
ಯಾರಿದ್ದರೇನಂತೆ ಯಾರು ಇಲ್ಲದಿರಲೇನಂತೆ ನಿನಗೆ ನೀನೇ ಸಾಟಿ ಸಖಿ ಹೂವು ಹೂವಿನಲಿ ನೀನು ದುಂಬಿ ಆಲಾಪದಲಿ ನಿನ್ನ ಹೆಸರೇ ಹೇಳುತಿದೆ ಬರೆದೆ ಎಲೆಗಳ ನರನಾಡಿಗಳಲಿ ಪ್ರಕೃತಿಯೇ ನೀನು ವಿಕೃತಿಯೇ ನೀನು ಋತುಗಾನ ವಿಲಾಸಿನಿ ಸೌಂದರ್ಯವತಿಯೇ ನೀನು ಜೀವನದ ಜೀ...
ಆನಂದಕಾರಕ ಸಾಧನಗಳಲ್ಲಿ ಪ್ರಸನ್ನತೆ ಎಂಬದೊಂದು ಬಹು ದೊಡ್ಡ ಸಾಧನವಾಗಿದೆ. ಪ್ರಸನ್ನತೆಯಿಂದ ಶಿಕ್ಷಕನು ಲೋಕಪ್ರಿಯನಾಗುವನು. ಅಂಗಡಿಕಾರನು ಹೆಚ್ಚಾಗಿ ಗಿರಾಕಿಗಳನ್ನು ದೊರಕಿಸುವನು; ನೌಕರನು ಹೆಚ್ಚು ಸಂಬಳವನ್ನು ದೊರಕಿಸುವನು; ರಾಜನು ಪ್ರಜಾನುರಾಗಿಯ...
ಬಿಡಬೇಡ ಮನಸ್ಸನು ಸುಮ್ಮನೆ ಇದೆ ಅದು ಮಹಾ ಚತುರ ಸಾಧುವಿನ ಹಾಗೆ ವರ್ತಿಸುವುದು ಹೀನಕ್ಕಿಳಿಯಲು ನಿತ್ಯ ಆತುರ ಸ್ಥಿರವಾಗಿ ಒಂದೊಮ್ಮೆ ಕುಳಿತು ನಿ ನಿನ್ನ ಮನಸ್ಸನ್ನೆ ನಿ ವಿರ್ಮಶಿಸು ಮಗುವಿನಂತೆ ಅದಕ್ಕೆ ಸಂತೈಸಿ ಧನ್ಯ ಹೀನತೆಯ ಪರಾಮರ್ಶಿಸು ಅಂಬರದಿ...
ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು ಭಾವನೆಯ ಪ್ರತಿಬಿಂಬ| ...
ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ ಸಾಗುತ್ತಿದ್ದ. ಕನಸಿ...
ಒಡಲಿನಾಗೆ ಸಿಡಿಲು ಕುಂತು ಕೂಗು ಹಾಕಿತು. ನೆತ್ತರಾಗೆ ತತ್ತಿಯಿಟ್ಟು ತೇಲಿಬಿಟ್ಟಿತು. ಕೆಂಡದುಂಡೆಯಂಥ ತತ್ತಿ ಕನಸು ಕಟ್ಟಿತು- ಅದು ಬಿರುಕು ಬಿಟ್ಟಿತು, ನೆತ್ತರಲ್ಲಿ ತತ್ತಿಯೊಡೆದು ಬಂದುಬಿಟ್ಟವು- ಮರಿಗಳು ಬಂದುಬಿಟ್ಟವು. ಮೌನದಾಗೆ ಮೈಯ ತಿಂದು ಮ...
ಒತ್ತಾಸೆ : ದಿನಾಂಕ ೨೩, ೨೪, ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕಾಗಿ ಬರೆದ ಲೇಖನ. ಬಂಡಾಯದ ಕ್ರಿಯೆ ಮತ್ತು ಸಾಹಿತ್ಯ ಇವತ್ತಿಗೂ ಜೀವಂತವಾಗಿದೆ. ಆದರೆ ಪ್ರಖರವಾಗಿಲ್ಲ. ಈ ಪ್ರಶ್ನೆ ಸ...
ಕನ್ನಡನಾಡಿನ ಕಾಗಿನೆಲೆಯಲ್ಲಿ ಬಾಡ ಎನ್ನುವ ಗ್ರಾಮದಲಿ ಕುರುಬರ ವಂಶದ ಬೀರಪ್ಪನ ಸತಿ ಬಚ್ಚಮ್ಮನ ಸಿರಿ ಗರ್ಭದಲಿ ಬಾಲಕ ಜನಿಸಿದ ಭಾಗ್ಯದ ತೆರದಲಿ ತಿಮ್ಮಪ್ಪ ಎಂಬುವ ಹೆಸರಿನಲಿ! ತಿಮ್ಮಪ್ಪ ಬೆಳೆದನು ದೊಡ್ಡವನಾದನು ಸಾಹಸ ಕಾರ್ಯಕೆ ತೊಡಗಿದನು ಪಾಳೆಯಗಾ...
ಬೆಚ್ಚಿಸುವುದೇಕವನ ಬಿಮ್ಮನೆ ಕುಳಿತವನ ಸುಮ್ಮನೆ ಬಾಗಿಲ ತೆರೆದು ಕಿಂಡಿ ಸಾಲದೆ ನೋಡುವೊಡೆ ಗಿಂಡಿ ಸಾಲದೆ ಸಿಂಪಿಸುವೊಡೆ ಕಿರಣ ಸಾಲದೆ ಬೀರುವೊಡೆ ಕಿಟಕಿ ಸಾಲದೆ ಹಾಯುವೊಡೆ ಕಂಬನಿ ಸಾಲದೆ ಹರಿಯುವೊಡೆ ಕಿರುನಗೆ ಸಾಲದೆ ಸುರಿಯುವೊಡೆ ಎಬ್ಬಿಸುವುದೇಕವನ...
ವೇದವ್ಯಾಸ ಉಪಾಧ್ಯನ ಪ್ರಾಣಸಖನನ್ನು ತನ್ನ ಪಕ್ಷಕ್ಕೆ ತಿರುಗಿಸಿ ಕೊಂಡ ಹಾಗಾಯಿತು. ಬಾಲಮುಕುಂದಾಚಾರ್ಯನನ್ನು ಕೈವಶಮಾಡಿಕೊಳ್ಳದೆ ಜಯಪೊರೆಯುವದು ಪ್ರಯಾಸ ಹೀಗೆ ಯೋಚನೆಯಲ್ಲಿ ಮಗಳೂ ತಾಯಿಯೂ ಒಟ್ಬಿನಲ್ಲಿ ಶಾನೆ ಹೊತ್ತು ಕಳೆದರು. ಚಿಂತೆಯಾಕೆ? ಈ ಕಾರ್...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
















