ವಾಗ್ದೇವಿ – ೨೨

ವಾಗ್ದೇವಿ – ೨೨

ವೇದವ್ಯಾಸ ಉಪಾಧ್ಯನ ಪ್ರಾಣಸಖನನ್ನು ತನ್ನ ಪಕ್ಷಕ್ಕೆ ತಿರುಗಿಸಿ ಕೊಂಡ ಹಾಗಾಯಿತು. ಬಾಲಮುಕುಂದಾಚಾರ್ಯನನ್ನು ಕೈವಶಮಾಡಿಕೊಳ್ಳದೆ ಜಯಪೊರೆಯುವದು ಪ್ರಯಾಸ ಹೀಗೆ ಯೋಚನೆಯಲ್ಲಿ ಮಗಳೂ ತಾಯಿಯೂ ಒಟ್ಬಿನಲ್ಲಿ ಶಾನೆ ಹೊತ್ತು ಕಳೆದರು. ಚಿಂತೆಯಾಕೆ? ಈ ಕಾರ್ಯ ವನ್ನು ತಾನೇ ಸುಧಾರಿಸುವದಾಗಿ ತಾಯಿಯು ಒಪ್ಪಿಕೊಂಡು, ಗಂಡನನ್ನು ಕರೆದು, ಅವನ ಕಿವಿಯಲ್ಲಿ ಮೆಲ್ಲಗೆ ಏನೋ ಮಾತಾಡಿದಳು ಅದ್ಯಾವ ದೊಡ್ಡ ಕೆಲಸವೆಂದು ನಗುತ್ತಾ, ಅವನು ಅಂಜನೇಯಾಲಯಕ್ಕೆ ಹೋಗಿ ಬಾಲಮು ಕುಂದಾಚಾರ್ಯನ ಸಮಯ ಹಾರೈಯಿಸುತ್ತಾ, ಅತ್ತಿತ್ತ ನೋಡಿಕೊಂಡು, ತಾನು ಬೇರೆ ಏನೋ ಕೆಲಸದ ಮೇಲೆ ಬಂದವನಂತೆ ಆ ದೇವಾಲಯದ ಅರ್ಚಕನ ಕೂಡೆ ಸಂಭಾಷಣೆಮಾಡುತ್ತಾ, ಒಂದು ಮೂಲೆಯಲ್ಲಿ ಕೂತು ಕೊಂಡನು.

ಬಾಲ ಮುಕುಂದನು ಒಬ್ಬನೇ ಕೂತುಕೊಂಡಿರುವ ಒಳ್ಳೇ ಸಮಯ ವನ್ನು ನೋಡಿ, ತಮ್ಮಣ್ಣ ಭಟ್ಟನು ದೂರದಿಂದ ಬಗ್ಗಿ ದೊಡ್ಡ ನಮಸ್ಕಾರ ಮಾಡಿದನು. ಬಾಲಮುಕುಂದನು ಆ ಬ್ರಾಹ್ಮಣನನ್ನು ಸಮೀಪ ಕೂರಿಸಿ ಕೊಂಡು, ಅವನ ಗುರ್ತು ಮಾಡಿಕೊಂಡ ಮೇಲೆ ಬಂದ ಕಾರ್ಯವೇನೆಂದು ಮೆಲ್ಲಗೆ ಕೇಳಿದಾಗ ತಮ್ಮಣ್ಣ ಭಟ್ಟನು ಅವನ ಕಿವಿಯಲ್ಲಿ ವಾಗ್ದೇವಿಯು ತಮ್ಮ ದರುಶನಾಭಿಲಾಹಿಯಾಗಿರುವಳೆಂದು ಹೇಳಿದನು. ತಾನು ಚಿಂತನೆ ಮಾಡಿಕೊಂಡಿರುವ ಕಾರ್ಯವು ಕೈಗೂಡುವ ಸಂದರ್ಭ ಸುಲಭವಾಗಿ ಸಿಕ್ಕಿ ದ್ವಕ್ಕಾಗಿ ಉಲ್ಲಾ ಸಪಟ್ಟು, ಅವನು ತಮ್ಮಣ್ಣಭಟ್ಟನನ್ನು ಒಂದು ಗೋಪ್ಯ ಸ್ಥಳಕ್ಕೆ ಕರಕೊಂಡು, ಅಲ್ಲಿ ರವಷ್ಟು ಅಂತರಂಗ ಮಾತಾಡಿದನು. ತಮ್ಮಣ್ಣ ಭಟ್ಟನು ಶೀಘ್ರ ಹೆಂಡತಿಯ ಬಳಿಗೆ ಬಂದು, ಗುಟ್ಟಿನಲ್ಲಿ ಏನೋ ಹೇಳಿದನು. “ಸೈ ಇನ್ನು ಚಿಂತೆ ಬಿಡಿ’ ಎಂದು ಸಂತೋಷದಿಂದ ಅವಳು ಮಗಳನ್ನು ಕಂಡು, ಅವಳಿಗೆ ಗುಪ್ತ ಅನುಜ್ಞೆಗಳನ್ನು ಕೊಟ್ಟಳು.

