
ಓಡುತ್ತಿರುವ ಹೆಣ್ಣು ಕೋತಿಯ ಹೊಟ್ಟೆಯ ತಳ ಭಾಗದಲ್ಲಿ ಮರಿ ಕೋತಿ ತಬ್ಬಿ ಹಿಡಿದು ಕೂತಿತ್ತು. ಓಡುತ್ತಿರುವ ಹೆಣ್ಣು ಕಾಂಗರೂ ಹೊಟ್ಟೆಯ ಚೀಲದಲ್ಲಿ ಮರಿ ಕಾಂಗರೂ ಸುಭದ್ರವಾಗಿ ಕೂತಿತ್ತು, ಓಡುತ್ತಿರುವ ಹೆಣ್ಣು ಮಾನವಳ ಮರಿ, ಮಗು ಕೆಲಸದವಳ ಕೈಲಿತ್ತು....
ಈಗ ಎಲ್ಲವೂ ಮಸಕು ಮಸಕಾಗುತ್ತಿವೆ; ಒಂದು ದಿನ ನಾನು ಎಲ್ಲವನ್ನೂ ಮರೆತುಬಿಡುತ್ತೇನೆ. ಆದರೂ ಕೆಲವೊಂದು ನೆನಪುಗಳು ಇನ್ನೂ ಗಾಢವಾಗಿ ಉಳಿದುಕೊಂಡಿವೆ. ಅವನ್ನು ದಾಖಲಿಸುವ ತವಕವೋ ತಿಳಿಯದು; ಅವು ಧುಮ್ಮಿಕ್ಕಿ ಬರುತ್ತವೆ. ಕೆಲವು ವರ್ಷಗಳ ಹಿಂದೆ ನಾನು...
ನಿನ್ನ ನಗು ನುಡಿಯುತ್ತಿದೆ ಮುನಿಸಿನ ಸಾವಿನ ಸಮಾಚಾರ! *****...
ಚರ್ಮದಾಚೆಗೆ ವರ್ಣದಾಚೆಗೆ ಶಾಂತಲಿಂಗೇಶ್ವರ ಶಿವಾ ಜೀರ್ಣ ಕಾಷ್ಟದ ಚೂರ್ಣ ಶಿಲ್ಪದ ಆಚೆಯಾಚೆಯ ಶುಭ ಶಿವಾ ಜನನದಾಚೆಗೆ ಮರಣದಾಚೆಗೆ ಮಾಯವಾದಾ ವರಶಿವಾ ಆದಿ ಮಧ್ಯಾ ಅಂತ್ಯದಾಚೆಗೆ ಜಾರಿ ಹೋದಾ ಹರಶಿವಾ ಶಬ್ದದಾಚೆಗೆ ಅರ್ಥದಾಚೆಗೆ ಚಾಚಿ ಅಡಗಿದ ಶಿವಶಿವಾ ...
ಮೇಷ್ಟ್ರು: “ನಿಮ್ಮಪ್ಪನ ಹೆಸರು ಇಂಗ್ಲೀಷ್‌ನಲ್ಲಿ ಬರೆ..” ತಿಮ್ಮನು “ಟೆಂಪಲ್ ಸ್ಟೆಪ್ ವಾಟರ್‌ಕಿಂಗ್” ಅಂತ ಬರೆದಿರುವುದನ್ನು ನೋಡಿ ಕೇಳಿದ್ರು- “ಏನು ತಮಾಷೆ ಮಾಡಿರುವೆಯಾ?” ತಿಮ್ಮ ಹೇಳಿದ: “ನ...
