ಗುರುದೇವ ಜನನಿ

ಗುರು ದೇವ ಜನನಿ
ಗುರು ಬ್ರಹ್ಮ ಸ್ವರೂಪಿಣಿ
ವೀಣಾಪಾಣಿ ಪುಸ್ತಕ ಧಾರಿಣಿ ||

ವೇದ ವೇದಾಂಕಿತ ಶೋಭಿತೆ
ಗಾಯಿತ್ರಿ ನಂದಿನಿ ಶಾರದೆ
ವರದೆ ಬ್ರಹ್ಮನ ರಾಣಿ !!
ಶಾರದೆ ನಮೋಸ್ತುತೇ

ಶ್ವೇತಾಂಭರಧರೆ ದೇವಿ
ನಾನಾಲಂಕಾರ ಪೂಜಿತೇ
ಸಹಸ್ರ ಸಹಸ್ರ ನಾಮಾಂಕಿತೆದೇವಿ
ಶಾರದೆ ನಮೋಸ್ತುತೇ !!

ಜಗಸ್ಥಿತೆ ಜಗದಂಬ ಕಲ್ಯಾಣಿ
ವಿದ್ಯಾರಂಭ ವರದಾಯಿನಿ
ಮಹಾದೇವಿ ಮಹೇಶ್ವರಿ
ಈಶ್ವರಿ ಶಂಕರೀ ನಮೋಸ್ತುತೆಽಽಽ !!

ನಾರಾಯಣಾತ್ಮಜೇ ಮಹಾಲಕ್ಷ್ಮಿ
ಶಿವಾತ್ಮಜೇ ಪರಮೇಶ್ವರಿ
ಬ್ರಹ್ಮಾತ್ಮಜೇ ಸರಸ್ವತಿ
ಶಾರದೆ ಜನನಿ ನಮೋಸ್ತುತೆ !!

ವಿಶ್ವರೂಪಿಣಿ ವಿಶ್ವಾಂಭರೇ
ವಿಶ್ವೇಶ್ವರೀ ಮನೋಹರೀ
ನಮಸ್ತುಭ್ಯಂ ನಮಸ್ತುಭ್ಯಂ
ಮಹಾಮಂಗಳ ರೂಪಿಣೀ !!

ಭುವನ ಮಂಗಳದೇವಿ
ಭುವನೇಶ್ವರೀ ನಮಸ್ತುಭ್ಯಂ
ನಮಸ್ತುಭ್ಯಂ ನಮಸ್ತುಭ್ಯಂ
ನಮೋನಮಃ !!!

ಓಂಕಾರ ಸ್ವರೂಪಿಣಿ
ಓಂ ಶಾಂತಿ ಓಂ ಶಾಂತಿಃ ಶಾಂತಿಃ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಮು ಹಾಗೂ ಭಯೋತ್ಪಾದನೆ ಬೇರುಗಳು
Next post ಮರಳಿ ಬಾ, ಸುರಂಜನಾ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…