ಅನೇಕ ವನಸ್ಪತಿಗಳಿಂದ, ಆಹಾರಬೆಳೆಗಳಿಂದ ಎಣ್ಣೆಯನ್ನು ತಯಾರಿಸಿ ಔಷಧಿ ರೂಪದಲ್ಲಿಯೂ, ಆಹಾರದಲ್ಲಿಯೂ ಬಳೆಸಲಾಗುತ್ತದೆ. ಇದೀಗ ಹೊಂಗೆ ಮರದ ಬೀಜದಿಂದ, ಬೇವಿನ ಮರದ ಬೀಜದಿಂದ ಉತ್ಪಾದಿಸಲ್ಪಟ್ಟ ಎಣ್ಣೆಗಳಿಂದ ಯಂತ್ರಗಳನ್ನು ನಡೆಸಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಂಗಸಂಸ್ಥೆಯಾದ ‘ಸೂತ್ರ’ವು ಕಂಡು ಹಿಡಿದಿದೆ. ಇದರಿಂದ ಮುಂದೊಂದು ದಿನ ವಿದೇಶಿ ಡಿಜಲ್ ಬರದಾಗುತ್ತದೆ ಮತ್ತು ಡಿಜರ್ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಈ ಎಣ್ಣೆಗಳನ್ನೇ ಬಳೆಸುವ ಕಾಲ ಬರಬಹುದು. ಒಂದು ಕೆ.ಜಿ. ಹೊಂಗೆ ಎಣ್ಣೆ ಅಥವಾ ಬೇವಿನ ಎಣ್ಣೆಯ ಉತ್ವಾದನೆಗೆ ೪ ಕೆ.ಜಿ. ಬೀಜಬೇಕಾಗುತ್ತದಷ್ಟೆ. ಡಿಜಲ್ ಯಂತ್ರಗಳಿಗೆ ವಾಹನಗಳಿಗೆ ಈ ಎಣ್ಣೆಯನ್ನು ಬಳೆಸಬಹುದು ಎಂದು ಕಂಡು ಹಿಡಿಯಲಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ವಿದ್ಯುತ್ ಉತ್ಪಾದಿಸಲು ಪ್ರಯೋಗಿಕವಾಗಿ ಈ ಎಣ್ಣೆಯನ್ನು ಬಳೆಸಲಾಗುತ್ತದೆ. ದಿನದಿನವೂ ಹೆಚ್ಚುತ್ತಿರುವ ಡಿಜಲ್ ಬೆಲೆಯ ದುಬಾರಿ ದರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಈ ಸಂಸ್ಕರಿಸಿದ ಹೊಂಗೆ, ಅಥವಾ ಬೇವಿನ ಎಣ್ಣೆಯನ್ನು ಯಂತ್ರಗಳಿಗೆ ಬಳಸಿ ಸಮಸ್ಯೆಗಳನ್ನು ಪರಿಸರಿಸಿಕೊಳ್ಳಬಹುದು.
ಈ ಎರಡು ತರಹದ ಎಣ್ಣೆ ತೆಗೆಯುವುದರಿಂದ ಬಹಳ ಉಪಯೋಗವು ಕೂಡ ಇರುತ್ತದೆ. ಈ ಎಣ್ಣೆ ತೆಗೆದ ನಂತರ ಇವುಗಳ ಹಿಂಡಿಯನ್ನು ರೈತರು ತಮ್ಮ ತೆಂಗು, ಅಡಿಕೆ, ಬಾಳೆ ತೋಟಗಳಿಗೆ, ಗದ್ದೆಗಳಿಗೆ ಗೊಬ್ಬರವನ್ನಾಗಿಯೂ ಸಹ ಬಳಸಬಹುದು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುವುದರ ಜತೆಗೆ ಗಿಡಗಳಿಗೆ ಯಾವುದೇ ರೋಗ ರುಜೀನಗಳು ಬರುವುದಿಲ್ಲ ಮತ್ತು ಹೆಚ್ಚು ಇಳುವರಿಯೂ ಕೂಡ ಬರುತ್ತದೆ. ಇಂಥಹ ಸಾಹಸವನ್ನು ರೈತರು ಯತೇಚ್ಛೆವಾಗಿ ಮಾಡಿ ಮಾದರಿ ಕೃಷಿಕರಾಗಬಹುದು.
*****