ನಿನ್ನದು

ಅಳುವು ನಿನ್ನದು ನಗುವು ನಿನ್ನದು
ನೋವು ಸುಖಗಳು ನಿನ್ನವು
ಹೊಳೆದು ಅಳಿಯುವ ಚೆಲುವು ನಿನ್ನದು
ತಾಳಿ ಬಾಳುವ ಒಲುಮೆಯು || ೧ ||

ಲಾಭ ನಿನ್ನದೆ ನಷ್ಟ ನಿನ್ನದೆ
ನನ್ನದೆನ್ನುತ ಉಬ್ಬುವೆ
ಕಾಮ ನಿನ್ನದೆ ಪ್ರೇಮ ನಿನ್ನದೆ
ಏರಿಳಿವುಗಳ ತಬ್ಬುವೆ || ೨ ||

ನೀನೆ ಕೊಟ್ಟುದ ನೀನೇ ಪಡೆಯುವಿ
ನೀನೆ ಹುಟ್ಟಿಸಿ ಕೊಲ್ಲುವಿ
ನಿನ್ನದೆಲ್ಲವ ನನ್ನದೆಂಬುವ
ತಮದ ಕೆಸರಲಿ ತಳ್ಳುವಿ || ೩ ||

ಮೈಯ ಯೌವನ ಅಂಗ ಸೌಷ್ಟವ
ರೂಪ ಬೇದವ ಅರಿಯೆನು
ಎಲ್ಲ ವಸ್ತುಗಳಲ್ಲಿ ನನ್ನದು
ಮುದ್ರೆ ಅಂಟಿಸಿ ಅಳುವೆನು || ೪ ||

ನನ್ನ ಬದುಕಿನ ನೂರು ಮುಖಗಳು
ನಿನ್ನವಾಗಲಿ ಒಡೆಯನೇ
ನನ್ನ ಸುತ್ತಲ ಕೋಟಿ ಮುಖದಲಿ
ನಿನ್ನ ಕಾಣುತ ಪಡೆಯೆನೇ || ೫ ||

ನನ್ನ ದೇಹವು ನಿನ್ನ ಲೀಲೆಗೆ
ರಂಗವಾಗಲಿ ಭವ್ಯವು
ನನ್ನ ಮನಮತಿ ನಿನ್ನ ಕುರುಹಿನ
ಶಕ್ತಿಯಾಗಲಿ ನವ್ಯವು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಖವಾಡಗಳ ಕವಿಗೆ
Next post ಮಾಸ್ತಿ ವಿಮರ್ಶೆಯ ಅನನ್ಯತೆ

ಸಣ್ಣ ಕತೆ

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…