
ಅಳುವು ನಿನ್ನದು ನಗುವು ನಿನ್ನದು ನೋವು ಸುಖಗಳು ನಿನ್ನವು ಹೊಳೆದು ಅಳಿಯುವ ಚೆಲುವು ನಿನ್ನದು ತಾಳಿ ಬಾಳುವ ಒಲುಮೆಯು || ೧ || ಲಾಭ ನಿನ್ನದೆ ನಷ್ಟ ನಿನ್ನದೆ ನನ್ನದೆನ್ನುತ ಉಬ್ಬುವೆ ಕಾಮ ನಿನ್ನದೆ ಪ್ರೇಮ ನಿನ್ನದೆ ಏರಿಳಿವುಗಳ ತಬ್ಬುವೆ || ೨ ||...
ಸಾಕು ನಿಲ್ಲಿಸು ನಾಗರಿಕ ಭಾಷೆಯಲ್ಲಿ ಮಾತಾಡು ಮನುಷ್ಯರ ಹಾಗೆ ಮಾತಾಡು ಪ್ರತಿಮೆ ಪ್ರತೀಕ ಪ್ರಾಕಾರ ಎಂದು ಮೇಜಿಕ್ಕು ಕಾವ್ಯ ಗೀಚುತ್ತೀಯಾ ಆಮೇಲೆ ಲಾಜಿಕ್ಕು ಬೊಗಳುತ್ತೀಯಾ ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ ಗುಂಪುಗಾರಿಕೆ ನಡೆಸುತ್ತೀಯಾ ...
ಅನೇಕ ವನಸ್ಪತಿಗಳಿಂದ, ಆಹಾರಬೆಳೆಗಳಿಂದ ಎಣ್ಣೆಯನ್ನು ತಯಾರಿಸಿ ಔಷಧಿ ರೂಪದಲ್ಲಿಯೂ, ಆಹಾರದಲ್ಲಿಯೂ ಬಳೆಸಲಾಗುತ್ತದೆ. ಇದೀಗ ಹೊಂಗೆ ಮರದ ಬೀಜದಿಂದ, ಬೇವಿನ ಮರದ ಬೀಜದಿಂದ ಉತ್ಪಾದಿಸಲ್ಪಟ್ಟ ಎಣ್ಣೆಗಳಿಂದ ಯಂತ್ರಗಳನ್ನು ನಡೆಸಬಹುದೆಂದು ಭಾರತೀಯ ವಿಜ್...
ಕಾಲು ಹೊಕ್ಕರು ಮುಳ್ಳು ದಾರಿ ತಪ್ಪದು ಕಿವಿ ಹೊಕ್ಕರೆ ಸುಳ್ಳು ದಿಕ್ಕೇ ತೋಚದು *****...
ಈಗ…! ಇಲ್ಲಿ…! ಜೀವನದಲ್ಲಿ ಎಲ್ಲವೂ ಗೊಂದಲ ! ಗೋಜಲು.. ಗೋಜಲು ! ಅದೊ…! ಇದೋ…! ಹಾಗೋ…! ಹೀಗೋ…! ಹೇಗೆ ? ಯಾವುದು ಸರಿ ! ಬಗೆಹರಿಯದಲ್ಲ! *****...
ಹುಡುಕಾಟವೋ . . . ಹುಡುಗಾಟವೋ . . . ಹುಡುಗಾಟವೋ . . . ಕೊನೆಗೆ ಎಣಗಾಟವೋ . . . //ಪ// ಇಲ್ಲಿ ಯಾವುದೂ ಸರಿಯಲ್ಲ ಅದ ಹೇಳುವುದೂ ಸರಿಯಲ್ಲ ಹೇಳದಿರುವುದೂ ಸರಿಯಲ್ಲ ಕೊನೆಗೂ ಯಾವುದೂ ಸರಿಯಲ್ಲ! ಯಾವುದೇ ವಾದಕೂ ಫುಲ್‌ಸ್ಟಾಪ್ ಇಲ್ಲ ಅದಕೂ ಹೃದಯಕೂ...
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. “ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ ನಮ್ಮ ಬಡತನ ಹೋಗಿ ನಾವು ಸುಖವಾಗಿರಬಹು...
ಪುಸ್ತಕಗಳ ಲೇಖಕ ನಿಜವಾದ ಸಮಾಜ್ಜೋದ್ಧಾರಕ ನಿನ್ನ ನುಡಿಗಳೇ ಮಾರ್ಮಿಕ ಅಜ್ಞಾನಕ್ಕೆ ಮಾರಕ ಜ್ಞಾನದ ಪ್ರತೀಕ *****...
ಮತ್ತೆ ಮೋಹಿಸುವ ಬಯಕೆ ತೃಷೆ ತೀರದು ಹಲವು ಸಲ ಜಗಿದರೂ ಈ ರಸ ತೀರದು, ಒಸರಿ ಬರುವ ಒರತೆ ನಿಲ್ಲದೆಂದೇ ತೋರಿದೆ, ಬದುಕೇ ಬಾಯಾರಿದೆ ಸ್ವೀಕರಿಸು ಓ ಬದುಕೇ ನನ್ನದೆಲ್ಲವೂ ನಿನ್ನದೇ ಏಕಿನ್ನೂ ಸಂಕೋಚ, ಸವಿಯಲೆಂದೇ ನಾವು ಇಹುದಲ್ಲವೇ, ನಮ್ಮೆದೆಯ ತೋಟಗಳ ...
ನೆರೆಯವರು ನಕ್ಕರು: “ಇವನಿಗೆ ಹುಚ್ಚು ಕಚ್ಚಿದೆ ಮುಖದಲ್ಲಿ ದಿಗಿಲು ಬಿಚ್ಚಿದೆ ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ ಮೊಸರನ್ನದ ಬಲಿಕೊಟ್ಟರೆ ಹೊಸದನಿ ಮಾಯುತ್ತದೆ. ಇವನು ಹೊಸಿಲು ದಾಟದಂತೆ ಕಾಯುತ್ತದೆ.” ಅವರಿಗೇನು ಗೊತ್ತು ಪ್ರತಿ ರ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















