ಅವಳಿಗೆ ಬಾಳಿನಲ್ಲಿ ಬೇಸರ ತಡೆಯಲಾಗಲಿಲ್ಲ. ತನ್ನ ಪ್ರಿಯಕರನ ತೋಳಲ್ಲಿ ಬೇರೆಯ ಹುಡುಗಿಯನ್ನು ಕಂಡಾಗ ಅವಳ ಹೃದಯ ನಿಂತಂತಾಯಿತು. ಬಾಳಲ್ಲಿ ಕತ್ತಲೆ ಕವಿದು ತೋಟದ ಮರಕ್ಕೆ ನೇಣು ಹಾಕಿಕೊಳ್ಳಲು ಹೊರಟಾಗ ಮರ ತನ್ನ ಭಾಷೆಯಲ್ಲಿ ನೂರುಬಾರಿ ಸಂತೈಸಿ ಹೇಳಿತು “ನೀ ಪ್ರಿಯಕರನಿಂದ ದೂರವಾದಿ ಎಂದು ಉಸಿರಾಡದಂತೆ ಕತ್ತನ್ನು ಹಿಸುಕು ಎಂದು ನನ್ನ ಕೇಳಬೇಡ, ನನ್ನ ರೆಂಬೆ ಕೈಗಳಿಂದ ಹತ್ಯೆ ಮಾಡಿಸಬೇಡ, ನಿನಗೆ ನಾನು ನಿನ್ನ ಬಾಳು ಪೂರ್‍ತಿ ನೆಮ್ಮದಿಯ ಉಸಿರಾಡಲು, ಸುಖ, ಸಂತಸ ದಿಂದ ಬಾಳಲು ಜೀವದ ಉಸಿರು, ಚೈತನ್ಯ ಕೊಡುವೆ” ಎಂದಿತು. ಮರದ ಆಶ್ವಾಸನೆಯಿಂದ ನೇಣು ಸಡಲಿಸಿ ಅವಳು ಕಣ್ಣು ಒರಸಿಕೊಂಡಳು. ಹಸಿರು ಕೊಟ್ಟ ಬಾಳಿನಲ್ಲಿ ಸುಖಿಸಿದಳು.
*****