ಮತ್ತೆ ಮೋಹಿಸುವ ಬಯಕೆ
ತೃಷೆ ತೀರದು ಹಲವು ಸಲ ಜಗಿದರೂ
ಈ ರಸ ತೀರದು, ಒಸರಿ ಬರುವ ಒರತೆ
ನಿಲ್ಲದೆಂದೇ ತೋರಿದೆ, ಬದುಕೇ ಬಾಯಾರಿದೆ
ಸ್ವೀಕರಿಸು ಓ ಬದುಕೇ ನನ್ನದೆಲ್ಲವೂ ನಿನ್ನದೇ
ಏಕಿನ್ನೂ ಸಂಕೋಚ, ಸವಿಯಲೆಂದೇ ನಾವು
ಇಹುದಲ್ಲವೇ, ನಮ್ಮೆದೆಯ ತೋಟಗಳ
ಹೂವು ಅರಳುವವರೆಗೆ, ಗಂಧ ತೀಡುವವರೆಗೆ
ಗಾಳಿ ಬೀಸುವವರೆಗೆ ಸವಿಯೋಣ ಬಾ
ತಿರಸ್ಕಾರ ಸಲ್ಲದು ಬದುಕ ಮನ್ನಿಸು
ಪ್ರಭುವೆ ಬೆಳೆಯಗೊಡು ಹೀಗೇ
*****