ಹುಡುಕಾಟವೋ . . . ಹುಡುಗಾಟವೋ . . .
ಹುಡುಗಾಟವೋ . . . ಕೊನೆಗೆ ಎಣಗಾಟವೋ . . . //ಪ//

ಇಲ್ಲಿ ಯಾವುದೂ ಸರಿಯಲ್ಲ
ಅದ ಹೇಳುವುದೂ ಸರಿಯಲ್ಲ
ಹೇಳದಿರುವುದೂ ಸರಿಯಲ್ಲ
ಕೊನೆಗೂ ಯಾವುದೂ ಸರಿಯಲ್ಲ!

ಯಾವುದೇ ವಾದಕೂ ಫುಲ್‌ಸ್ಟಾಪ್ ಇಲ್ಲ
ಅದಕೂ ಹೃದಯಕೂ ಸಂಬಂಧ ಇಲ್ಲ
ಮಿದುಳಲಿ ಹುಟ್ಟಿ ಮಿದುಳಲಿ ಸಾಯುವ
ಲೋಕಕ್ಕಿರುವುದು ಕರುಳೋ? ಬೋಟಿಯೋ??

ನಡೆದ ಲೋಕವು ನಡೆದಿದೆ ಹೀಗೆ
ಇಂತಹ ಲೋಕಕೆ ನಾಳೆಯು ಹೇಗೆ?
ಅಂತಃಕರಣದ ಆಬ್ಸೆಂಟಿಲ್ಲಿ
ಈ ವ್ಯಾಕರಣಕೆ ಭಾಷೆಯು ಎಲ್ಲಿ?
*****