ಕರುಣೆಯಿಡಿ
ನಿಮ್ಮ ಈ ಕರುಳ ಕುಡಿಯ
ಕರುಳು ಹರಿಯ ಬೇಡಿ.
ಹೆಣ್ಣೆಂದಾಕ್ಷಣಕ್ಕೆ ನಾನು ಕಸವಲ್ಲ
ಜೀವಿ
ಎಸೆದು ಕೈ ತೊಳೆದು ಕೊಳ್ಳಲು.
ಹಸೆಗೆ ಏರಿಸುವ ಮೊದಲು
ಪರಾಮರ್ಶಿಸಿ,-
ಮನೆ, ಮನಸುಗಳ ಸೋಸಿ.
ಅಸಂಗತ ತೀರ್ಮಾನ ಮಾಡಿ
ಸಂಬಂಧದ ಅರ್ಥ ಕೆಡಿಸಬೇಡಿ.
ಸಂಸ್ಕರಣ ಪೂರಕ ಬಾಳುವೆಗೆ
ಅವಕಾಶ ಕಲ್ಪಿಸಿ ಕೊಡಿ
*****