ಒಂದಾನೊಂದು ಕಾಡಿನಲ್ಲಿ ಕರಾಲಕೇಸರನೆಂಬ ಸಿಂಹವೊಂದಿತ್ತು. ಅದಕ್ಕೆ ಧೂಸರಕನೆಂಬ ಒಂದು ನರಿಯು ಆಳಾಗಿ ಇತ್ತು. ಆ ಸಿಂಹವು ಒಮ್ಮೆ ಒಂದು ದೊಡ್ಡ ಕೊಂಬಿನ ಆನೆಯೊಡನೆ ಹೋರಾಡುವಾಗ ಕೊಂಬಿನ ಏಟು ಬಿದ್ದು ಗಾಯವಾಗಿ ಮೇಲಕ್ಕೇಳಲಾರದೆ ಬಿದು ಹೋಯಿತು. ಅದು ಹಾಗೆ ಬೇಟೆಮಾಡದೆ ಬಿದ್ದರಲು, ಧೂಸರಕನಿಗೆ ತಿನ್ನುವುದಕ್ಕೆ ಏನೂ...

ಪ್ರೀತಿಯೆಂದರೇನು ಎಂದು ಅರಿಯುವ ಮುನ್ನವೇ ಸೋತು ಶರಣಾದೆನು| ನಿನ್ನ ಪ್ರೀತಿಗೆ ಪರವಶನಾಗಿ ನಿನ್ನ ನಭದಲಿ ತೇಲಿ ನನ್ನೇ ನಾನು ಮರೆತೆನು || ನಿನ್ನ ಪ್ರೀತಿಯ ಸ್ಪರ್ಶದಲಿ ನಾನು ಸಂತುಷ್ಟನಾದೆನು| ನಿನ್ನ ಪ್ರೀತಿಯ ಆಲಾಪನೆಯಲಿ ಮಿಂದು ನಾನು ಪುನೀತನಾದ...

ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ ನಕ್ಷತ್ರ ಶೇಖರಿಸಿದ್ದ. ಕನಸಿನ ದೋಣಿಯಲ್ಲಿ ನದಿಯನ್ನು ದಾಟಿ ‘ಪ್ರಿಯೆ! ...

(ಕೆಲವು ಟಿಪ್ಪಣಿಗಳು) ೧೯೭೩ರಲ್ಲಿ ಹೊರಬಂದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ತೇಜಸ್ವಿ ಬರೆದ ಮೊದಲ ಮಾತು ಅವರ ಕಥಾಸಂಕಲನದ ಕಥೆಗಳಂತೆಯೇ ಮುಖ್ಯವಾದ ಚರ್ಚೆಗೆ ವೇದಿಕೆಯಾಗುವಂತಿದೆ. ‘ಹೊಸದಿಂಗಂತದೆಡೆಗೆ’ ಎಂಬ ಶೀರ್ಷಿಕೆಯಡಿ ಬರೆದ ಮಾತುಗಳಲ್ಲಿ ...

ಇಲ್ಲಿ ಹರಿಯೋ ನೀರು ನೀರಲ್ಲ ಸ್ವಾಮಿ, ತೀರ್ಥವೆನ್ನುವರು ಇಲ್ಲಿ ನೆಟ್ಟ ಕಲ್ಲು ಕಲ್ಲಲ್ಲ ಸ್ವಾಮಿ, ದೇವರೆನ್ನುವರು ಇಲ್ಲಿ ಬಡಿಯೋ ಸಾವು ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು. ಇಲ್ಲಿರುವ ಬಡತನಕೆ ಇಲ್ಲಿ ಕಾರಣವಿಲ್ಲ ಕಳೆದ ಜನ್ಮದ ಪಾಪವಂತೆ ಸೊಕ್ಕಿ ...

