ಬನ್ನಿ ಮುಡಿಯುನ ಬಾರ ಕೋಲು ಕೋಲ ಚಿನ್ನ ತರವುನ ಬಾರ ಕೋಲು ಕೋಲ ಪ ಊರ ಸೀಮೆಯ ದಾಟಿ, ಕಾಡ ಗಡಿಯನು ಸೇರಿ ಕಾಡ ಸಂಪತ್ತ ತರ ಬನ್ನಿ || ಕೋಲು ಕೋಲ ೧ ಬೆಳದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ಬನ್ನಿ ನಾಡ ಸಂಪತ್ತ ಬೆರಿ ಬನ್ನಿ || ಕೋಲು ಕೋಲ ೨ ಅರಸನಽ ಅಂಗಳಕ, ಸರಸ ರಂಗಽ ಹೊಯ್ದು ಹೊರಸಿ ತಂದಾರ ಸಿರಿ ಬನ್ನಿ || ಕೋ...

ಮೌನವಾಗಿಯೇ ಏಕೆ? ಮನದನ್ನೆ ನಾ ತಡವಾಗಿ ಬಂದುದಕೆ| ಓಡೋಡಿ ಬಂದಿಯೇ ನಾ, ಕೊಂಚ ನಿನಗೆ ಬೇಸರವಾಗಿರುವುದಕೆ|| ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ| ಸದಾನಿನ್ನ ಚಿತ್ರ ಮನದಲಿರಿಸಿ ದುಡಿದು ದಣಿದು ಬಂದಿಹೆ ಬಳಿಗೆ ಪ್ರೀತ...

ಒಂದು ಗುಡಿಯಲ್ಲಿ ಹರಿಕಥೆ ನಡೆಯುತ್ತಿತ್ತು. ದಾಸರು ಪರಿಸರ ಪ್ರಿಯರು. ದೇವರಷ್ಟೇ ಭೂಮಿತಾಯಿಯನ್ನೂ ಪ್ರೀತಿಸುತ್ತಿದ್ದರು. ನೆರದ ಜನ ಅಶಕ್ತಿಯಿಂದ ಹರಿಕಥೆ ಕೇಳುತಿದ್ದರು. “ಭಕ್ತಿಗೆ, ಮುಕ್ತಿಗೆ ಮಾರ್ಗವನ್ನು ತಿಳಿಸುವೆ ಮನುಜರೆ! ಕೇಳಿ, ಕಿ...

ಕಾಲಕ್ಕೆ ತಕ್ಕಂತೆ ಕೆತ್ತಿ ತುಕ್ಕು ಹಿಡಿದ ಮೊಳೆ ಕಿತ್ತು ಹೊಸದೊಂದ ಹೊಡೆದು ಗೊರ ಗೊರ ಚಾಟಿಗೆ ಸರಸರ ನೀರುಬಿಟ್ಟು ಹೊಸದು ಹುರಿಮಾಡಿ ಹೊಸೆದು ನಡೆಯುತ್ತದೆ ನಿಲ್ಲದ ರಿಪೇರಿ ತಿರುಗುತ್ತದೆ ಅನಾದಿ ಅನಂತ ಬುಗುರಿ. *****...

ಭಾಗ-೧ ಡಬ್ಲ್ಯೂ ಬಿ. ಯೇಟ್ಸ ಅನುಪಮ ಪ್ರೇಮಕವಿ. ಅತ್ಯಂತ ರೂಪವತಿಯೂ ತೀಕ್ಷ್ಣಮತಿಯೂ ರಾಜಕೀಯ ನಾಯಕಿಯೂ ಆದ ಮಡಗಾನ್‌ಳನ್ನು ಅಂತಿಮ ದಿನದವರೆಗೂ ಅಪರಿಮಿತವಾಗಿ ಪ್ರೀತಿಸಿದ್ದ. ಆತ ಜನಿಸಿದ್ದು ಐರ್‍ಲೆಂಡಿನ ಸ್ಲಿಗೋ ಎಂಬ ಹಳ್ಳಿಯಲ್ಲಿ. ಅಲ್ಲಿಯೇ ತನ್ನ...

ಆ ದಂಡೆ ಬೇಕು ಅದ ಸೇರಬೇಕು, ಈ ನದಿಯ ದಾಟಬೇಕು ಈ ನದಿಯು ಬೇರೆ ಆ ದಂಡೆ ಬೇರೆ, ಎಂಬುದನು ತೊರೆಯಬೇಕು || ೧ || ದಂಡೆಯಿದೆ ನದಿಗೆ ಆಸರೆಯಿತ್ತು ದಂಡೆಗಿದು ನೀರು ಕೊಟ್ಟು ತಣಿಸುವುದು ವನಕೆ ಉಣಿಸುವುದು ಅದರ ಬಾಳಿರದು ಇದನು ಬಿಟ್ಟು || ೨ || ಗರ್ಭಗ...

‘ಬುದ್ಧಿವಂತರಿಗೆ ಕನಸು ಬಿದ್ದರೆ’ ಅಲ್ಲಾ ಅಲ್ಲಾ ಅಲ್ಲಾ ಅವ ನಿದ್ರಿಸುತಾನೇ ಇಲ್ಲಾ…. ಅಲ್ಲವೋ ಮೊಹಮ್ಮದ್‌- ಅಲ್‌ ಮಘ್ರಿಬೀ ಮತ್ತೊಮ್ಮೆ ನೀನೂ ಕೂತೆ ಜಗುಲಿಯ ಮೇಲೆ ಇಡೀ ಕೈರೋದ ಮೇಲೆ ಇಳಿಸಂಜೆ ಪ್ರತೀ ಮಿನಾರಕ್ಕೆ ಚಿನ್ನದ ಕಲಾಯಿ ಲೇಪಿಸುವ ...

ಶುದ್ಧವಿಲ್ಲದ ಪರಿಸರ ಎಲ್ಲೆಲ್ಲೂ ಇರುವುದರಿಂದ ಸಾಮಾನ್ಯವಾಗಿ ಎಲ್ಲಮನೆಗಳಿಗೂ ಸೊಳ್ಳೆಗಳು ಲಗ್ಗೆ ಇಡುತ್ತವೆ. ಸೊಳ್ಳೆಗಳನ್ನು ಸಾಯಿಸಲು ಅನೇಕ ಕಂಪನಿಗಳು ಕಾಯಿಲ್‌(ಚಾಪ್) ಗಳನ್ನು ಉತ್ಪತ್ತಿ ಮಾಡಿ ಬಳಕೆಗೆ ಬಿಡುಗಡೆ ಮಾಡುತ್ತಿವೆ. ಎಲ್ಲರ ಮನೆಗಳಲ್...

ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ ತಂಪಾದ ಹೂಗಾಳಿ ಬೀಸಿದವೊ| ತಾಯೆ ನಿನಗಾಗಿ ಹಾಡ ಎರೆದಾವೋ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...