ಬನ್ನಿ ಮುಡಿಯುನ ಬಾರ ಕೋಲು ಕೋಲ ಚಿನ್ನ ತರವುನ ಬಾರ ಕೋಲು ಕೋಲ ಪ ಊರ ಸೀಮೆಯ ದಾಟಿ, ಕಾಡ ಗಡಿಯನು ಸೇರಿ ಕಾಡ ಸಂಪತ್ತ ತರ ಬನ್ನಿ || ಕೋಲು ಕೋಲ ೧ ಬೆಳದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ಬನ್ನಿ ನಾಡ ಸಂಪತ್ತ ಬೆರಿ ಬನ್ನಿ || ಕೋಲು ಕೋಲ ೨ ಅರಸನಽ ಅಂಗಳಕ, ಸರಸ ರಂಗಽ ಹೊಯ್ದು ಹೊರಸಿ ತಂದಾರ ಸಿರಿ ಬನ್ನಿ || ಕೋ...

ಇಂದು ಯೋಚನೆ ಕೊನೆಯಿಲ್ಲದೆ ಸಾಗಿತ್ತು. ಯಾವ ದಿಕ್ಕನ್ನೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಯೋಚಿಸುತ್ತಿದ್ದಂತೆ ವಿಷಯ ಹೆಚ್ಚು ಸಂಕೀರ್ಣಗೊಂಡಂತೆ ಯೋಚನೆಗೆ ಯಾವ ಸ್ವರೂಪವೂ ಬರುತ್ತಿರಲಿಲ್ಲ. ಈಗ ಅನೇಕ ದಿನಗಳಿಂದ ಮನಸ್ಸಿನಲ್ಲಿ ಉಂಟಾಗಿರುವ ಅಸ್ವ...

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ ಪತಿಯ ಪ್ರತಿಬಿಂಬ ಕಾಣುವರು ; ‘...

ಮಂಜುಳ ಮೊದಲ ದಿನವೇ ತರಗತಿ ತೆಗೆದುಕೊಂಡಳು. ಮಕ್ಕಳಿಗೆ ಪಾಠ ಮಾಡುವಾಗ ಆಕೆಗೆ ಆದ ಆನಂದ ಅಸಾಧಾರಣವಾದದ್ದು. ಏನೋ ಸಾರ್ಥಕತೆಯ ಸಂತೋಷ ಸಂಭ್ರಮ! ಎಲ್ಲರ ಮನಸೂ ಮಗುವೇ ಆಗಿದ್ದರೆ ಅದೆಷ್ಟು ಚನ್ನ! ಮುಗ್ಧ ಕುತೂಹಲಾಸಕ್ತಿಗಳ ನೆಲೆಯಾದ ಮಗುಮನಸ್ಸಿಗೇ ಮತ್...

ಕಲಿಯುಗದಲಿ ಸಾಗಿದೆ ನಿತ್ಯದ ಜೀವನ ಸ್ಥಾನ ಮಾನಗಳಿಗಾಗಿಯೇ ಹೋರಾಟ ಜೀವ ಹೋದರೂ, ಜೀವ ತೆಗೆದರೂ ಸಹ ನಡೆಯುತ್ತಿದೆ ನಿತ್ಯವೂ ಬಡಿದಾಟ || ಕಲಿಗಾಲ ಇದು ಕೊಲೆಗಾಲ || ಮಾನವೀಯತೆಯ ಮಮಕಾರವಿಲ್ಲ ಸಂಬಂಧಗಳ ಸಹವಾಸವಿಲ್ಲ ಕೂಗಿಕೊಂಡರೂ ಕೇಳುವುದಿಲ್ಲ ಮನದೊಳ...

ಎಂಭತ್ತರ ಹರೆಯದ ದುರಗವ್ವ ಮೊಮ್ಮಗನ ಬಲವಂತಕ್ಕೆ ಮೊದಲ ಬಾರಿಗೆ ಬಾಳಲ್ಲಿ ಸಿನಿಮಾ ನೋಡಲು ಹೊರಟಳು ರುಕ್ಕುಂಪೇಟೆಯ ಕಣಿವೆ ಕುಂಬಾರಪೇಟೆಯ ಅಗಸೆ, ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ ಸುರಪುರ ಪೇಟೆ ತಲುಪಿದಾಗ ಸಮಯ ಸಂಜೆ ಸವಾ ಏಳು. ಮೊಮ್ಮಗ ಸಿದ್ದಣ್...

ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...