ಮೈಯಾಸರೆಯ ಜೀವ ಗಳಿಗೆಯಿರವಿನದೆನ್ನೆ ಅರಿಷಟ್ಕತಂತ್ರದಿಂ ನಿತ್ಯತೆಯನು ಗೆಲುವುದದು ಜನಜನಿಸಿ ಜಡದೊಡನೆ ಸೆಣಸುತ್ತ ಪ್ರಭುವೆನಿಸಿ ಇಚ್ಛೆಗಳವಡಿಸಿ ಅದನು. ಜೀವದಾಸರೆ ಚಿತ್ತ; ಅದರೊಡನೆಯಳಿವುಳಿವು; ದಿವ್ಯಾನುಭೂತಿಗೂ ಮೂಡು ಮುಳುಗು; ಯಮನಿಯಮಧ್ಯಾನಾದಿ ತಂತ್ರದಿಂ ತನ್ನುಳಿವ ಸಾಧಿಸುವುದಾತ್ಮವೂ ಜೀವದೊಳಗೂ. ಧೀಮಂತ...

ನೂರು ಜನ್ಮದಲ್ಲೂ ನನಗೆ ನೀನೇ ತಾಯಿ ಯಾಗಬೇಕೆಂಬಾಸೆ ನನ್ನ ಮನದಿ ಪ್ರಕಟವಾಗಿದೆ| ಪ್ರತಿ ಜನ್ಮದಲ್ಲೂ ನೂರು ವರುಷ ಬಾಳಬೇಕೆಂಬುದೇ ನನ್ನಾಸೆಯಾಗಿದೆ| ನಿನ್ನ ಕಂದನಾಗಿ ಜನಿಸಿ ಸದಾ ಕನ್ನಡದ ಸೇವೆ ಮಾಡುವಾಸೆ ಮನದಿ ತುಂಬಿ ಹರಿದಿದೆ|| ಈ ನೆಲ ಜಲದ ಸತ್ವ...

ಅವನೊಬ್ಬ ಕಾಮುಕ. ಮೊದಲ ಹೆಂಡತಿಗೆ ಮೂರು ಮಕ್ಕಳಾದ ಮೇಲೆ ಅವಳನ್ನು ಬಿಟ್ಟು ಎರಡನೇಯ ಮದುವೆ ಆದ. ಅವಳಿಗೆ ಎರಡು ಮಕ್ಕಳಾದ ಮೇಲೆ ಮೂರನೇಯವಳನ್ನು ಕಟ್ಟಿ ಕೊಂಡ. “ನನ್ನದು ಇದೀಗ ಪುನರ್ ಜನ್ಮ. ನಾನು ಇವಳೊಂದಿಗೆ ಸುಖವಾಗಿರುವೆ. ನಮಗೊಂದೇ ಕೊರತ...

ಉತ್ತ ನೇಗಿಲು ಬಂದು ನೆತ್ತಿಗೆ ಬಡಿಯಿತು ಕಿತ್ತ ಕಳೆಯೇ ನಮ್ಮ ಬದುಕಾಯಿತು. ನಮ್ಮತ್ತ ಬರಲಿಕ್ಕೆ ಅತ್ತು ಕರೆದರೂ ಪೈರು ಬಿಡಲಿಲ್ಲ ಅವರು ತಲೆಯನು ಕುಟ್ಟಿ ಹೆಡಮುರಿ ಕಟ್ಟಿ ಎಳೆದೊಯ್ದರಲ್ಲಾ-ಎಳೆದೊಯ್ದರು. ಕೂಳೆ ಹೊಲದ ಬಾಳು ಮಾಡಿದರಲ್ಲಾ-ಮಾಡಿದರು ಕ...

ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ನೀರೆಲ್ಲವೂ ತೀರ್‍ಥ -ಕುವೆಂಪು (ಮಲೆಗಳಲ್ಲಿ ಮದುಮಗಳು) ಒಬ್ಬ ಬರಹಗಾರನನ್ನು ಪ್ರಾದೇಶಿಕತೆಗೆ ಕಟ್ಟಿಹಾಕಿ ನೋಡುವುದು ಅಷ್ಟೇನು ಒಳ್ಳೆಯ ಕ್ರಮ ಅಲ್ಲ. ಆದರೂ ಅವನ ಅಭಿವ್ಯಕ್ತಿಗೆ ಪೂರಕವಾಗಿ ಒದಗಿರಬಹುದಾ...

(ವಿಜಯನಗರ ಸಾಮ್ರಾಜ್ಯದ ಆರುನೂರು ವರ್ಷದ ಹಬ್ಬದಲ್ಲಿ) ೧ ಹಿರಿಯರಿರ, ಕೆಳೆಯರಿರ, ಅಕ್ಕತಂಗಿಯರಾ, ಅಣ್ಣತಮ್ಮದಿರಾ, ಒಸಗೆನುಡಿ ತಂದಿಹೆನು ನಾನೊಂದ, ತಾಯಿಂದ, ಸಿರಿಯ ತಾಯಿಂದ- ಕೇಳುವಿರ ಕಿವಿಗೊಟ್ಟು, ತಾಳುವಿರ ಎದೆನೆಟ್ಟು, ತಾಳಿ ಬಾಳುವಿರಾ ? ಕಣ್...

ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು ನಿನ್ನನು ನಾನು ಕ್ಷಮಿಸುವಂತೆಯೇ ನನ್ನನು ನೀನು ಬಸವಳಿದು ಬೆಂಡಾಗಿ ಕುಳಿತೆ ನೀನು ಬಸವಳಿದು ಬಂಡಾಗಿ ನಿಂತೆ ನಾನು ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು ...

ವಾಗ್ದೇವಿಯ ತಂದೆತಾಯಿಗಳು ಮಗಳ ದೆಸೆಯಿಂದ ಅತ್ಯಾನಂದವನ್ನು ಅನುಭವಿಸುವ ಉತ್ತಮ ಸ್ಥಿತಿಗೆ ಬಂದರು. ಅದೇನು ಆಶ್ಚರ್ಯ? ಉಣ್ಣಲಿಕ್ಕೆ ತಿನ್ನಲಿಕ್ಕೆ ಏನೂ ಕಡಿಮೆಯುಂಟೇ? ಅವರಿಗೆ ಯೋಚನೆ ಯಾವದಾದರೂ ಇರಲಿಕ್ಕೆ ಕಾರಣವೇ ಇಲ್ಲ. ಮೃಷ್ಟಾನ್ನಭೋಜನದಿಂದ ಮೈ ...

ಹಲ್ಲಿ ಹೆಕ್ಕಿ ಹೆಕ್ಕಿ ನುಂಗುತ್ತಿತ್ತು ಇರುವೆಗಳ ಮತ್ತೆ ಸತ್ತ ಹಲ್ಲಿಯ ಹೊತ್ತು ಸಾಗಿತ್ತು ಇರುವೆಗಳ ಮೆರವಣಿಗೆ ದೇಹವೆಲ್ಲ ಬಗೆದು ಹುಡುಕುತ್ತಿದ್ದವು ಇರುವೆಗಳು ಕಾಣಲಿಲ್ಲ ಕೊನೆಗೂ ಒಳ ಹೊಕ್ಕ ಒಡನಾಡಿಗಳು *****...

ಕರ್ತವ್ಯದ ನೆಪದಲ್ಲಿ ಅತ್ಯಾಚಾರ ಮಾಡುವ ಹೆತ್ತವರು ಕತ್ತೆಯೊಂದಕ್ಕೆ ಗಂಟು ಹಾಕಿದರೂ ಏನು ಮಾಡುವುದು ಹಣೆ ಬರಹವೆಂಬ ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ ನಿಷ್ಠೆ, ಒಳ್ಳೆತನದ ಸೋಗು ಹಾಕಿ ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ ...

ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ ಪುಸ್ತಕದ ಮೂಟೆ ಹೊರುವ ಶಿಕ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...