ಬದುಕಿನ ದೀರ್ಘ ಪಯಣದಲ್ಲಿ
ಹೊಳೆದಂಡೆಗೆ ಕುಳಿತು ನೀನು
ಯೋಚಿಸುವೆ ಏನನ್ನು?
ನೀನೆಲ್ಲಿ ಹೋದರೂ
ಹಿಂದೆಯೇ ಬರುತ್ತವೆ
ನಿನ್ನ ಭೂತದ ನೆನಪುಗಳು.
ಘೋರ ರಾತ್ರಿ ಕಳೆದು
ಮುಂಜಾವಿನ ನಸುಕು
ನಿನ್ನ ಗೋಳನ್ನು ಮೀರಿ
ಉದಯಿಸುತ್ತಿರುವ ಸೂರ್ಯ
ಕಾಲನ ಕೈಗೆ ಸಿಕ್ಕು
ಸೋತಿರುವ ನಿನ್ನ ಬದುಕು
ಕಾಮನ ಬಿಲ್ಲಿನ ಬಣ್ಣಗಳು
ಸೃಷ್ಟಿಯ ಸುಂದರ
ತಾಣದಲಿ ಕೂತು ನೀನು
ನೆಮ್ಮದಿಯ ಹುಡುಕುತಲಿರುವೆಯಾ?
ಈ ಸುಂದರ ತಾಣಗಳ
ಇನ್ನೆಷ್ಟು ದಿನ ಸವಿಯುವೆ?
ನಗರಗಳು ಬೆಳೆದಂತೆ
ಬೆಟ್ಟಗಳೆಲ್ಲ ಭೂಮಿಯ
ಒಡಲು ಸೇರುವವು
ಕಾಡುಗಳೆಲ್ಲ ಬರಡಾಗುವವು
ತಿಳಿಜಲ ಮಲೀನವಾಗಿ
ಕೊನೆಗೊಂದು ದಿನ ಬತ್ತಿ
ಒಣಗಿ ಹೋಗುವವು.
ಗೆಳೆಯಾ!
ಕಳೆದುಹೋದ ನಿನ್ನ
ಭೂತವ ಬಿಟ್ಟು
ಬರಲಿರುವ ನಾಳಿನ
ಕುರಿತು ಯೋಚಿಸು.
ಸೃಷ್ಟಿಯ ಸುಂದರ
ತಾಣಗಳ ಉಳಿಸು.
*****