ಮದರಾಸು ನಗರದಲ್ಲಿ ಸೇರಿದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿದ ಹಾರೈಕೆ. ದ್ರಾವಿಡಗಣ-ತ್ರಿಪದಿ, ಕುರಳು ಧಾಟಿ ೧. ಕನ್ನಡನುಡಿಪಯಿರ್ ಮುನ್ನಡೆ ತೆನೆತುಂಬಿ, ಪೊನ್ನಡಕಿಲ್ಗಂ ಪೊನ್ನ ಕ್ಕೆ. ೨. ಬೀಡುಂ ಬಯಲ್ ಮಲೆ ಕುಡಿವಾಳ್ಕೆ ಕರ್‍ಬು ಜೇನ...

ಅಪರಿಮಿತ ತಾರೆಗಳ ಅನುದಿನವು ಆಗಸದಿ ಎಣಿಸುವುದು ನನ್ನ ಧರ್ಮ ಎಣಿಸುವೆನು ಗುಣಿಸುವೆನು ಅಳೆಯುವೆನು ಎಳೆಯುವೆನು ಯಾಕೆ ಏನೆಂದು ನಾನು ತಿಳಿಯೆ ನಿಂತಿವೆಯೊ ಚಲಿಸುತಿವೆಯೊ ಮಿಂಚುತಿವೆಯೊ ಜ್ವಲಿಸುತಿವೆಯೊ ವರ್ಧಿಸುತಿವೆಯೊ ಕ್ಷಯಿಸುತಿವೆಯೊ ಹಾಗೆ ಅಲ್ಲ...

ಭಾಗೀರಥಿ– “ಆಚಾರ್ಯರೇ! ತಮ್ಮ ಬರುವಿಕೆಯು ನಮ್ಮ ಪೂರ್ವ ಪುಣ್ಯದ ಫಲವೇ. ತಮಗೆ ಬಹುಶಃ ನಮ್ಮ ಗುರುತವಿಲ್ಲ. ನಮ್ಮ ಮೂಲ ಸ್ಥಾನ ತಮ್ಮ ಹೆಂಡತಿ ಭೀಮಕ್ಕನ ತೌರುಮನೆ ಇರುವ ಸಮಂತಪೇಟೆ. ಇತ್ತಲಾಗಿ ನಾವು ಆ ಊರು ಬಿಟ್ಟು ಈ ಪಟ್ಟಣಕ್ಕೆ ಬಂದಿರುವೆವು...

ಹೊಂದಿಕೊಂಡು ಹೋಗದ ಹೆಣ್ಣು ಮನೆಯ ಒಡೆಯುವಳೆನ್ನುವರು ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು ವಿಚಾರ ಮಾಡುವವರು ಯಾರೂ ಇಲ್ಲ. ಎಳೆಯ ಹುಡುಗಿಯ ತಂದು ಮನೆದುಂಬಿಸಿ ಕೊಂಡಾಗ ಹ್ಯಾಗೆ ನಡೆಸಿ ಕೊಳ್ಳಬೇಕಂತಾ ತಿಳಿದಿಹರಾ? ಅಪ್ಪ, ಅಮ್ಮನ ಮನೆಯಲ್ಲಿ ಬದು...

ಕಾಲಿಗೆ ಕಟ್ಟಿದ ಗುಂಡು – ಸಂಸಾರ ಕೊರಳಿಗೆ ಕಟ್ಟಿದ ಬೆಂಡು – ಪಗಾರ ತೇಲಲೀಯದು ಗುಂಡು ಮುಳುಗಲೀಯದು ಬೆಂಡು ಇದರ ನಡುವೆಯೇ ನೀನು ಬದುಕಿದೆಯಾ ಬಡಜೀವ //ಪ// ಕಾಲಿಗೆ ತೊಡರಿದ ಬಳ್ಳಿ ಆಕರ್ಷಣೆಯ ಫಲಿತ ನಂತರ ಇಲ್ಲ ವಿಮೋಚನೆ ತಪಸ್ಸಿಗೂ ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...