ದೇಹ ಶಕ್ತಿಗೂಟದೊಳು ಹಿತಮಿತವೆ ಮೊದಲು ದೋಷವದು ಟಾನಿಕ್ಕು ಅದಕೆ ಬದಲು ಧರಣಿಯೊಲವಿಗೆ ದೇಹ ದುಡಿತವೆ ಮೊದಲು ದುಡಿದನುಭವಕೆ ಪುಸ್ತಕವಲ್ಲ ಬದಲು ದುಡಿತದೊಳನ್ನ ಜ್ಞಾನಗಳೊಂದಾಗಲೆಲ್ಲ ಚೆಲುವು – ವಿಜ್ಞಾನೇಶ್ವರಾ *****...
ಮಿತ್ರನಾಗಲಿ ಶತ್ರುವಾಗಲಿ ಗುರುತಿನವನಾಗಲಿ, ಗುರುತಿಲ್ಲದವನಾಗಲಿ ದೊಡ್ಡವನೆಂದು ತಿಳಿದವನ ಬಡವನೆಂದು ಒಪ್ಪದವನ ಮೇಲೆ ಯಾವದೇ ಕಾರಣದಿಂದ ಅಪಯಶದ ಧೂಳು ಹಾರಿದರೆ ನೀನು ಕಟುವಚನದಿಂದ ಅವನನ್ನು ದೂರುವ ತಪ್ಪು ಮಾಡದಿರು ಇವನು ಹಾಗೇ ಇದ್ದನೆಂದು ನೂರಾರು...
ಪ್ರೀತಿಯ ಗೆಳೆಯಾ, ನವರಾತ್ರಿಯ ಸಂಭ್ರಮ ಎಲ್ಲ ಕಡೆ ಪಸರಿಸಿದೆ. ಭೂಮಿ ಹಾಗೂ ಭೂಮಿಯ ಮೇಲೆ ವಾಸಿಸುವ ಜನರು ಯಾವುದೋ ಸಂಪತ್ತು ಹೊಂದುವ ಸಂಭ್ರಮದಲ್ಲಿದ್ದಾರೆ. ನಾವು ಬದುಕುವ ಪರಿ ಈ ನಿಸರ್ಗಕ್ಕೆ ಎಷ್ಟೊಂದು ಹತ್ತಿರವಾಗಿದೆ. ಎಲ್ಲಾ ಇಷ್ಟಾರ್ಥ ಸಿದ್ದಿ...
ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ ನಿನ್ನ ನೆನಹು ತುಂಬಲಿ ಭಾನುವಿನಂತೆ ನಂಬಿಕ...
ಮಲಗು ಮಗುವೇ ಜೋಗುಳ ನಿನಗೆ| ನಿದಿರಾ ದೇವತೆ ಬರುವಳು ಬಳಿಗೆ| ಆಟವನಾಡಲು ನಿನ್ನಯ ಜೊತೆಗೆ ಕರೆದೊಯೈವಳು ನಿನ್ನನು ಆ ಚಂದ್ರನ ಲೋಕಕೆ|| ನಿನ್ನ ಮುದ್ದಾದ ಮೊಗವ ನೋಡುತಲಿ ಹರ್ಷದ ಹೊಳೆಯಲಿ ತೇಲಿಸುತಲಿ| ಬಗೆಬಗೆ ನಾಟ್ಯವ ಮಾಡಿ ನಗಿಸುತಲಿ ನಿನಗೆ ತರತರ...
ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ. ಗೆಳೆಯ ಕೇಳಿದ “ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?” ಎಂದು. ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನ...
ನನ್ನ ನುಂಗುತಿಹ ನೋವುಗಳೇ ಬಾಳ ತುಂಬುತಿಹ ಬೇವುಗಳೇ ಕಾಳ ರಾತ್ರಿಯಲಿ ಕಾಡಾಗದಿರಿ ಬಾಳ ಬೀದಿಯಲಿ ಹಾವಾಗದಿರಿ ಮೋಡದ ಮುಸುಕ ಮೆಲ್ಲನೆ ಸರಿಸಿ ನಗುವ ಚಂದ್ರ ಬೇಕು ಕಾಡುವ ಕತ್ತಲ ಕತ್ತನು ತರಿದು ನೆಗೆವ ಸೂರ್ಯ ಬೇಕು. ನೋವನು ಬಿತ್ತಿ ಬೇವು ಬೆಳೆದರೂ ಬ...
ಒತ್ತಾಸೆ : ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. ಕನ್ನಡದ ಪರಂಪರೆಯಲ್ಲಿ ಬಂಡಾಯ ಸಂವೇದನೆ ಯಾವತ್ತೂ ಜೀವಂತವಾಗಿದೆ. ಆದರೆ ಅದರ ವಿನ್ಯಾಸಗಳು ಮಾತ್ರ ಕಾಲದಿಂದ ಕಾಲಕ್ಕೆ,...
ಏರಿಸಿ, ಹಾರಿಸಿ, ಕನ್ನಡದ ಬಾವುಟ! ಓಹೊ ಕನ್ನಡನಾಡು, ಆಹ್ ಕನ್ನಡನುಡಿ! ಹಾರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ! ಗಾಳಿಯಲಿ ಫಟಪಟ, ದಾಳಿಯಲಿ ಚಟಚಟ, ಉರಿಯಿತೋ ಉರಿಯಿತು ಹಗೆಯ ಹಟ ಮನೆ ಮಟ, ಹಾಳ್ ಹಾಳ್ ಸುರಿಯಿತು ಹಗೆಯ ಬೀಡಕ್ಕಟ! ಬಾಳ್ ಕನ್ನಡ ತಾಯ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







