ಓಡುತ್ತಿರುವ
ಹೆಣ್ಣು
ಕೋತಿಯ
ಹೊಟ್ಟೆಯ
ತಳ ಭಾಗದಲ್ಲಿ
ಮರಿ ಕೋತಿ
ತಬ್ಬಿ ಹಿಡಿದು
ಕೂತಿತ್ತು.
ಓಡುತ್ತಿರುವ
ಹೆಣ್ಣು
ಕಾಂಗರೂ
ಹೊಟ್ಟೆಯ
ಚೀಲದಲ್ಲಿ
ಮರಿ ಕಾಂಗರೂ
ಸುಭದ್ರವಾಗಿ
ಕೂತಿತ್ತು,
ಓಡುತ್ತಿರುವ
ಹೆಣ್ಣು
ಮಾನವಳ
ಮರಿ, ಮಗು
ಕೆಲಸದವಳ
ಕೈಲಿತ್ತು.
*****
೨೨-೦೨-೧೯೯೨
ಓಡುತ್ತಿರುವ
ಹೆಣ್ಣು
ಕೋತಿಯ
ಹೊಟ್ಟೆಯ
ತಳ ಭಾಗದಲ್ಲಿ
ಮರಿ ಕೋತಿ
ತಬ್ಬಿ ಹಿಡಿದು
ಕೂತಿತ್ತು.
ಓಡುತ್ತಿರುವ
ಹೆಣ್ಣು
ಕಾಂಗರೂ
ಹೊಟ್ಟೆಯ
ಚೀಲದಲ್ಲಿ
ಮರಿ ಕಾಂಗರೂ
ಸುಭದ್ರವಾಗಿ
ಕೂತಿತ್ತು,
ಓಡುತ್ತಿರುವ
ಹೆಣ್ಣು
ಮಾನವಳ
ಮರಿ, ಮಗು
ಕೆಲಸದವಳ
ಕೈಲಿತ್ತು.
*****
೨೨-೦೨-೧೯೯೨