ಭಾವಗಳು, ರಾಗಗಳು, ಬಗೆಬಗೆಯ ಭೋಗಗಳು, ಆವಾವುವಲೆಯುವುವು ಮನುಜನೆದೆಯ, ಕಾಮರಾಯಂಗೆಲ್ಲ ಕುಲಪುರೋಹಿತರಾಗಿ ಹೋಮಾಗ್ನಿಯನು ಬೀಸಿ ಕೆರಳಿಸುವುವು. ನೆನೆನೆನೆದು ಮೈಮರೆತು ನಲಿಯುವೆನು ಮತ್ತೆಮ ತ್ತನುಭವಿಸಿ ಆ ದಿನದ ಸುಖದ ಹೊತ್ತ, ಅಂದು ಬೆಟ್ಟದ ತುದಿಯ ಮುರುಕುದೇಗುಲದಲ್ಲಿ ತಂದು ವಿಧಿ ನನಗಿತ್ರ ಪ್ರೇಮನಿಧಿಯ! ಸಂಜ...

ಬೆರಳ ಕೇಳಿದರೆ ಕೈಯ ಕೊಡುವವನು ಕೈಯ ಕೇಳಿದರೆ ಕೊರಳನೆ ಕೊಡುವವನು ನಮ್ಮ ಏಕಲವ್ಯ ಕೊರಳ ಕೇಳಿದರೆ ಒಡಲನ ಕೊಡನೆ ತನ್ನ ಪ್ರಾಣವ ತೆರನೆ ಹೇ ಗುರು ದ್ರೋಣ ಆ ಶಿಷ್ಯನಿರುವಂಥ ಗುರುಗಳೆ ಗುರುಗಳು ಆ ಕತೆಯಿರುವಂಥ ಭಾರತವೆ ಭಾರತ ಆವತ್ತಿಗಾ ಕತೆ ಈವತ್ತಿಗೇನ...

ವೇದವ್ಯಾಸ ಉಪಾಧ್ಯನ ಮನವಿಯನ್ನು ಇತ್ಯರ್ಥಿಸಲಿಕ್ಕೆ ನೇಮಿಸೋ ಣಾದ ದಿವಸವು ಬಂದಿತು. ಚಂಚಲನೇತ್ರರ ಕಡೆಯಿಂದ ಪಾರುಪತ್ಯಗಾರ ವೆಂಕಟಪತಿ ಆಚಾರ್ಯನು ಸಕಾಲದಲ್ಲಿ ಬಂದು ಸಭೆಯ ಮುಂದೆ ಕೂತು ಕೊಂಡನು. ಬಾಲಮುಕುಂದಾಚಾರ್ಯನು ಅಗ್ರಸ್ಥಾನದಲ್ಲಿ ಕುಳಿತನು. ವ...

ನಾನು ಹೆಣ್ಣಾದೆ ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು. ಸುತ್ತ ನಾಲ್ಕು ಕಡೆ ಹಲ್ಲು ಬಾಯಿ ಹುಟ್ಟಿ ಕೊಂಡವು ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು. ತೆಪ್ಪಗಿರದ ಜನ ಅನುಕಂಪದ ಸೋಗಿನಲ್ಲಿ ಚು...

ಬೇರು ಕೊಯ್ಯುವವರು – ಇವರು ಬೇರು ಕೊಯ್ಯುವವರು ಫಸಲಿನ ಬಗ್ಗೆ ಚಿಂತನೆ ಇಲ್ಲ ಬೇರಿನ ಬಗ್ಗೆಯೆ ಚಿಂತೆಯು ಎಲ್ಲ //ಪ// ನಗುವಾಗ ಅದು ನಗೆಯೊ ಹಗೆಯೊ ಅಳುವಾಗ ಅದು ಪುರುಷರ ಬಗೆಯೊ ಯಾವುದು ಸತ್ಯ ಯಾವುದು ಮಿಥ್ಯ ಬಲ್ಲವರಾರು ಅಂತಿಮ ಸತ್ಯ? ಕಂಕ್...

ಉಂಡು ಆಡುತ್ತಿದ್ದ ಮಗ, ಗೌರಮ್ಮನ ಮುದ್ದು ಮಗ, ಶಾಂತಪ್ಪನ ಕಿರೇಮಗ ಏಕಾ‌ಏಕಿ ಪರಾರಿ, ಎಲ್ಲಿ ಹೋದನ್ರೀ ನಮ್ಮ ಹುಡುಗ? ಎಲ್ಲಿ ಹೋದನ್ರೀ ನಮ್ಮ ಹುಡುಗ? ಇದೇ ಪ್ರಶ್ನೆ; ಇದೇ ಸಂಕಟ; ಇದೇ ಗೋಳು. ಶಾಂತವೀರಪ್ಪನಿಗೆ ಗಂಟಿತ್ತು. ಎತ್ತಿಕೊಂಡು ಹೋಗುವ ವಯಸ...

ನೀರು ನಿಂತರೆ ನಾರುತ್ತದೆ ತೊಳೆಯಬೇಕು ತೊಟ್ಟಿ ಹರಿಸಬೇಕು ಹೊಸ ನೀರು ತೆಗೆಯಬೇಕು ಕಸಕಡ್ಡಿ ಎಲ್ಲಕ್ಕೂ ಮೊದಲು ನಿಂತ ನೀರನ್ನು ನಾರುವ ನೀರನ್ನು ನಿರ್ದಾಕ್ಷಿಣ್ಯವಾಗಿ ಹೊರ ಬಿಡಬೇಕು ಅದೇ ಕಷ್ಟ ಬದಲಾವಣೆ ನಿಸರ್ಗದ ನಿಯಮವಂತೆ ಹೇಳುತ್ತದೆ ಭಗವದ್ಗೀತೆ...

ಕಾಲಪುರುಷನ ಕ್ರೂರಹಸ್ತ ಹಳೆವೈಭವದ ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು; ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ; ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು...

ಕಂದ ತಂದ ಆನಂದ-ಜಾಡಿಸಿ ಒದ್ದ ಹಿರಿಮಗ ಇದಾದ ಮೂರನೇ ದಿನ ಅನುರಾಧಳಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಎಲ್ಲರೂ ಬೇರೆ ಯೋಚನೆಗಳನ್ನು ಬಿಟ್ಟು ಭೂಮಿಗೆ ಇಳಿಯಲಿರುವ ಕಂದನ ನಿರೀಕ್ಷೆಗೊಳಗಾಗುತ್ತಾರೆ. ಅಚಲನನ್ನು ಎಲ್ಲರೂ ಮರೆಯುತ್ತಾರೆ. ಮುದ್ದಾದ ಗಂ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...