ದೇವಾ ನಿನ್ನ ನಾಮಾಮೃತವ

ದೇವಾ ನಿನ್ನ ನಾಮಾಮೃತವ
ಸದಾ ಸವಿಯುತಲಿದ್ದರೆ
ಹಸಿವು ಎನಿಸುವುದಿಲ್ಲಾ |
ಸಮಯ ಸವೆಯುವುದೇ
ತಿಳಿಯುವುದಿಲ್ಲಾ||

ಚಿತ್ತದೊಳು ನಿನ್ನನ್ನಿರಿಸಿ
ಮನದಿ ನಿನ್ನ ಸ್ಮರಿಸಿ ನಿತ್ಯ
ಕೆಲಸ ಪ್ರಾರಂಭಿಸೆ
ಯಾವ ವಿಘ್ನಗಳಿಲ್ಲ|
ತಿನ್ನುವ ಅನ್ನವನು
ನೀನಿತ್ತ ಪ್ರಸಾದವೆಂದು
ನಮಸ್ಕರಿಸಿ ಸೇವಿಸಿದರೆ
ಯಾವ ರೋಗರುಜನಗಳಿಲ್ಲ||

ಬಂದದ್ದನ್ನೆಲ್ಲವ
ನೀನಿತ್ತ ಕರುಣೆ ಎಂದರೆ
ಯಾವ ನೋವಿರುವುದಿಲ್ಲ|
ಇರದ ಭಾಗ್ಯವ
ಬಯಸಿ ಬೇಡುತ ನಿನ್ನನು
ಸ್ವಾರ್ಥಸಾಧನೆಗೆ ಪೂಜಿಸೆ ತರವಲ್ಲ|
ನೀ ಇತ್ತುದನೇ ಸ್ವೀಕರಿಸಿ ಅನುಭವಿಸೆ
ಆ ಬದುಕು ನಿಜಕ್ಕೂ ಅರ್ಥಮಯ
ಇಲ್ಲದಿರೆ ಬರೀ ವ್ಯರ್ತವೀಜೀವನ ಸಮಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರದ ಆಶ್ವಾಸನೆ
Next post ಏನು ಬೇಡಲಿ ಹರಿಯೆ!

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…