ನಾನವನ ಅರ್ಧಾಂಗಿ, ಅವನ ಯಾವ ಅಂಗದ ಮೇಲೆ ನನಗೆ ಅಧಿಕಾರವಿದೆ ಹೇಳು? ನನ್ನ ನಗು, ಅಳುವಿನ ಮೇಲೆಯೂ ಅವನದೇ ಅಧಿಕಾರ, ಅಷ್ಟೇ ಏಕೆ? ಅವನ ಒಪ್ಪಿಗೆ ಪಡೆದೇ ನಾನು ಫಲ ಧರಿಸಬೇಕು, ಭ್ರೂಣ ಹೆಣ್ಣಾಗಿದ್ದರೆ ಹೃದಯ ಕಲ್ಲಾಗಿಸಿ, ಚಿಗುರುಗಳ ಹೊಸಕಿ ಕರುಳಿನ ಕ...
ಅಲ್ಲೊಬ್ಬ ವಿಜ್ಞಾನಿ, ಅಧಿಕಾರಿ, ಕರಣಿಕ, ಪೇದೆ ಮಾಲಿ, ಹಮಾಲಿ, ಇಂತಿಪ್ಪ ಕೃಷಿ ಇಲಾಖೆಯ ತೋಟ ದೊಳೊಂದು ಪೈಸೆಯಾದಾಯವಿಲ್ಲದಿರಲಿಷ್ಟೆಲ್ಲ ಛಲದ ಕೆಲಸಗಳನೊಬ್ಬನೇ ನಿರ್ವಹಿಪ ಹೊಲದ ರೈತಂಗೀ ಮಂದಿ ಕೊಡುವುದೇನು ಮಣ್ಣು ಸಲಹೆ – ವಿಜ್ಞಾನೇಶ್ವರಾ ...
ಪ್ರೇಮಿಗಳು ಮದುವೆಯಾದಾಗ ಸಗ್ಗದನುಭವದ ಚಣಗಳಿಗೆ ತೆರವಾಗುವರು ಎಂದಿಗೂ ಜತೆಬಿಡದ ಭಾವದಲಿ ಸಮ್ಮಾನಿಸಿಕೊಂಡ ಹಿಗ್ಗನು ಪಡೆಯುವರು, ವಧು ಸದಾ ಸುಂದರಿ ವರ ಬಲು ಭಾಗ್ಯವಂತ ರಕ್ತಮಾಂಸಗಳ ಗರ್ಜನೆಯಿಂದ ಕೋಣೆಯೊಳಗಣ ಕತ್ತಲು ಹೊರದಬ್ಬಿ ಬರಲು ನಗ್ನತೆಯ ಭ್ರ...
ನನ್ನ ಗೆಳತಿ ಅವಳು ಎಂದಂತೆ ಹೆಜ್ಜೆ ಇಟ್ಟಂತೆ ಲಜ್ಜೆಯ ಬೆಸದಂತೆ ಅವಳೊಂದು ಮಿಲನ ಮುಕ್ತ ಮುಕ್ತ ಕಾವ್ಯ ಹರಿದು ಹೋದಂತೆ ನದಿ ನದಿಗಳ ಕಡಲ ಸೇರಿ ಮುತ್ತಾದಂತೆ ಬದುಕಿನ ಮಜಲುಗಳ ಅಪ್ಪಿಕೊಂಡು ನನ್ನ ಗೆಳತಿ ಅವಳು ಮುಕ್ತ ಸಂತೆಯ ಮಳಿಗೆಗಳ ಸುತ್ತಿ ಸುಳಿದ...
ಯೋನಸಂಚರತೀ ದೇಶಾನ್ ಯೋನಸೇವೇತ್ ಪಂಡಿತಾನ್ | ತಸ್ಯಸಂಕುಚಿತಾಬುದ್ಧಿ ಘೃತಬಿಂದುರಿವಾಂಭಸಿ || ಸುಭಾಷಿತ || ಎಷ್ಟೋ ಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್‍ಥಕವಾಗಿ ವ್ಯಯವಾಗುವದೆಂದು ಭಾವಿಸುವರು, ಆದರೆ ಹಾಗೆ ತಿಳಿಯವದು ದಡ್ಡತನವು. ಪ್ರವ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...















