ಕಲ್ಲ ಕಡೆದು ಕೂರಿಸಿ
ಹಾಲು ಮೊಸರು ತುಪ್ಪ ಸುರಿದು
ಅಭಿಷೇಕ ಮಾಡಿದರೆ
ಕಳೆದು ಹೋಗಬಲ್ಲುದೆ
ಕಲ್ಲಿನೊಳಗಿನ ಕಿಚ್ಚು
ಮೈಗೆ ತೊಡಿಸಿದರೆ
ವಜ್ರ ವೈಡೂರ್‍ಯ
ಮಣ ಆಭರಣ
ಬದಲಾಗಬಲ್ಲುದೆ
ಒಡಲೊಳಗೆ
ಹುಟ್ಟಿ ಬಂದಂಥ ಕೆಚ್ಚು
*****