
ನನ್ನ ಜೀವಾಲಿಂಗನಾಂಗದಲ್ಲಿ ಪೂರ್‍ಣ ಪ್ರಪಂಚ ಕೃತ್ತಿಕೆಯ ಕಿಚ್ಚಗಸ್ತ್ಯನ ತಪಃಸುಖವು. ಜೀವಜೀವದ ರೂಪರೂಪದಲಿ ನಾ ಕಾಂಬೆ ನನ್ನದೇ ಮೈಯ ಮತ್ತೊಂದು ಮುಖವು. ನನ್ನ ನೋಡುವ ನೋಟ ನನ್ನದೇ ಕಣ್ಣಾಟ ಎಲ್ಲೆದೆಯ ಮಿಡಿತ ನನ್ನೆದೆಯ ಠಾವು. ನನ್ನ ನರದಲಿ ಹರಿಯುತ...
ಜೀವನಪುರಿ ೧ ಪಾಪಿ ನಾ, ತಿಳಿಗೇಡಿ ಅಂದು ಅರಿಯದೆ ಹೋದೆ, ನಾಚಿಕೆಗೆ ಮೈಮಾರಿ ಮನದಳಲಿಗೀಡಾದೆ. ಕೈಯ ಹಿಡಿವಾನಿಯ, ಕುಲದೋಜ ನಗೆಯಲ್ಲಿ ಮೈಯ ಹಿಡಿದಲುಗಿ ಹೇಳಿದರು “ನೋಡೇ ಇಲ್ಲಿ, ಚೆನ್ನಾಗಿ ಕಂದೆರೆದು ನಿನ್ನವನ ಮೊಗನೋಡು!” ಎನ್ನುತಿರೆ...
ಸಾಯಿ ರಾಮ್ ಸಾಯಿ ರಾಮ್|| ಸರ್ವರ ಮಾಲೀಕನೇ ಸಾಯಿ ರಾಮ್| ಶ್ರದ್ಧಾ ಭಕ್ತಿಯ ಭಕ್ತರ ಸಲಹೊ ಸ್ವಾಮಿಯೇ ಸಾಯಿ ರಾಮ್| ಸತ್ಯ ಅಹಿಂಸೆಯ ರಕ್ಷಿಪ ಅವಧೂತನೇ ಸಾಯಿ ರಾಮ್|| ಶಾಂತಿಯ ದೂತನೆ ಸಾಯಿ ರಾಮ್ ಸಂಕಲ್ಪ ಸಿದ್ಧಿಪನೆ ಸಾಯಿ ರಾಮ್| ಕರುಣಾಮೂರ್ತಿಯೇ ಸಾ...
೧ ಭೂಮಿ ಬಿರುಕು ಬಿಟ್ಟಿತು ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ ಹೂತು ಹೋದ ಹೆಣಗಳೆಲ್ಲ ಬರಡು ನೆಲದ ಕಣಗಳೆಲ್ಲ ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ. ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ ಸಿಟ್ಟಿನ ಸುಳಿ ಸಿಂಬೆ ಸುತ್ತಿ ಕುದಿ ಕುದಿ...
ಸುತ್ತಲೂ ನೆಲೆಸಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ನೋಡುವಾಗ ಹೆದರಿಕೆಯಾಗುತ್ತದೆ. ನಿರಾಸೆಯೂ ಆಗುತ್ತದೆ. ಸುತ್ತಲೂ ಕಂಡು ಬರುತ್ತಿರುವ ಹಿಂಸೆ ನಮ್ಮ ಜೀವಿಸುವ ಆಸ್ಥೆಯನ್ನೇ ಕಬಳಿಸುತ್ತಿದೆ. ನಾವೆತ್ತ ಸಾಗುತ್ತಿದ್ದೇವೆ ಎನ್ನುವ ಪ್ರಶ್ನೆ ...
ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ ಅನ್ನಮಂ ಪಡಯುವರು ಮಣ್ಣಿನಿಂದ- ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು ಲೋಕಮಂ ಸಲಹುವುದು ಮೋದದಿಂದ- ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು ಹಸನೆಸಗಿ ಸವಿಯೂಡಿ ಸುಲಭದಿಂದ- ತೆರೆದು ಬೇರಿಗೆ ದಾರಿ ಬೆಳೆ...
ಗಟ್ಟಿಯಾಗದೇ ಬದುಕು ದಕ್ಕದುನ್ನು ಕೆರೆ ಬಾವಿಗಳ ಪಾಲು ಆಗದಿರು ಹಗ್ಗದ ಉರುಳಿಗೆ ನಿನ್ನ ಕೊರಳ ನೀಡದೇ ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ ಬೆಂಕಿಯ ಜ್ವಾಲೆಗೆ ದೂಡುವ ಕೈಗಳನ್ನು ಕತ್ತರಿಸಲು ಝಳಪಿಸುವ ಖಡ್ಗವಾಗು. ಶತ್ರುಗಳ ಸೆಣಸಿ ನಿಲ್ಲಲು ಆತ್ಮವಿಶ್ವ...
ನಮ್ಮ ಹಿರಿಯ ಲೇಖಕರಾದ ತಿರುಮಲೇಶ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಚಿಲುಮೆ ತಂಡ ಪ್ರಾರ್ಥಿಸುತ್ತದೆ....
ಇಲ್ಲವೆಂದರೂ ಇಲ್ಲವಾಗುವುದೇ? ನೆನಪು- ಹುಲ್ಲು ಗರಿಕೆಯಂತೆ ಹಸಿರಾಗಿದೆ. ಆ ಚಿತ್ರ ಅವನದೇ ಮಳೆಬಿಲ್ಲಿನಂತೆ ಭರತ ಖಂಡದ ಮೇಲೆ ಬಾಗಿದೆ ತಂಗಾಳಿ ಅದನು ತೂಗಿದೆ. ಕಣೋಳಗಿನ ಮಿಂಚು ಭೂಮಂಡಲವ ಬೆಳಗಿದೆ ನಿಸ್ವಾರ್ಥ ನಗೆ ಮೂಲೆ ಮೂಲೆಯನೂ ತಾಕಿದೆ ಸರಕು ಸಂ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...














