ನೀರು ನಿಂತರೆ ನಾರುತ್ತದೆ
ತೊಳೆಯಬೇಕು ತೊಟ್ಟಿ
ಹರಿಸಬೇಕು ಹೊಸ ನೀರು
ತೆಗೆಯಬೇಕು ಕಸಕಡ್ಡಿ
ಎಲ್ಲಕ್ಕೂ ಮೊದಲು
ನಿಂತ ನೀರನ್ನು
ನಾರುವ ನೀರನ್ನು
ನಿರ್ದಾಕ್ಷಿಣ್ಯವಾಗಿ
ಹೊರ ಬಿಡಬೇಕು
ಅದೇ ಕಷ್ಟ
ಬದಲಾವಣೆ ನಿಸರ್ಗದ ನಿಯಮವಂತೆ
ಹೇಳುತ್ತದೆ ಭಗವದ್ಗೀತೆ
ಗಾಳಿಯ ಪ್ರತಿಯೊಂದು
ಬೀಸೂ ಅದನ್ನೇ ಉಸುರುತ್ತದೆ.
*****


















