ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ “ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ” ಎಂದು ಕೊಂಡಿತು. ಮತ್ತೊಂದು ಬುಗ್ಗೆ “ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ ಕಾಲ ಬಾಳುವೆ” ಎಂದುಕೊಂಡಿತು. ಮಧ್ಯಾನದ ಹೊತ್ತಿಗೆ ನೆತ್ತಿಯಲ್ಲಿ ತೇಜದ ರವಿಕಿರಣ ಬುಗ್ಗೆಗಳನ್ನು ಕುಕ್ಕಲಾರಂಬಿಸಿತು. ಎರಡು ಬುಗ್ಗೆಗಳು ನಾವು ನೀಲಿ ಆಕಾಸದಲ್ಲಿ ಲೀನವಾಗಿ ಬಿಡುವುದೇ ಒಳ್ಳೆಯದು. ಈಕ್ಷಣಿಕ ಸುಖ ಬೇಡವೆಂದು ನಿರ್ಧರಿಸಿಬಿಟ್ಟವು.
*****















