ಮುಂಜಾನೆ ಸಮಯ. ಆ ಪುಟ್ಟ ಹುಡುಗ ದೊಡ್ಡ ಗಿಡವನ್ನು ಹತ್ತಿ ಮರದ ಶಾಕೆ ಶಾಕೆಯಲ್ಲಿ ಏನೋ ಹುಡುಕುತಿದ್ದ. ಆಡುವ ವಯಸ್ಸಿನ ಈ ಹುಡುಗ ಬೆಳ್ಳಂಬೆಳಿಗ್ಗೆ ಸಿಲಿಕಿಹಾಕಿಕೊಂಡ ಗಾಳಿಪಟ ಹುಡುಕುತ್ತಿರಬಹುದೆಂದು “ಯಾಕೆ, ಮಗು, ಮರ ಹತ್ತಿದ್ದೀಯಾ?” ಎಂದೆ. ನಾನು ವೃತ್ತ ಪತ್ರಿಕೆಗಳನ್ನು ಮನೆಗಳಿಗೆ ಹಾಕುತ್ತೇನೆ. ಮೂರನೇಯ ಮಾಡಿಗೆಗೆ ಕೈ ಬೀಸಿ ಎಸೆದಾಗ ಪತ್ರಿಕೆ ಮರದ ರೆಂಬೆಯಲ್ಲಿ ಸಿಲಿಕಿಬಿಟ್ಟಿತು. ಪೇಪರ್ ಯಾಕೆ ಹಾಕಿಲ್ಲ ಎಂದು ಬೈಸಿಕೊಳ್ಳೋದು ಬೇಡ ಎಂದು ಮರ ಹತ್ತಿ ಹುಡುಕುತ್ತಿರುವೆ” ಎಂದ. ಗಗನದಲ್ಲಿ ಗಾಳಿಪಟ ಹಾರಿಸಿ ಖುಷಿ ಪಡಬೇಕಾದ ಹುಡುಗ ವೃತ್ತ ಪತ್ರಿಕೆ ತಲುಪಿಸುವ ವೃತ್ತಿಯಲ್ಲಿ ಸಿಲುಕಿ ಮಹಡಿಯ ಎತ್ತರಕ್ಕೆ ಜಿಗಿಯುತ್ತ ಸಾಗಿತ್ತು ಅವನ ಕಿಶೋರ ಬಾಳ್ವೆ.
*****