
ನನ್ನ ಬುದ್ದಿಗೆ ತೋಚಿದ್ದನ್ನು ಮಾಡಿಯೇ ತೀರ ಬೇಕೆಂಬ ಛಲ ನನ್ನದು. ಹಿಂದೆ ತಿಳಿಸಿದಂತೆ ನಾನು ಬರೆದ ಅನೇಕ ನಾಟಕಗಳ ಹಸ್ತಪ್ರತಿಗಳನ್ನು ಹೇಗಾದರೂ ಮಾಡಿ ಕಂಪನಿ ಕಲಾವಿದರ ಮೂಲಕ ರಂಗದ ಮೇಲೆ ನೋಡಲೇಬೇಕೆಂಬ ಹೆಬ್ಬಯಕೆಯಾದಾಗ ಚೀಲದ ತುಂಬ ನಾನು ಬರೆದ ನಾ...
ರಾಮನಾಳಿದರೇನು? ರಾವಣನೇ ಆಳಿದರೇನು? ನಮ್ಮ ಕಷ್ಟ ಹರಿಯಲಿಲ್ಲ ಭ್ರಷ್ಟಾಚಾರ ಹೋಗಲಿಲ್ಲ ಬೆಲೆ ಏರಿಕೆ ನಿಲ್ಲಲ್ಲ. “ಖದೀಮರ ಕೊನೆಯ ತಾಣ ರಾಜಕೀಯ” ಎಂದು ತಿಳಿದೂ… ತಿಳಿದೂ… ಪುಢಾರಿಗಳನ್ನು ನಂಬುವ ನಾವು… ತಲೆ ಇಲ್...
ದೇವ ಕರುಣಿಸು ನನಗೊಂದು ಕುಡಿಯ| ಜನ್ಮನೀಡಿ ಈ ಜನ್ಮವ ಪಾವನವಾಗಿಸುವೆನು| ಅಮ್ಮನೆಂದೆನಿಸಿಕೊಂಡೊಮ್ಮೆ ಆ ಮಮತೆಯನು ಸವಿಯುವೆನು|| ಆ ಹಸುಗೂಸು ಮಡಿಲಲಿ ಮಲಗಿ ಪುಟ್ಟ ಕಾಲಲಿಂದ ಒದೆಯುವುದ ನಾ ಕಲ್ಪಿಸಿ, ಅದರ ಬರುವಿಕೆಗಾಗಿ ಕಾದಿರುವೆ ಕಾತರಿಸಿ | ದಯೆ...
ಮುಂಜಾನೆ ಸಮಯ. ಆ ಪುಟ್ಟ ಹುಡುಗ ದೊಡ್ಡ ಗಿಡವನ್ನು ಹತ್ತಿ ಮರದ ಶಾಕೆ ಶಾಕೆಯಲ್ಲಿ ಏನೋ ಹುಡುಕುತಿದ್ದ. ಆಡುವ ವಯಸ್ಸಿನ ಈ ಹುಡುಗ ಬೆಳ್ಳಂಬೆಳಿಗ್ಗೆ ಸಿಲಿಕಿಹಾಕಿಕೊಂಡ ಗಾಳಿಪಟ ಹುಡುಕುತ್ತಿರಬಹುದೆಂದು “ಯಾಕೆ, ಮಗು, ಮರ ಹತ್ತಿದ್ದೀಯಾ?̶...
ದುಡಿಮೆಗಾರರಣ್ಣ ನಾವು ದುಡಿಮೆಗಾರರು ಎದೆಯ ತಂತಿ ಮೀಟಿ ನುಡಿವ ಹಾಡುಗಾರರು || ಕೆರೆಕುಂಟೆಗಳ ಕಟ್ಟುತ ನಾವು ಬೆವರ ನೀರನು ಹರಿಸಿದೆವು ಕಳೆಯ ಕೀಳುತ ಬೆಳೆಯ ಬೆಳೆಯುತ ಒಡೆಯನ ಒಡಲನು ತುಂಬಿದೆವು || ಚಿಟ್ಟೆಕಂಗಳ ಬಟ್ಟೆಯ ನೇದು ಬೆತ್ತಲೆ ಬದುಕನು ಉಂ...
