ನನ್ನ ಗೆಳತಿ ಅವಳು

ನನ್ನ ಗೆಳತಿ ಅವಳು
ಎಂದಂತೆ ಹೆಜ್ಜೆ ಇಟ್ಟಂತೆ
ಲಜ್ಜೆಯ ಬೆಸದಂತೆ
ಅವಳೊಂದು ಮಿಲನ
ಮುಕ್ತ ಮುಕ್ತ ಕಾವ್ಯ

ಹರಿದು ಹೋದಂತೆ
ನದಿ ನದಿಗಳ ಕಡಲ ಸೇರಿ
ಮುತ್ತಾದಂತೆ ಬದುಕಿನ
ಮಜಲುಗಳ ಅಪ್ಪಿಕೊಂಡು
ನನ್ನ ಗೆಳತಿ ಅವಳು ಮುಕ್ತ

ಸಂತೆಯ ಮಳಿಗೆಗಳ
ಸುತ್ತಿ ಸುಳಿದ ಬಣ್ಣ
ಬಣ್ಣದ ಅರಿವು ಕೊಂಡು
ಕೊಂಡೆ ಗೆಳತಿ ನೀನಾದರೂ
ಸರಿಯೇ ಹೇಳು ಅವಳು ಮುಕ್ತ

ಹಸಿರು ನಿನ್ನ ಉಡುಗೆಯು
ಹಳದಿ ಬಣ್ಣ ಎಳೆಗಳಲ್ಲಿ
ಕೆಂಪು ಹೂವುಗಳು ಅರಳಿ
ನಗುತಿರಲು ಗೆಳತಿ ಅವಳ
ಸೆರೆಯಲಿ ನಾನು ಅವಳು ಮುಕ್ತ

ನನ್ನ ಮನವು ಜಗದ
ಉಯ್ಯಾಲೆಯಲ್ಲಿ ಕುಳಿತು
ತೂಗಿ ನಲಿದು ಒಲಿದು
ತಂಗಾಳಿ ಬರಸೆಳೆದು ಹೇಳಿತು
ಅವಳೊಂದು ಮುಕ್ತ ಮುಕ್ತ ಕಾವ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ
Next post ಮದುವೆ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ತಿಮ್ಮರಾಯಪ್ಪನ ಬುದ್ಧಿವಾದ

  ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…