
ಹರಿ ನಿನ್ನ ಕೃಪೆಯೊಂದು ಆಧಾರ ಅದುವೆ ಈ ಬಾಳಿನ ಸರ್ವ ಕಾಮ್ಯ ನಿನ್ನ ನೋಟವೊಂದೆ ಎನ್ನ ಕಾಯಲಿ ನಿನ್ನ ರೂಪವೇ ಎನಗೆ ನಿತ್ಯ ಗಮ್ಯ ಈ ಬದುಕು ನೀನಿಲ್ಲದ ಬರಡು ಎಲ್ಲಯದು ಸಂತಸ ನವ್ಯ ಚೈತ್ಯ ನೀನು ನನ್ನೊಂದಿಗೆ ಕೈ ನೀಡಿ ನಡೆಸು ನಾನಾಗುವೆನು ನಿನ್ನ ಪಾದ...
ಕಟುಕರಾಗದಿರಿ ನೀವು| ಕನ್ನಡ ತಿಳಿದೂ ಕನ್ನಡದವರೆದುರು ಕನ್ನಡ ಮಾತನಾಡದೆ|| ಕನ್ನಡ ತಿಳಿದು ಮಾತನಾಡದವರನು ಕಠಿಣ ಹೃದಯಿಗಳೆಂದರೆ ತಪ್ಪೇಕೆ? ಇಂಥವರನು ಹುಡುಕಲು ಕನ್ನಡಿ ಬೇಕೇಕೆ? ಇವರ ಮೆಚ್ಚಿಸಲು, ಹೊಗಳಲು ನಾ ಮುನ್ನುಡಿ ಬರಿಯ ಬೇಕೆ?|| ಇರುವುದು ...
ಅವನಿಗೆ ಪ್ರಶ್ನೆ ಕೇಳುವುದೆಂದರೆ ಬಲು ಪ್ರಿಯ. ಪ್ರಶ್ನಾರ್ಥ ಚಿನ್ಹೆಗೆ ಜೋತುಬಿದ್ದು ಉತ್ತರ ಧೃವದಿಂದ ದಕ್ಷಿಣ ಧೃವಕೆ ಉತ್ತರವ ಹುಡಿಕಿ ಬಾಳು ಸಾಗಿಸುತಿದ್ದ. ಉತ್ತರಗಳು ತಲೆ ತುಂಬಿದರು ಹೃದಯ ಬರಿದಾಗಿ ಬರಡಾದಾಗ ಎಚ್ಚೆತ್ತು ಪ್ರಶ್ನೆಗಳನ್ನು ಹೂಳಿ...
ಬಿಗಿಗಣ್ಣ ಬದುಕಿನಲಿ ಅತ್ತ ಇತ್ತ ಹೊರಳಾಡುತ್ತ ಮುದುಡುತ್ತ ಮತ್ತೆ ಮಲಗುವಾಗ ಹೊದಿಕೆ ಹೊದ್ದು ಯಾವುದೋ ಬಾಯಗುಡಿಯಲ್ಲೊಂದು ಗಂಟೆ ಸದ್ದು: ‘ಏಳಯ್ಯ ಬೆಳಗಾಯಿತು’. ಥು ಸಾಡೇಸಾತು ಎಂದು ಸಹಸ್ರನಾಮಾವಳಿ ಪಠಿಸುತ್ತ ಕಣ್ಣು ತೆರೆದಾಗ ತೆರೆ ತೆರೆಯಾಗಿ ಪೊ...
(ಒಂದು ಐತಿಹಾಸಿಕ ಪ್ರಸಂಗ) ಇಳಿ ಹೊತ್ತಿನ ಸಮಯ. ಶಿವದಾಸನು ಚಂಡಿನಂಟಪದ ಮುಮ್ಮಗಲಿನ ಛಾವಣೆಯಲ್ಲಿ ಕುಳಿತು ಎಂಥದೋ ವೇದಾಂತ ಗ್ರಂಥವನ್ನು ಏಕಾಗ್ರ ಚಿತ್ರದಿಂದ ಪಠಣಮಾಡುತಲಿದ್ದನು. ದೇವಾಲಯದ ಸಭಾಂಗಣದಲ್ಲಿ ಪ್ರೌಢ ವಯಸ್ಸಿನ ಓರ್‍ವ ಮುಸಲ್ಮಾನನು ನಿಂತ...
ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ ಕೋಟಿ ಜನುಮಗಳ ಸಮುದ್ರ ಮಥನದಿ ಅಮ್ಮತವನ್ನೆ ತಂದ || ೨ || ವಿಷಯಸಾಗರದಿ ವಿಷದ ಭೋಗದಲಿ ಜೀವ ಕೊಡ...
ನಾಸಿರ್ ಇಬ್ನ್ ಅಹಮದ್ ನಾಸಿರ್ ಇಬ್ನ್ ಅಹಮದ್! ಯಾರಿಗೆ ತಾನೆ ಗೊತ್ತಿಲ್ಲ ಅವನ ? ಸಾಮನೀದ್ ರಾಜವಂಶದ ಅಮೀನ ಅವನಲ್ಲಿ ನಮಗೆ ಅಪಾರ ವಿಶ್ವಾಸ-ಆತ ಹೋದ ಹೋದಲ್ಲಿ ರಕ್ಷಣೆಯ ಪಡೆ, ಸೇವಕರ ದಂಡು, ಬುಖಾರಾದವರು ಸ್ವಾಮಿ, ನಾವು. ಕಸುವಿರುವ ನೆಲ, ಫ...
ಮುಗಿಲುಗಳಿಗೆ ಘಳಿಗೆಗೆ ನೂರು ಬಣ್ಣ ಅಲ್ಲಿ ಹುಟ್ಟಿ ಬರುವ ನೀರಿಗೆ ನಿರ್ವರ್ಣ ಆ ನಿರ್ಮಲ ನೀರಿನೊಳಗೆ ತೂರಿ ಬರುವ ಬೆಳಕಿಗೊ ಬಣ್ಣಿಸಲಾಗದು ಏಳು ಬಣ್ಣ *****...
ನಿನ್ನಲ್ಲಿ ಬೇಡಿ, ಬೇಡಿ ಕೇವಲವಾಗಲಾರೆ ಎಂದು ನೂರು ನೂರು ಬಾರಿ ನಿರ್ಧರಿಸುವೆ ಬಾರಿ, ಬಾರಿಗೂ ಸೋಲುವೆ. *****...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...
“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...