‘ದಲಿತ’ ಪದ ಕನ್ನಡದ ಸಂದರ್ಭದಲ್ಲಿ ಈಚಿನದು. ಆದರೆ ಇದರೊಳಗಿನ ಪರಿಕಲ್ಪನೆ ಮಾತ್ರ ಭಾರತೀಯ ಜಗತ್ತಿನಲ್ಲಿ ಐದು ಸಾವಿರ ವರ್ಷಗಳ ಆಚೆಗೆ ತನ್ನ ಮೂಲವನ್ನು ಇರಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಇದು ಅವ್ಯಾಹತವಾಗಿ ನಮ್ಮ ಸಂಸ್ಕೃತಿಯಲ್ಲಿ ಗಾಢವಾಗಿ ...
ಇಷ್ಟಿಷ್ಟೆ ಭಜನೆ ಇಷ್ಟಿಷ್ಟೆ ಧ್ಯಾನ ಇಷ್ಟದಲಿ ಹಾಡು ಗಾನ ಇಷ್ಟಿಷ್ಟೆ ಶ್ರವಣ ಇಷ್ಟಿಷ್ಟೆ ಮನನ ಕಷ್ಟದಲಿ ಸುಖದ ತಾನ || ೧ || ಹೀಗೊಮ್ಮೆ ತಲೆಯ ತೂಗುತ್ತ ಒಲಿದು ಹಾಗೊಮ್ಮೆ ತಲೆಯನೆತ್ತಿ ಬೀಗುತ್ತ ಹೆಣ್ಣ ಮರೆಯದೆಯೆ ಕಣ್ಣ ಸಾಗಿಸುತ ಮನವನೊತ್ತಿ || ...
ನನಗೆ ಟೀ ಬೇಕು ಟಿಫಿನ್ ಬೇಕು ಹೊದೆಯುವುದಕ್ಕೆ ಚದ್ದರ ಬೇಕು ಎಂದೆ ಸೋಶಿಯೋಳಜಿ ಸೈಕಾಳಜಿ ಆಂತ್ರೊಪೋಳಜಿ ಫಿಲಾಸಫಿ ಸಾಕು ನಿನಗೆ ಎಂದಿರಿ ಎಲ್ಲಾ ಅನುಭವಿಸಬೇಕು ನನಗೆ ಎಂದು ಕೂಗಿದೆ ಇಂದ್ರಿಯಗಳಿಂದ ಇತ್ತ ಬಾ ಅಳಬೇಡ ನಗಬೇಡ ಚಿಂತಿಸು ಎಂದಿರಿ ಚಿಂತಿಸ...
ವೈದ್ಯಕೀಯ ಕ್ಷೇತ್ರದ ಪ್ರಮುಖರೋಗಗಳಿಗೆ ರಾಸಾಯನಿಕ ತಯಾರಿಕೆಯಿಂದಾಗಿ ಔಷಧಗಳು ಮಾನವನ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತವೆ. ಇದಲ್ಲದೇ ಕೆಲವು ಔಷಧಿಗಳೇ ಮಾರಕ ಮಾದಕ ವಸ್ತುಗಳಾಗಿ ಯುವನಜತೆಯನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಲು ಜ...
ವೀಣೆ ಸಿತಾರ ಪಿಟೀಲು ತಮಟೆ ತಬಲ ಡೋಲು ಸನಾದಿ ನಾದಸ್ವರ ಕೊಳಲು ನಾದಕ್ಕೆ ಎಷ್ಟೋ ವಾದ್ಯಗಳು ಒಂದೊಂದಕ್ಕು ವಿಶಿಷ್ಟ ಒಡಲು ಮೇಲು-ಕೀಳು ಎನ್ನುವದೆಲ್ಲ ನರನ ನಾಲಿಗೆ ತೆವಲು *****...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
















