ಮೊಳಕೆ ಬಂದ ಬೀಜವೊಂದು ಹುಳುವು ಹತ್ತಿ ಬೆಳೆಯದಾತು ಒಳಗೆ ಒಳಗೆ ಅಳುಕುತಳುತ ಕೊಳೆಯತೊಡಗಿತು. ಮಳೆಯು ಭರನೆ ಬಂದಿತೊಮ್ಮೆ ಹುಳುವು ಅದುರಿ ಬಿದ್ದು ಹೋತು ; ಹಳೆಯ ಜಾಡ್ಯ ಕೊಡವಿ ಬೀಜ ಬೆಳೆಯಲೆಸಗಿತು. ಬೆಳೆಯುತಿದ್ದ ಬೀಜ ಕಂಡು ಹುಳುವು ಹೆದರಿ ಗದರಿಕೊಂಡು ಗಳನೆ ನುಂಗಲೆಂದು ತನ್ನ ಕೈಯ ಚಾಚಿತು. ಬೆಳೆವ ಭರದಲಿದ್ದ...

ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ ಚೆಲುವು ತಡೆದೀತೇನು ಅದರ ಆಕ್ರೋಶವನು ? ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ ಕಾಲ ಮಣಿಯುವ ಬದಲು ಅವುಗಳೇ ಸಮೆದಿ...

ಅಚಲ ಕೆಲಸಕ್ಕೆ ಸೇರಿದ ಈ ಎಲ್ಲಾ ಗಲಾಟೆಗಳ ನಡುವೆಯೇ ಅಚಲ ವಾಯುದಳಕ್ಕೆ ಸೇರಿದ್ದು. ಅವನು ತರಬೇತಿಗಾಗಿ ಡುಂಡಿಗಲ್‌ಗೆ ಹೊರಟು ನಿಂತಾಗ ಯಾರೂ ಪ್ರತಿ ಭಟಿಸಲಿಲ್ಲ. ಸುಶೀಲಮ್ಮ ಬಾಯಿ ಬಿಡದಿದ್ದರೂ ಮೌನವಾಗಿ ರೋಧಿಸಿದ್ದರು. ತರಬೇತಿ ಮುಗಿಯಲು ಒಂದೂವರೆ ...

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನು ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ? ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾದೇವಿಯ ಕಂಠ ಸಿರಿ ನೀನು ಆಲಿಸುವ ಕರಣವಾಗಿ ನ...

ವಿಷ ಸಿಂಪಡಿಸಿ ಶುಚಿಗೊಳಿಸುವಾಗ ಕಂಡ ನೋಟಕ್ಕೆ ಹೃದಯ ಮಿಡಿಯಿತು, ಕೈ ತನ್ನ ಕೆಲಸ ಬಿಟ್ಟಿತು. ಹೆಣ್ಣು ಜಿರಳೆ ಮೊಟ್ಟೆ ಇಡುತಿದೆ, ಅನುಭವಿಸುತಿದೆ ಪ್ರಸವ ವೇದನೆ. ಹೆಣ್ಣ ಬಾಳ ಸಾರ್ಥಕಗೊಳಿಸಿ ಪ್ರಕೃತಿ ಕೊಟ್ಟ ಹೊಣೆ ಹರಿಸಿ ತಾಯಾದ ಗೌರವ ಗಳಿಸಿ ನಿಂ...

‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತ...

ಕಾರಿ ಕಕ್ಕಿ ಬಾರಿ ಕವಳಿ ಪರಗಿ ಹಣ್ಗಳ ತಿನ್ನುವಾ ಡಬ್ಬಗಳ್ಳಿಯ ಕೆಂಪು ಹಣ್ಣನು ತಿಂದು ಹಕ್ಕಿಯ ಕರೆಯುವಾ ತೊಂಡಿ ತುಪ್ಪರಿ ಮೆಕ್ಕಿ ಕುಂಬಳ ಪುಂಡಿ ಪಡುವಲ ನೋಡುವಾ ಸವುತಿ ಹಾಗಲ ಹೀರಿ ಅವರಿಯ ತುಂಬು ಗಲ್ಲವ ಸವಿಯುವಾ ಇರುಳ ಗೂಗಿಯ ಗಾನ ಕೇಳುತ ಚಂದ್ರ...

ದಿನವೆಲ್ಲ ದನದಂತೆ ಬುಟ್ಟಿಗಳ ಹೆಣೆದು, ಧನವಿಲ್ಲದೆ ಬರಿಗೈಲಿ ಬಂದೆಯಾ ಚೋಮ? ಬಿತ್ತಲು ಭೂಮಿಯಿಲ್ಲ – ಮಲಗಲು ಮನೆಯಿಲ್ಲ ಕಷ್ಟ ಪಟ್ಟು ದುಡಿದರೂ ನಿನಗೆ ದಕ್ಕುತ್ತಿಲ್ಲ ಒಪ್ಪತ್ತಿನ ಕೂಳು. ಉಸ್ಸೆಂದು ಕೂತು ಬರಿಗೈಯನ್ನು ನೋಡಿ ಹಣೆ ಬರಹವೆಂದು...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...