ಮೊನ್ನೆ ಆಗಸ್ಟ್ ೨೦೧೫ ರ ಸೈನ್ಸ್ ಪತ್ರಿಕೆಯನ್ನು ಬಹಳ ಕುತೂಹಲದಿಂದ ಓದುತ್ತಿದ್ದೆ. ನನಗೆ ಚಿಕ್ಕಂದಿನಿಂದಲೂ ಸೈನ್ಸ್ ಬಗ್ಗೆನೂ ತೀವ್ರ ಆಸಕ್ತಿ.
ಭವ್ಯ ಭಾರತದ ಮೂಲ ಇಬ್ಬರು ಮಹಾ ವಿಜ್ಞಾನಿಗಳಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಂಡವೊಂದು ಲಾಸ್ ಎಂಜಲಿಸ್‌ನಲ್ಲಿ ಭೂಮಿಯಿಂದ ೧೦೦ ಜ್ಯೋರ್ತಿವರ್ಷ ಸೆಕೆಂಡ್‌ಗೆ ೩.೮೬ ಲಕ್ಷ ಕಿಲೋಮೀಟರ್ ವೇಗದಲ್ಲಿ ಒಂದು ವರ್ಷ ಸವೆಸುವ ದೂರದೂರ ಬಹುದೂರದಲ್ಲಿ ಮಿಥೇನ್ ಭರಿತ ಗ್ರಹವೊಂದನ್ನು ಪತ್ತೆ ಮಾಡಿರುವರು.
ಓದುತ್ತಾ ಓದುತ್ತಾ ಅಬ್ಬಾ! ಎಂದೆ. ವಿಜ್ಞಾನಿಗಳೆ ಹೀಗೆ ಯಾರೂ ಪತ್ತೆ ಹಚ್ಚದ್ದನ್ನು ಪತ್ತೆ ಹಚ್ಚಿ ಸಂಭ್ರಮಿಸುವರು.
ಈ ಗ್ರಹ ಸಂಪೂರ್ಣವಾಗಿ ಮಿಥೇನ್‌ನಿಂದ ಕೂಡಿದೆ. ಇದನ್ನು “೫೧ ಎರಿಡನಿ ಬಿ ಗ್ರಹ” ಎಂದು (ಕೂಸು) ಕರೆದಿರುವರು. ಇದು ಗುರು ಗ್ರಹದಂತಿರುವುದರಿಂದ ಇದನ್ನು ಗುರು ಗ್ರಹದ “ತಮ್ಮ” ಎಂದಿರುವರು.
ಭಲೇ ಭಲೇ ವಿಜ್ಞಾನಿಗಳೂ ಕೂಡಾ ಒತ್ತಡವನ್ನು ನಿವಾರಿಸಿಕೊಳ್ಳಲು ಏನೆಲ್ಲ ಪರಿಭಾಷೆಯಲ್ಲಿ ಕರೆದು ನಗುವರಲ್ಲದೆ, ಈ ಗ್ರಹದಲ್ಲಿ ನೀರಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿರುವರು.
ಈ ಗ್ರಹ ಸುಮಾರು ೨ ಕೋಟಿ ವರ್ಷಗಳಷ್ಟು ಹಳೆಯದೆಂದು ಅಭಿಪ್ರಾಯ ಪಟ್ಟಿರುವರು.
ನಕ್ಷತ್ರಗಳ ಸುತ್ತ ದೈತ್ಯ ಅನಿಲ ಗ್ರಹಗಳು ರೂಪುಗೊಳ್ಳುವ ಪ್ರಕ್ರಿಯೆಯನ್ನು ಈ ಗ್ರಹದ ಸ್ಥಿತಿಯನ್ನು ಆಧರಿಸಿ ಅರಿಯಬಹುದೆಂದು ಹತ್ತಿರದ ನಕ್ಷತ್ರಗಳನ್ನು ಸುತ್ತುತ್ತಿರುವ ಗ್ರಹಗಳನ್ನು ಪತ್ತೆ ಮಾಡುವ ಘನ ಉದ್ದೇಶದಿಂದ ರೂಪಿಸಿರುವ “ಜೆಮಿನಿ ಪ್ಲಾನೆಟ್ ಇಮೇಜರ್” ನಿಂದ ಪತ್ತೆ ಮಾಡಿರುವ ಮೊತ್ತ ಮೊದಲ ಗ್ರಹವಿದೆಂದು ವಿಜ್ಞಾನಿಗಳ ತಂಡ ತಮ್ಮ ಸಂಶೋಧನೆಯ ವಿವರಗಳನ್ನು ಹಂಚಿಕೊಂಡಿದೆ.
ಜೆಪಿಐನಲ್ಲಿರುವ ಅತ್ಯಾಧುನಿಕ ಸ್ಪೆಕ್ಟ್ರೊ ಮೀಟರ್‌ನ ಸಹಾಯದಿಂದ ಈ ಗ್ರಹದಲ್ಲಿ ಮಿಥೇನ್ ಅಂಶವಿರುವುದನ್ನು ಪತ್ತೆ ಮಾಡಲಾಗಿದೆಯೆಂದು ವಿಜ್ಞಾನಿಗಳ ತಂಡ ಹೇಳಿದೆಯಲ್ಲದೆ, ಈತನಕ ನಮ್ಮ ಹಾಲು ಹಾದಿಯ ಹೊರಗಿನ ಆಕಾಶ ಗಂಗೆಯಲ್ಲಿ ಪತ್ತೆಯಾಗಿರುವ ಅತ್ಯಂತ ಹೆಚ್ಚಿನ ಮಿಥೇನ್ ಸಾಂದ್ರತೆಯಿರುವ ಗ್ರಹವಾಗಿದೆ ಎಂದಿರುವರು!
ಈ ಗ್ರಹದಲ್ಲಿ ನೀರಿದೆ ಮಿಥೇನ್ ಇದೆ. ಹೀಗಾಗಿ ಇತರೆ ನಮ್ಮ ಸೌರವ್ಯೂಹದ ಗ್ರಹಗಳಲ್ಲಿರುವಂತೆ ತಂಪಿದೆ. ಇಲ್ಲಿ ೪೨೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇತರೆ ಗ್ರಹಗಳಲ್ಲಿ ೫೩೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆಯೆಂದು ಭವ್ಯ ಭಾರತದ ಮೂಲ ವಿಜ್ಞಾನಿಗಳಾದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ರಾಹುಲ್ ಪಟೇಲ್ ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸಸ್ ಇನ್ಸ್‌ಟಿಟ್ಯೂಟ್‌ನ ಅಭಿಜಿತ್ ರಾಜನ್ ಅವರೆಲ್ಲ ಸೇರಿ ಈ ಸಂಶೋಧನೆ ಕೈಗೊಂಡು ಸಫಲರಾಗಿರುವರು.
ಈ ತಂಡದಲ್ಲಿ ಭವ್ಯ ಭಾರತದ ವಿಜ್ಞಾನಿಗಳಿದ್ದಾರೆಂಬುದೇ ಹೆಮ್ಮೆಯ ಸಂಗತಿಯಲ್ಲವೇ?
ಈಗೀಗ ಭಾರತ ದೇಶ ಯಾವುದರಲ್ಲಿ ಕಮ್ಮಿಯಿಲ್ಲ ಅಲ್ಲವೇ??
*****
















