ಎಂಥ ಚೆಲುವ ನನ್ನ ಹುಡುಗ
ಹೇಗೆ ಅದನು ಹೇಳಲಿ
ಹೇಳಲಾರೆ ನಾನು ಹಾಗೆ
ಅದೂ ಸುಮ್ಮ ಸುಮ್ಮನೆ
ಅವನು ಕೊಟ್ಟುದೇನು ಮೈಯೆ
ಮನವೆ ಒಲವೆ ಚೆಲುವೆ
ಅಲ್ಲ ಅಲ್ಲ ಹೃದಯ ಹಿಗ್ಗಿ
ಹರಿಯುವಂಥ ಬಲವೆ
ಅದು ದೊರೆತೇ ನಾನು ಈಗ
ಜಗವನ್ನೇ ಗೆಲ್ಲುವೆ.
ಮಂಕು ಬಡಿದ ಮಸಿ
ಹಿಡಿದ ಪಾತ್ರೆ ನಾನು
ಉಜ್ಜಿ ತಿಕ್ಕಿ ತೊಳೆದು
ಹೊಳೆಸಿ ಬೆಳಗಿದ ಅವನು
ಬೆಳಕಾದೆ ಹೊಳೆಯಾದೆ
ಹರಿದೆ ನಾನು.
*****