೧ ಕಾಲನ ಕಲ್ಲಿನ ಚಕ್ರಗಳು! ತೊಡೆಗಳ ಎಲುವಿನ ಅಚ್ಚುಗಳು! ಪೊಳ್ಳಿನ ಹೃದಯದ ಹಂದರವು! ಗಂಡಿನ ಹೆಣ್ಣಿನ ಹುಡುಗರ ಕಳಸ! ೨ ಕಟ್ಟೋ ಮಂಗಲ ಸೂತ್ರಗಳ! ರುಂಡ ದಿಂಡಗಳ ಮಾಲೆಗಳ! ಬೆಳಗೋ ಕಂಗಳ ಕತ್ತಲೆದೀಪ! ಹಾಕೋ ನಿಡಿದುಸಿರಿನಧೂಪ! ೩ ಬಿಗಿಯೋ ಕೂದಲ ಹಗ್ಗವನ...
ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ, ಬಳಗ ದೊಡ್ಡದಾಗಿ ಸರಳವಾದ ಬಾಲ್ಯ, ಯಾವ ಅಂಜಿಕೆಯೂ ಸುಳಿಯದ ಯೌವನ, ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ, ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು. ಗಿಡವಾಗಿದ್ದು ಮರವಾಗಲು ತಡವಾಗಲಿಲ್ಲ. ಬಯಲ ಗಾಳಿ ಹ...
ಕ್ಷಣ ಕ್ಷಣಕ್ಕೂ ನಿ ಬದಲಾಗದಿರು ನಿನ್ನ ಅಂತರ ಭಾವ ಅರಿತುಕೊಳ್ಳು ಕಷ್ಟ ಸುಖಗಳಿಗೆ ಹತಾಷೆ ನಾಗದಿರು ಮುಕ್ಕಣ ಭಾವಗಳ ಬೆಳೆಸಿಕೊಳ್ಳು ಮೌನವಾಗಲು ನೀ ಕಲಿಯಬೇಕು ನಿಂದೆಗಳ ಮಾಡದೆ ಬಿಡಬೇಕು ಸಕಲ ಜೀವಗಳಲ್ಲೂ ಸಮಾನತೆಬೇಕು ಸಾಕ್ಷಿಯಾಗಿ ಎಲ್ಲವೂ ನೋಡಬೇಕ...
ನೃಸಿಂಹಮಠದ ಪಾರುಪತ್ಯಗಾರನ ಅಳಿಯ ಶೋಣಭದ್ರ ಭಟ್ಟನು ಕುಮುದಪುರದಲ್ಲಿರುವ ಆ ಮಠಕ್ಕೆ ಇರುವ ಭೂಮಿಗಳಿಂದ ಅದರ ಜೀರ್ಣೋ ದ್ಧಾರಕ್ಕೋಸ್ಟರ ಕೆಲವು ಮರಗಳನ್ನು ಕಡಿಸುವುದಕ್ಕೆ ಬಂದವನು ಆಂಜನೇ ಯಾಲಯವದಲ್ಲಿ ಬಿಡಾರವಿದ್ದು ಮಾವನು ಕೊಟ್ಟ ಅಜ್ಞೆಗಳಂತೆ ಪ್ರವ...
ಇಲ್ಲಿ, ಅಲ್ಲಿಹ, ಎಲ್ಲೆಲ್ಲೂ ಅವ ಮುಖಕ್ಕೆ ಪ್ರತಿಮುಖನಾಗಿಹನು ಹಮ್ಮಿನ ಕೋಟೆಯ ಗೋಡೆಯ ತನ್ನಯ ಬಲಭುಜದಲಿ ಸೈತಾಗಿಹನು ನಾನೋ ಅಗಸೆಯ ಸೀಮೆಗೆ ನಿಂತು ದಿಟ್ಟಿಸಿ ನೋಡೇ ನೋಡುವೆನು ಬಯಲು ಬಯಲು ನಿರವಯಲಿನಾಚೆ ನಾನನಂತ ಅನಂತ ತೋಡುವೆನು ಒಡವೆ ಒಡನೆ ಒಮ್ಮ...
ಭೈರವಿ ೧ ‘ಬರಿಯೆ ಬಿಸುಸುಯಿಲಿಂದಲೀ ಹಗ- ಲಿರುಳ ಕಳೆಯುವುದೇನು- ಸರಿಯೆ!’ ಎನುತೇನೇನೊ ಹಾಡುತ- ಲಿರುವೆನೇಗಲು ನಾನು. ನನ್ನ ಹಾಡುಗಳೆಲ್ಲವಿವು ಮನ- ದನ್ನ ನಿನಗಾಗಿರುವವು; ನನ್ನ ಹಾಡಿನ ವರ್ಣ-ವರ್ಣವು ನಿನ್ನನೇ ಕುರಿತಿರುವುವು; ನಿನ್...
ಸ್ವಾತಿಯ ಮಳೆ ಹನಿ ಹನಿಯಾಗಿ ನಾನು| ಮುತ್ತಾಗಬಯಸುವೆನು ನಿನ್ನೆದೆಯ ಪ್ರೀತಿಕಡಲಾಳದಲ್ಲಿ| ಹ್ಞೂ ಅನ್ನು ಉಹ್ಞೂ ಅನ್ನು ನಾ ಬಂದಿರುವುದೆ ನಿನಗಾಗಿ ನಿನ್ನ ಹೃದಯದ ಬಾಗಿಲು ತೆರೆಯುವುದೆ ನನಗಾಗಿ|| ಅದೆಷ್ಟೋ ದಿನ ಕಾದಿರುವೆ ನಿನಗಾಗಿ ಈ ಶುಭ ಮಹೂರ್ತಕ...
ಚರಿತ್ರೆಯ ಚಂದಿರ ಸುರಿಸಿದ್ದು ಬೆಳದಿಂಗಳಲ್ಲ ಗೆಳೆಯ, ಮಟಮಟ ಮಧ್ಯಾಹ್ನದ ಬಿಸಿಲು. ಈ ಬಿಸಿಲಿಗೊ ನೂರೆಂಟು ಟಿಸಿಲು! ಬೆಳೆಯುತ್ತ ಇಳಿಯುತ್ತ ಭೂಮಿಗೆ ಭೂತ ಬೆಂಗಾಡಿನ ಪಾತಾಳವಾಗುತ್ತ ಪಾತಾಳದೊಳಗೊಂದು ಪುರಾಣವಾಗುತ್ತ ನೋಟದೊಳಗೆ ನುಗ್ಗುವ ನೀರು ಪುರಾ...
೧೯೪೯ರಿಂದ ಕಾವ್ಯಕೃಷಿ ಆರಂಭಿಸಿ ಇದುವರೆಗೂ ಹದಿನಾಲ್ಕು ಕವನಸಂಕಲನ ಹೊರತಂದಿರುವ ಚೆನ್ನವೀರ ಕಣವಿ ಅವರದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಇತರ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







