ನಲುಗುವ ಹೂವು

ನಲುಗುವ ಹೂವು ನಾನಲ್ಲ
ಅರಳುವ ಹೂವು ನಾನಲ್ಲ
ಮುಡಿಯುವ ಹೂವು ನಾನಲ್ಲ
ಅಂತರಂಗ ವಿಹಂಗಮದಲಿ
ನಲಿದ ಹೂ ||

ದೇವರಿಗೆ ಮುಡಿಪಾದುದಲ್ಲ
ಜೀವನ ಆಧಾರವಾದುದಲ್ಲ
ಮನೆತನ ಮಾನವೀಯತೆ ಹೊಂದುದಲ್ಲ
ಆಕಾರಾಧಿಗಳ ಸಂಯಮದೆ
ವಿಹರಿಸುವ ಹೂ ||

ಬಣ್ಣದ ಓಕುಳಿ ಮಾರ್ಮಿಕದಲ್ಲ
ಮಂಗಳ ಅಮಂಗಳವಾದುದಲ್ಲ
ಸುರುಳಿ ಸುತ್ತಿ ಬಂದುದಲ್ಲ
ಸುಖ ಸ್ವರ್ಗ ನರಕ ಕಾಣದಲ್ಲಾ
ಘಮ್ಮನೆ ಬೀರಿವ ಹೂ ||

ಮಂತ್ರ ತಂತ್ರ ಬಲ್ಲೂದಲ್ಲ
ಸೃಷ್ಟಿ ಸ್ಥಿತಿ ಲಯವಾದುದಲ್ಲ
ಕನ್ನಡಿಕೆಗೆ ಕಾಡುವ ಹೂವಲ್ಲ
ಸತ್ಯ ನಿಷ್ಠೆ ಮಂದಹಾಸದಲಿ
ಅರಳಿದ ಹೂ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೫ನೆಯ ಖಂಡ – ಪ್ರತಿಕೂಲತೆ
Next post ಹಣತೆಯ ಕೊರಗು…..

ಸಣ್ಣ ಕತೆ

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…