ವಾಗ್ದೇವಿಯ ಮುಖಚಂದ್ರಗೆ ಪೂರ್ಣಮಿಯ ದಿನದಂತೆ ಪೂರ್ಣಕಲೆ ಗಳೇರಿದವು. ಅವಳು ಸಮಯ ಹಾಳುಮಾಡದೆ, ಏನೋ ದೊಡ್ಡ ಕೆಲಸದಲ್ಲಿ ಪ್ರವರ್ತಿಸುತ್ತಿಗುವ ಹಾಗೆ ಕಾಣುತ್ತಿತ್ತು. ಬಗೆಬಗೆ ಹೂವು, ಪನ್ನೀರು, ಗಂಧ, ಊದುಬತ್ತಿ ಇತ್ಯಾದಿ ಸುಗಂಧ ವಸ್ತುಗಳ ಪರಿಮಳವು ದಾರಿಗರ ಘ್ರಾಣೇಂದ್ರಿ ಯದಲ್ಲಿ ತುಂಬಿತು. ತಮ್ಮಣ್ಣಭಟ್ಟನು ಬೇಗ ಒಂದಿಷ್ಟು ಉಂಡುಬಿಟ್ಟು, ಮುಸುಕು ಹಾಕಿಕೊಂಡು, ಮಠದ ಎದುರು ಮುಚ್ಚಿರುವ ಅಂಗಡಿಯ ಬಾಜಾರಿ ಹಲಿಗೆಯ ಮೇಲೆ ಘಳಿಗೆಗೊಮ್ಮೆ ತಲೆಯೆತ್ತಿ ನೋಡುತ್ತಾ, ನಿದ್ರಾ ವಸ್ಥೆಯನ್ನು ತಾಳಿ, ಬಿದ್ದು ಕೊಂಡನು. ಬೀದಿಯಲ್ಲಿ ಜನರ ಸಂಚಾರ ಕಡಿಮೆಯಾಗುವ ವೇಳೆಯಲ್ಲಿ ಒಬ್ಬ ಯೌವನಸ್ಥನು ಮುಸಲ್ಮಾನರಂಶೆ ಅರಬಿ ಅಂಗಿಯನ್ನು ಆಪಾದ ಮಸ್ತಕ ಪರಿಯಂತರ ಹೊದ್ದು ಕೊಂಡು, ಕೈಯಲ್ಲಿ ಬೆತ್ತವನ್ನು ಹಿಡುಕೊಂಡು ಬರುವದಕ್ಕೂ ತಮ್ಮಣ್ಣ ಭಟ್ಟನು ತಲೆಯೆತ್ತಿ ನೋಡುವದಕ್ಕೂ ಸಮಯವಾಯಿತು. ತಮ್ಮಣ್ಣ ಭಟ್ಟನು ಬೀದಿಗೆ ಇಳಿದು ಆ ಯೌವನಸ್ಥನನ್ನು ತನ್ನ ಮನೆಯ ಒಳಗೆ ಕರಕೊಂಡು ಬಾಗಲು ಹಾಕಿ ಬಿಟ್ಟನು. ಶಾನೆ ಸಮಯ ಕಳೆದ ಮೇಲೆ ಅವನು ಬಾಗಲು ತೆರದು ಬೀದಿಗೆ ಇಳಿದನು ತಮ್ಮಣ್ಣ ಭಟ್ಟನು ಅವನ ಹಿಂದುಗಡೆಯಿಂದ ಹತ್ತಿಪ್ಪತ್ತು ಮಾರು ದೂರಹೋಗಿ ಅಪ್ಪಣೆ ಪಡಕೊಂಡು ಹಿಂತಿರುಗಿ ತನ್ನ ಮನೆಯ ಒಳಹೊಕ್ಕು ಶಯನಹಾಕಿದನು. ಭಾಗೀರಥಿಯು ಗಂಡನನ್ನು ಕುರಿತು– “ಹೌದೇನು! ಬಾಲಮುಕುಂದಾಚಾರ್ಯನು