
ಒಳಬನ್ನಿ ಗೆಳೆಯರೆ ಇದು ಒಬ್ಬ ಕವೀಂದ್ರನ ಗೋರಿ ಹುಸಿದಿದ್ದರೆ ಕಸಿದಿದ್ದರೆ ಮಾತಿಗೆ ತಪ್ಪಿ ತಪಿಸಿದ್ದರೆ ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ ರಾತ್ರಿ ರಾಮಾಯಣ ಹಗಲು ಭಾರತ ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ...
ನಂಬು ನಂಬೆಲೆ ಮನವೆ ನಿನ್ನನು ನಂಬದಿದ್ದರೆ ನಶ್ವರಾ ತುಂಬು ಎದೆಯಲಿ ವಿಶ್ವಮೂರ್ತಿಯ ಇಲ್ಲದೆಲ್ಲವು ಅಪಸ್ವರಾ || ಪ|| ನಂಬಿ ನಿನ್ನನು ಸುಖವ ಕಂಡರು ತುಂಬು ಹೃದಯದಿ ಶರಣರು ನಂಬಿ ನಿನ್ನಯ ಹೊಗಳಿ ದಣಿಯದೆ ಹಾಡಿ ಕುಣಿದರು ದಾಸರು || ೧ || ಹುಟ್ಟಿ ಸಾ...
ಸದಾ ಬ್ರಹ್ಮವಿಚಾರಿ ಏಕ ಜನಿವಾರಧಾರಿ ಕೆಲವೊಮ್ಮೆ ಮಾತ್ರ ಶನಿವಾರ ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ ಒತ್ತಾ...
ಕತೆಗಾರರು ಯಶಸ್ವಿ ಪತ್ರಿಕಾ ಲೇಖಕರಾಗರೆಂದು ಯಾರೋ ನುಡಿದ ನೆನಪಿದೆ. ಅದರಲ್ಲಿ ಸತ್ಯವಿದ್ದಿರಬೇಕು. ನಾನು ಕತೆಗಾರನಂತೆ. ಹಾಗೆಂದು ಜನರು ಹೇಳುವರು. ಜನರು ಒಗ್ಗಟ್ಟಾಗಿ ಇಟ್ಟ ಹೆಸರು, ತೊಟ್ಟಿಲಿನಲ್ಲಿ ತಂದೆ-ತಾಯ್ಗಳು ಇರಿಸಿದ ಹೆಸರಿಗಿಂತ ಬಲವುಳ್ಳ...
ಇಪ್ಪತ್ತು ಮಹಡಿ ಕಟ್ಟಡ ಕೆಳಗಿನಿಂದ ಗುಂಡ ಮೇಲೆ ನೋಡುತ್ತಾ ನಿಂತಿದ್ದ. ಹಾದಿ ಹೋಕರ್‍ಯಾರೋ ಕೇಳಿದ್ರು – “ಏನು ನೋಡುತ್ತಿರುವೆ?” “ಮೇಲಿಂದ ನನ್ನ ವಾಚು ಕೆಳಗೆ ಬಿತ್ತು..” “ಅದು ಇಲ್ಲೆಲ್ಲೋ ಬಿದ್ದಿರುತ...
ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ ಬಂಗಾರ ಕಳಸಾ ನಿನಮುಡಿಗೆ ||೧|| ನೀ ಕಲ್ಲು ಆದರ ಕಲ್ಲೆಲ್ಲ ಕೈವಲ್...
ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ “ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ” ಎಂದು ಕೊಂಡಿತು. ಮತ್ತೊಂದು ಬುಗ್ಗೆ “ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ ಕಾಲ ಬಾ...
ಮಾನವನ ಬೆವರು ಬಾಳಿನ ತವರು ಅರಿವಾಗಿ ಅರಳಿ ಬೆಳಕಾಯಿತು ಸಂಸ್ಕೃತಿಗೆ ದುಡಿಮೆ ಬೇರಾಯಿತು || ಬಂಡೆಗಟ್ಟಿದ ಬೆಟ್ಟ ಹಸಿರು ತುಂಬಿದ ಘಟ್ಟ ಮಾನವನು ಮೈ ಏರಿ ಮಾತಾಡಿದ ಹೋರಾಟ ನಡೆಸುತ್ತ ಒಂದಾಗಿ ಬದುಕುತ್ತ ಹೊಸ ಗೂಡು ಹುಡುಕುತ್ತ ನಡೆದಾಡಿದ || ಕಾಡು ...
ಮಲಗು ಮುದ್ದಿನ ಕಣ್ಮಣಿ ಮಲಗು ಪ್ರೀತಿಯ ಚಿನ್ಮಯಿ| ಮಲಗೂ ಮಲಗೆನ್ನ ಅರಗಿಣಿ ಜೋಗುಳವ ಹಾಡುತಲಿ ತಂಪೆಲರ ಬೀಸುತಲಿದೆ ತಂಗಾಳಿ || ನಿದಿರೆಯು ನಿನ್ನನು ಕರೆದೊಯ್ಯುವಳು ಚಂದ್ರನ ಜೊತೆಗೂಡಿ ಆಟವನಾಡುವಳು| ಬಣ್ಣಬಣ್ಣದಗೊಂಬೆಗಳ ಕೊಡುವಳು ಮುಗಿಲ ಜೋಕಾಲಿ ...
ಇಂದು ಪೆಟ್ರೋಲನ್ನು ಯತೇಚ್ಛವಾಗಿ ಯಂತ್ರಗಳಿಗೆ ಇತರೆ ವಸ್ತುಗಳ ಚಲನೆಗೆ ಬಳೆಸುತ್ತೇವೆ. ಹೀಗೆ ಬಳೆಸುತ್ತಿದ್ದರೆ ಭೂಮಿಯಲ್ಲಿ ದೊರೆಯುವ ಈ ಇಂಧನ ಬಳಕೆಗೆ ತಕ್ಕಂತೆ ಸಾಕಾಗದೆ ಕಡಿಮೆಯಾಗುವ ಸ್ಥಿತಿಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೊಂದು ಮುಲದಿಂ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















