ಹಾರೈಕೆ

ಮದರಾಸು ನಗರದಲ್ಲಿ ಸೇರಿದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿದ ಹಾರೈಕೆ.

ದ್ರಾವಿಡಗಣ-ತ್ರಿಪದಿ, ಕುರಳು ಧಾಟಿ

೧. ಕನ್ನಡನುಡಿಪಯಿರ್ ಮುನ್ನಡೆ ತೆನೆತುಂಬಿ,
ಪೊನ್ನಡಕಿಲ್ಗಂ ಪೊನ್ನ ಕ್ಕೆ.

೨. ಬೀಡುಂ ಬಯಲ್ ಮಲೆ ಕುಡಿವಾಳ್ಕೆ ಕರ್‍ಬು ಜೇನ್
ಪಾಡುಂ ಪಿಳಿಗೆ ಮೇಣ್ ಬಿಡಿನುಡಿಯುಂ.

೩. ಬರೆವರ ಬಾಯೊಳೊಲವಿರ್‍ಕೆ, ಚೆಲುವಿರ್‍ಕೆ.
ನಲವಿರ್‍ಕೆ, ನಾಡ ಗೆಲವಿರ್‍ಕೆ.

೪. ಧರ್‍ಮದ ತಿರುಳಿರ್‍ಕೆ, ಕರ್ಮದ ಕೆಚ್ಚಿರ್‍ಕೆ,
ಪೆರ್‍ಮೆ, ಬಿಗಿ, ನಗೆ, ಸೊಗಸು.

೫. ಅರುಳಿರ್‍ಕೆ, ವೀಡುಂ, ಅರಂ, ಪುರುಳಿಂಪುಂ,
ಅರಿವಾಟಂ, ಪಾಟಂ ಪೊಸನೋಟಂ,

೬. ಒರ್‍ನಾಡು ಕೂಡುಗೆ ತಾನೇ ಒರ್ ಪೆರ್‌ಲೋಕಂ-
ಕಾರ್‍ನಾಡು ಕಂಡು ಕಾಣ್ಕೆಗಳನ್.

೭. ಕನ್ನಡ ಕಣ್ಮಣಿಗಳ್‌ ಪೆಣ್ಮಣಿಗಳ ಕಟ್ಟಾಳ್ಗಳ್‌
ಚೆನ್ನನೆಯ ಬಾಳ್ಗೆ ಬೆಳಕಕ್ಕೆ.

೮. ಕನ್ನಡ ತಾಯ್ ವಾಳ್ಗೆ, ವಾಳ್ಗೆ ಚೆಂದಮಿಳುಂ,
ಕೂಡಿದೀ ಚೆನ್ನೈಮಾನಾಡು.

೯. ಪಳವಾನೇ! ಪೊಸಎಲರೇ! ತಳಿಮಳೆಯೇ! ಚೆಲ್ವು ಬೆಳೆಯೆ!
ಒಳಗಣ್ಣ ಪಾರ್‍ವೆಯೆ! ನೆನೆಯಿರೆ ನಮ್ಮ ಪೊಲನುಂ.

೧೦. ಶ್ರೀಯೆಂಬೊನೊರ್‍ವನ್ ಅಡಿಯೆನೆನ್ ಕಾಯೆಂದು
ಬೇಳ್ಪನ್ ಪರಮಾತ್ಮನನ್.
*****
೧೯೪೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪರಿಮಿತ ತಾರೆಗಳು
Next post ಇತಿಹಾಸ

ಸಣ್ಣ ಕತೆ

 • ಸಿಹಿಸುದ್ದಿ

  ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…