ನಮ್ಮ ಕೈವಶವಾದ ಹಾಗಾಯಿತು. ನಿಮ್ಮ ಸಾಹಸಕ್ಕೆ ಮೆಚ್ಚಿದೆ. ನಾರಾಯಣಾಚಾರ್ಯನನ್ನು ಮೊದಲೇ ಬಗ್ಲಿಗೆ ಹಾಕಿ ಆಯಿತು. ಇನ್ನು ಆ ಗ್ರಾಮಸಿಂಹ ವೇದವ್ಯಾಸನು ಬಗುಳುತ್ತಿರಲಿ ಎಂದು ಹರುಷವನ್ನು ತಡೆಯಲಾರದೆ ಬಾಯಿತುಂಬಾ ನೆಗಾಡಿಬಿಟ್ಟಳು. ಈ ಸಂಭಾ ಷಣೆಯನ್ನು ಕೇಳುತ್ತಿದ್ದ ವಾಗ್ದೇವಿಯು ಹಾಗೆಯೇ ನಕ್ಕಳು.

ಬಾಲಮುಕುಂದಾಚಾರ್ಯನು ಅಂಜನೇಯಾಲಯದ ಸಮಾಪವಾಗು ವಾಗ ತಾನು ಹೊದ್ದುಕೊಂಡಿದ್ದ ಅರಬಿ ಅಂಗಿಯನ್ನು ತೆಗೆದು ಸುರುಳಿಮಾಡಿ ಕಂಕುಳಲ್ಲಿಟ್ಟುಕೊಂಡು, ತೀವ್ರವಾಗಿ ನಡಿಯುತ್ತಿದ್ದನು. ಹಿಂದಿನಿಂದ ಯಾರೋ ಬಂದಂತೆ ತೋರಿ ನೋಡೋಣ, ದೊಣ್ಣೆಯನ್ನು ಹಿಡುಕೊಂಡು ಕಂಬಳಿಮುಸುಕು ಹಾಕಿ ಕೊಂಡು ಹಿಂಬಾಲಿಸಿ ಬರುವ ಭೀಮಾಚಾರ್ಯ ನನ್ನು ಕಂಡು, ಅಲ್ಲಿಯೇ ಸ್ತಬ್ಧನಾದನು. ಅವನು– “ಆಚಾರ್ಯರೇ ತಾವು ಒಬ್ಬರೇ ಅಂಗರಕ್ಷಣೆಗೆ ಯಾರಿಗೂ ಸಂಗಡ ತಕ್ಳೊಳ್ಳದೆ ಮರಳಿ ಬರುವದು ನೋಡಿ ಭದ್ರತೆಯ ಚಿಂತನೆಯಿಂದ ತಮ್ಮ ಬೆನ್ನು ಬಿಡದೆ ಬಂದೆ” ಎಂದು ವಿನೋದಪೂರ್ವಕವಾಗಿ ಹೇಳಿ ನಕ್ಕನು. ಬಾಲಮುಕುಂದಾಚಾರ್ಯಗೆ ಚೇಳು ಕಚ್ಚಿದಂತಾಯಿತು. ತನಗೆ ಗುಟ್ಟು ತಿಳಿದ ದೆಸೆಯಿಂದ ಏನೂ ಬಾಧ ಕವಿಲ್ಲ. ಮನಸ್ಸಿನಲ್ಲಿ ರವಷ್ಟಾದರೂ ಸಂದೇಹವಿರಬಾರದೆಂದು ಭೀಮಾಚಾ ರ್ಯನು ಬಾಲಮುಕುಂದನ ಕೈಹಿಡುಕೊಂಡು, ಇಬ್ಬರೂ ಬಿಡಾರ ಪ್ರವೇಶ ವಾದರು. ಸಾಯಂಕಾಲ ಸಮಯ ತಮ್ಮಣ್ಣ ಭಟ್ಟನೂ ಬಾಲಮುಕುಂದನೂ ಅಂತರಂಗ ಮಾತಾಡುವ ಸಮಯದಲ್ಲಿ ಭೀಮಾಚಾರ್ಯನು ಬಂದು; ಕಿಟಕಿಯಿಂದ ನೋಡಿ ಅದರಲ್ಲಿ ಏನೋ ವಿಶೇಷವದೆ ಎಂಬ ಅನುಮಾನದಿಂದ ರಾತ್ರೆಕಾಲ ನಿದ್ರೆಹೋಗದೆ ಕಾದುಕೊಂಡಿದ್ದನು. ಬಾಲಮುಕುಂದನು ವೇಷ ಮರಸಿ ಹೊರಡುವದು ಆವನ ಕಣ್ಣಿಗೆ ಬಿದ್ದಿತು. ಒಂದು ಫರ್ಲಾಂಗಿನಷ್ಟು ದೂರದಿಂದ ಮೆಲ್ಲಗೆ ಅವನು ಹಿಂಬಾಲಿಸಿ ಬಂದು, ಕುರುದಾರಿಯಿಂದ ಚಂಚಲನೇತ್ರರ ಮಠದ ಬಾಗಿಲಲ್ಲಿರುವ ದೊಡ್ಡ ಅಶ್ವತ್ತ ಮರದ ಕಟ್ಟೆಯಲ್ಲಿ ಅಡಗಿನಿಂತು, ತಮ್ಮಣ್ಣ ಭಟ್ಟನು ಬಾಲಮುಕುಂದನನ್ನು ತನ್ನ ಬಿಡಾರದ ಒಳಗೆ ಹೊಗಿಸಿಬಿಟ್ಟ ಚಮತ್ಕಾರವನ್ನು ನೋಡುತಿದ್ದನು.

ಮರದಿನ ಬೆಳಗ್ಗೆ ಭೀಮಾಚಾರ್ಯನ ಸವಾರಿಯು ವಾಗ್ದೇವಿಯ ಬಿಡಾರಕ್ಕೆ ಹೋಯಿತು ಅವಳು ತಾಯಿತಂದೆಗಳ ಸಮೇತ ಅವನಿಗೆ ದೇವರಂತೆ ವಿನಮಿಸಿ, ಆಸನಕೊಟ್ಟು ಕಾಲುಮುಟ್ಟಿ ನಮಸ್ಕಾರ ಮಾಡಿದಳು ಆಚಾರ್ಯನ ರಸನಾ ಶಕ್ತಿಯನ್ನು ಸೋಲಿಸುವಹಾಗಿನ ರುಚಿಕರವಾದ ಪದಾರ್ಧಗಳುಳ್ಳ ಫಲಾಹಾರ ಸಹಿತ ಚಲೋ ಕಾಫಿಯನ್ನು ಉಣ್ಣಿಸುವುದ ರಿಂದ ಅವರು ಇವನನ್ನು ದಣಿಸಿದರು. ಜರಿ ಅಂಚಿನದೊಂದು ಬನಾರಸಿ ಪಟ್ಟೆ ಮಡಿಯನ್ನೂ ಹೊಳೆಯುವ ಕೆಂಪಿನ ಕಿಡಿಗಳನ್ನು ಕುಂಡ್ರಿಸಿರುವ ಒಂದು ಚಿನ್ನದ ಉಂಗುರವನ್ನೂ ವಾಗ್ದೇವಿಯು ಭೀಮಾಚಾರ್ಯಗೆ ಕೊಟ್ಟು ಸ್ವೀಕರಿಸಬೇಕೆಂದು ಅಪೇಕ್ಷಿಸಿದಳು. ಗುಣವಂತೆಯಾದ ಈ ವಿಲಾಸಿನಿ ಸ್ತ್ರೀಯ ಕೈಯಿಂದ ತನಗೆ ಸಿಕ್ಕಿದ ಉಚಿತವನ್ನು ಪ್ರೇಮದಿಂದ ಅಂಗೀಕರಿಸಿ “ನಿನಗೆ ಸದಾ ಶ್ರೀಹರಿಯು ಪೂರ್ಣ ಅನುಗ್ರಹವಿಟ್ಟು ನಡೆಸಲಿ” ಎಂದು ಸಂಪೂರ್ಣಾಶೀರ್ವಾದ ಮಾಡಿ, ತಾಂಬೂಲವನ್ನು ತಕ್ಕೊಂಡು, ಮಧ್ಯಾ ಹ್ನಕ್ಕೆ ಮರಳಿ ಬರುವೆನೆಂದು ಹೊರಟು ಹೋದನು. ಬಾಲಮುಕುಂದಾಚಾ ರ್ಯನು ತನ್ನ ಗುಟ್ಟು ಹೊರಗೆ ಬಿತ್ತೆಂಬ ಚಿಂತೆಯನ್ನು ತೋರಿಸಿಕೊಳ್ಳದೆ. ಹಾಸ್ಯವದನ ಮಾಡಿಕೊಂಡರೂ ಭೀಮಾಚಾರ್ಯನನ್ನು ನೋಡಿದೊಡನೆ ಕೊಂಚ ನಾಚಿಕೆಯಿಂದ ತಲೆಯನ್ನು ಎತ್ತಲಾರದೆ ಕುಳಿತುಕೊಂಡಿರುವು ದನ್ನು ನೋಡಿ, ಭೀಮಾಚಾರ್ಯನು ಅವನನ್ನು ಏಕಾಂತ ಸ್ಥಳಕ್ಕೆ ಕರ ಕೊಂಡು, ಅಲ್ಲಿ ಸ್ವಲ್ಪ ಸಮಯ ಅವನ ಕೂಡೆ ಸಂಭಾಷಣೆ ಮಾಡಿದನು. “ನನ್ನ ಮತ್ತು ನಿನ್ನ ಮೇಲೆ ಪೂರ್ಣವಿಶ್ವಾಸವಿಟ್ಟರುವ ಅಬಲೆಯನ್ನೂ ದಂಡಧಾರಿಯಾದ ಚಂಚಲನೇತ್ರ ಸನ್ಯಾಸಿಯನ್ನೂ ಶುಂಠನಾದ ವೇದ ವ್ಯಾಸನ ಹೊಟ್ಟೆ ಕಿಚ್ಚಿಗೆ ಬಲ ಅರ್ಪಿಸದೆ, ಕ್ಷಿಪ್ರ ಅವರನ್ನು ವಿಮೋಚಿಸುವ ಆಲೋಚಕೆ ಮಾಡುವುದೇ ಲೇಸು” ಎಂದು ಭೀಮಾಚಾರ್ಯನು ಹೇಳಲು ಬಾಲಮುಕುಂದನು ಆ ಮಾತು ಒಪ್ಪಿಕೊಂಡನು ಮಧ್ಯಾಹ್ನಕ್ಕೆ ಭೀಮಾ ಚಾರ್ಯನು ಮರೆಯದೆ ವಾಗ್ದೇವಿಯ ಬಿಡಾರಕ್ಕೆ ಹೋಗಿ ಬೇಕಾದ ಉಪ ಚಾರಗಳನ್ನು ಕೈಕೊಂಡು, ತನ್ನನ್ನು ತೀರ್ಥರೂಪರಂತೆ ನಂಬಿಕೊಂಡಿರುವ ವಾಗ್ದೇವಿಗೆ ಪೂರ್ಣ ಭರವಸೆಯನ್ನು ಹೇಳಿ, ಹೊರಟು ಬಂದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಸಿ
Next post ಬೆಚ್ಚಿಸುವುದೇಕೆ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys