ದೇವ ಕರುಣಿಸು

ದೇವ ಕರುಣಿಸು
ನನಗೊಂದು ಕುಡಿಯ|
ಜನ್ಮನೀಡಿ ಈ ಜನ್ಮವ
ಪಾವನವಾಗಿಸುವೆನು|
ಅಮ್ಮನೆಂದೆನಿಸಿಕೊಂಡೊಮ್ಮೆ
ಆ ಮಮತೆಯನು ಸವಿಯುವೆನು||

ಆ ಹಸುಗೂಸು ಮಡಿಲಲಿ ಮಲಗಿ
ಪುಟ್ಟ ಕಾಲಲಿಂದ ಒದೆಯುವುದ
ನಾ ಕಲ್ಪಿಸಿ, ಅದರ ಬರುವಿಕೆಗಾಗಿ
ಕಾದಿರುವೆ ಕಾತರಿಸಿ |
ದಯೆ ಇರಿಸಿ ದಯಪಾಲಿಸು
ಕಂದಮ್ಮನ ಕರೆಯ ಕೇಳಿಸು||

ಅದು ಹಸಿದು ಅಳುತ ಎದೆಗೊರಗಿ
ಅಮೃತವನು ಸವಿಯುವಾಗ|
ಅದರ ಹಣೆಯ ಬೆವರ ಒರೆಸಿ
ತಾಯ್ತನವ ಅನುಭವಿಸುವ
ಆಸೆ ಫಲಿಸು, ಕಂದನಾ
ಸೇವೆಯ ಭಾಗ್ಯದೊಳಿರಿಸು||

ಎಷ್ಟೆಲ್ಲಾ ವಿದ್ಯೆಗಳಿಸಿದ್ದರೂ
ಎನೆಲ್ಲಾ ಸಂಪತ್ತೀದ್ದರೂ|
ಆ ಮಗುವೆಂಬ ಜೀವಜಲವು
ನನ್ನಲ್ಲಿರದೆ ಬರಡಾಗಿದೆ ಜಗವು|
ನನ್ನ ಕೋರಿಕೆಯ ಅರ್ಪಿಸಿ ನಿನಗೆ
ಕಾಯುತ್ತಿರುವೆನು ನಿನ್ನೊಪ್ಪಿಗೆಯ
ತುಂಬು ನೀ ಎನ್ನ ಜೋಳಿಗೆಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ ಕಾರ್‍ಮಿಕ
Next post ತಲೆ ಇಲ್ಲದವರು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…