಹೋಗದಿರು ಸುರಂಜನಾ ದಯವಿಟ್ಟು ಮಾತಾಡದಿರು ಆ ಯುವಕನಲ್ಲಿ. ಆಕಾಶ ಪರ್ಯಂತ ಹರಡಿರುವ ಬೆಳ್ಳಿ ಬೆಳಕಿಗೆ ಮರಳಿ ಬಾ, ಸುರಂಜನಾ, ಮರಳಿ ಈ ಬಯಲಿಗೆ, ತೆರೆಗಳಿಗೆ ಬಾ ಮರಳಿ ನನ್ನ ಹೃದಯಕೆ ಅವನ ಜೊತೆ ನಡೆದು ಹೋಗದಿರು ದೂರ ದೂರ ಅನಂತಕೆ ಅವನಿಗೆ ನೀನ...
ಗುರು ದೇವ ಜನನಿ ಗುರು ಬ್ರಹ್ಮ ಸ್ವರೂಪಿಣಿ ವೀಣಾಪಾಣಿ ಪುಸ್ತಕ ಧಾರಿಣಿ || ವೇದ ವೇದಾಂಕಿತ ಶೋಭಿತೆ ಗಾಯಿತ್ರಿ ನಂದಿನಿ ಶಾರದೆ ವರದೆ ಬ್ರಹ್ಮನ ರಾಣಿ !! ಶಾರದೆ ನಮೋಸ್ತುತೇ ಶ್ವೇತಾಂಭರಧರೆ ದೇವಿ ನಾನಾಲಂಕಾರ ಪೂಜಿತೇ ಸಹಸ್ರ ಸಹಸ್ರ ನಾಮಾಂಕಿತೆದೇವ...
“ಕ್ರೈಸ್ತರು ಮಹಮದೀಯರನ್ನು ದ್ವೇಷಿಸುವಷ್ಟು ಮತ್ತಾರನ್ನು ದ್ವೇಷಿಸುವುದಿಲ್ಲ” ಎನ್ನುವ ವಿವೇಕಾನಂದರ ಈ ಮಾತು ನನ್ನನ್ನು ಗಾಢವಾಗಿ ಕಲಕಿತು. ಏಕೆ ಹೀಗೆ ಎಂದು ಚಿಂತಿಸತೊಡಗಿದೆ. ನಾನು ಕ್ರೈಸ್ತ ಪಾದ್ರಿಗಳೊಂದಿಗೆ ಇರುವ ಸಂದರ್ಭಗಳಲ್ಲ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...
“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...















