ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ ||

ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ
ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ || ೧ ||

ತಾಳಕ್ಕೆ ಕಾಲು ಹಾಕೊ ಕಾಲಕ್ಕೆ ಹೊಂದಿರಬೇಕು
ಒಂದ್ಹೆಜ್ಜೆ ತಪ್ಪಲು ನೀನು ದಂಡಾ ಕೊಡಲು ಬೇಕು || ೨ ||

ಬಡತನದ ಗೋಳಿನ ಆಟ ಸಿರಿತನದ ಸೊಕ್ಕಿನ ಆಟ
ಕತ್ತಲು ಬೆಳಕುಗಳಲ್ಲಿ ಕಣ್ಣಾ ಮುಚ್ಚಾಲೆಯಾಟ || ೩ ||

ಅತ್ತಿತ್ತ ನೋಡಬೇಡ ಮತ್ತೊಬ್ಬರ ಚಿಂತೆ ಬೇಡ
ದೇಹವಿಲ್ಲಿ ಕುಣಿಯುತಿರಲಿ ಮನಸೆಲಾ ಅವನೆಡೆಗಿರಲಿ || ೪ ||
*****