ಮಲಗು ಮಗುವೇ

ಮಲಗು ಮಗುವೇ
ಜೋಗುಳ ನಿನಗೆ|
ನಿದಿರಾ ದೇವತೆ
ಬರುವಳು ಬಳಿಗೆ|
ಆಟವನಾಡಲು ನಿನ್ನಯ ಜೊತೆಗೆ
ಕರೆದೊಯೈವಳು ನಿನ್ನನು
ಆ ಚಂದ್ರನ ಲೋಕಕೆ||

ನಿನ್ನ ಮುದ್ದಾದ ಮೊಗವ ನೋಡುತಲಿ
ಹರ್ಷದ ಹೊಳೆಯಲಿ ತೇಲಿಸುತಲಿ|
ಬಗೆಬಗೆ ನಾಟ್ಯವ ಮಾಡಿ ನಗಿಸುತಲಿ
ನಿನಗೆ ತರತರ ತಿಂಡಿಯ ನೀಡುವಳು||

ಹಗಲಲಿ ಆಡಿ ದಣಿದಾ ನಿನಗೆ
ತಂಗಾಳಿ ಹಾಡುತಿದೆ ಸುವ್ವಾಲಿ|
ಪುಟ್ಟನೆ ಕಾಲುಗಳ ಪಟಪಟನೆ
ಬಡಿಯದಿರು ಚಟಪಟನೆ|
ಗೆಜ್ಜೆಯ ಸದ್ದಿಗೆ ಗುಮ್ಮನು ಬರುವನು
ಗುಮ್ಮನು ಬಂದರೆ ನಿದಿರೆಯು ಬಾರಳು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುನಾಮಿ
Next post ವ್ಯಾಕುಲತೆ

ಸಣ್ಣ ಕತೆ

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…